ಇಳಿವಯಸ್ಸಿನಲ್ಲೂ ಫುಲ್ ಎನರ್ಜಿಯಲ್ಲಿ ‘ಸಾಮಿ.. ಸಾಮಿ’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಅಜ್ಜಿ- ವೀಡಿಯೋ ವೈರಲ್

ಆಕೆ ಹಣ್ಣು ಹಣ್ಣು ಮುದುಕಿ. ವಯಸ್ಸಾಗಿರಬಹುದು, ಆದರೆ ಆಕೆಯ ಎನರ್ಜಿಗೇನು ಕಮ್ಮಿಯಿಲ್ಲ. ಕೋಲು ಶರೀರದ ಈ ಅಜ್ಜಿ ತನ್ನ ಸೀರೆಯಿಂದ ಕಚ್ಚೆ ಕಟ್ಟಿಕೊಂಡು ಸ್ಪೀಕರ್ ಅಲ್ಲಿ ಹಾಕಿದ ಹಾಡನ್ನು ಎಂಜಾಯ್ ಮಾಡುತ್ತಾ, ಹೆಜ್ಜೆ ಹಾಕುವುದನ್ನು ನೀವು ನೋಡಿದರೆ ಖಂಡಿತವಾಗಿ ಮೂಗಿನ ಮೇಲೆ ಬೆರಳಿಡುತ್ತೀರಿ !!

ವಯಸ್ಸು ಎಂಬುದು ಬರಿ ಸಂಖ್ಯೆ ಅಷ್ಟೇ ಎಂದು ಇಲ್ಲೊಬ್ಬರು ಅಜ್ಜಿ ಪ್ರೂವ್‌ ಮಾಡಿದ್ದಾರೆ. ತೆಲುಗಿನ ಪುಷ್ಪ ಸಿನಿಮಾದ ಸಾಮಿ, ಸಾಮಿ ಹಾಡಿಗೆ ವೃದ್ಧೆಯೊಬ್ಬರು ಕುಣಿದಾಡಿದ್ದಾರೆ. ಈ ವೀಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಿರಿಯ ವಯಸ್ಸಿನಲ್ಲಿ ವೃದ್ಧೆಯ ಹುಮ್ಮಸ್ಸು ನೋಡಿ ಜನರು ಫಿದಾ ಆಗಿದ್ದಾರೆ.


Ad Widget

Ad Widget

Ad Widget

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ ‘ಪುಷ್ಪ: ದಿ ರೈಸ್’ ಸಿಕ್ಕಾಪಟ್ಟೆ ಕ್ರೇಜ್‌ ಸೃಷ್ಟಿಸಿತ್ತು. ಅದರಲ್ಲೂ ಆ ಸಿನಿಮಾದ ಹಾಡುಗಳು ಸೂಪರ್‌ ಹಿಟ್‌ ಕಂಡಿತ್ತು. ಒಂದಿಷ್ಟು ಮಂದಿಗೆ ಡೈಲಾಗ್‌ ಇಷ್ಟವಾದರೆ ಇನ್ನೊಂದಿಷ್ಟು ಮಂದಿಗೆ ಹಾಡಿನ ಕ್ರೇಜ್‌ ಹುಟ್ಟಿಕೊಂಡಿತ್ತು. ಇದೀಗ ಅಂತಹದ್ದೇ ಕ್ರೇಜ್‌ ಹೊಂದಿದ್ದ ವೃದ್ಧೆಯೊಬ್ಬರು ಪುಷ್ಪ ಸಿನಿಮಾದ ʼಸಾಮಿ ಸಾಮಿʼ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ. ಈ ಕ್ಲಿಪ್‌ ಸಖತ್‌ ವೈರಲ್‌ ಆಗುತ್ತಿದೆ.

giedde ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋದ ಎಡಿಟೆಡ್‌ ವರ್ಷನ್‌ನ್ನು ಅಪ್ಲೋಡ್ ಮಾಡಲಾಗಿದೆ. `ಸಾಮಿ ಸಾಮಿ’ ಹಾಡು ಕಿವಿಗೆ ಬೀಳುತ್ತಿದ್ದಂತೆಯೇ ವೃದ್ಧೆಯೊಬ್ಬರು ಕುಣಿದಾಡಿದ್ದಾರೆ. ಈ ಅಜ್ಜಿ ಕುಣಿಯುವ ಸ್ಟೈಲ್‌, ಉತ್ಸಾಹ ಮತ್ತು ಉಲ್ಲಾಸ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ಅಜ್ಜಿಯ ಉತ್ಸಾಹ ಎಲ್ಲರನ್ನೂ ಬಹುವಾಗಿ ಸೆಳೆದಿದೆ. ಹೀಗಾಗಿ, ಈ ಅಜ್ಜಿಯನ್ನು ಹೊಗಳದೇ ಇರಲು ನೆಟ್ಟಿಗರಿಗೆ ಸಾಧ್ಯವಾಗಿಲ್ಲ. ಸದ್ಯ ಈ ವೀಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಎಲ್ಲರಲ್ಲೂ ಮಂದಹಾಸ ಮೂಡಿಸುವಲ್ಲಿ ಈ ಉತ್ಸಾಹಿ ಅಜ್ಜಿ ಯಶಸ್ವಿಯಾಗಿದ್ದಾರೆ.  ಉಲ್ಲಾಸದಿಂದ ವೃದ್ಧರು ಡ್ಯಾನ್ಸ್‌ ಮಾಡೋದನ್ನು ನೋಡಿದರೆ “ಈ ವಯಸ್ಸಿನಲ್ಲಿಯೇ ಹೀಗೆ ಕುಣಿದಾಡುವ ಇವರು, ಯೌವ್ವನದಲ್ಲಿ ಇನ್ನೆಷ್ಟು ಹುಮ್ಮಸ್ಸಿನಿಂದ ಇರುತ್ತಿದ್ದರೋ!?” ಎಂಬ ಪ್ರಶ್ನೆ ನಿಮ್ಮಲ್ಲೂ  ಮೂಡಿರಬಹುದು.

Leave a Reply

error: Content is protected !!
Scroll to Top
%d bloggers like this: