ರದ್ದಾದ ವಿಶ್ವ ಮಾನವ ಎಕ್ಸ್ಪ್ರೆಸ್ ರೈಲು
ಮೈಸೂರು- ಬೆಳಗಾವಿ ನಡುವೆ ಸಂಚರಿಸುವ ವಿಶ್ವ ಮಾನವ ಎಕ್ಸ್ಪ್ರೆಸ್ ರೈಲು ರದ್ದಾಗಿರುವ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ವಿಶ್ವ ಮಾನವ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಸಂಪೂರ್ಣವಾಗಿ ದೀರ್ಘಾವಧಿಯವರೆಗೆ ರದ್ದುಗೊಳಿಸಲಾಗುತ್ತಿದೆ. ನಿತ್ಯವೂ ಸರಕಾರಿ ಕೆಲಸಕ್ಕೆ ಹೋಗುವವರು, ವಿಧಾನಸೌಧ, ಹೈಕೋರ್ಟ್, ಗಾರ್ಮೆಂಟ್ಸ್ಗೆ ಹೋಗುವವರು ಸೇರಿದಂತೆ ನಾನಾ ವರ್ಗದ ಸುಮಾರು 25,000 ಮಂದಿ ಪ್ರಯಾಣಿಕರು ಪ್ರತಿನಿತ್ಯ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಾರೆ. ಇವರೆಲ್ಲ ಪರದಾಡುವಂತಾಗಿದೆ. ರೈಲ್ವೆ ಇಲಾಖೆ ದೂರದ ಬೆಳಗಾವಿಯಲ್ಲಿ ದುರಸ್ತಿ ಕೆಲಸ ನಡೆಯುತ್ತಿದೆ ಎಂಬ ನೆಪ ಮುಂದಿಟ್ಟುಕೊಂಡು ಮೈಸೂರಿನಿಂದಲೇ ವಿಶ್ವಮಾನವ ರೈಲು ಸೇವೆ ಸ್ಥಗಿತಗೊಳಿಸಿರುವುದು …