Canara Bank ನಲ್ಲಿ ವಿವಿಧ ಹುದ್ದೆ | ಪದವೀಧರರಿಗೆ ಉದ್ಯೋಗಾವಕಾಶ |  ಅರ್ಜಿ ಸಲ್ಲಿಸಲು ಮೇ.20 ಕೊನೆ ದಿನಾಂಕ|

ಕೆನರಾ ಬ್ಯಾಂಕ್ ಅಂಗಸಂಸ್ಥೆಯಾಗಿರುವ ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.  ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೂರು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮೀಸಲಾತಿ ಕೋರುವವರು ಅಗತ್ಯ ದಾಖಲೆ ಸಲ್ಲಿಸತಕ್ಕದ್ದು.


Ad Widget

Ad Widget

Ad Widget

ಬೆಂಗಳೂರಿನಲ್ಲಿ ಜಾಬ್ ಆಫರ್ ಇದ್ದು, ಸ್ಥಳಿಯ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-05-2022

ಹುದ್ದೆಗಳ ವಿವರ: ಡೆಪ್ಯುಟಿ ಮ್ಯಾನೇಜರ್-2, ಅಸಿಸ್ಟೆಂಟ್ ಮ್ಯಾನೇಜರ್-2 (ಬೆಂಗಳೂರು), ಅಸಿಸ್ಟೆಂಟ್ ಮ್ಯಾನೇಜರ್ (ಬ್ಯಾಕ್ ಆಫೀಸ್)-1, ಮತ್ತು ಜೂನಿಯರ್ ಆಫೀಸರ್ -1(ಬೆಂಗಳೂರು), ಜೂನಿಯರ್ ಆಫೀಸರ್ (ಬ್ಯಾಕ್ ಆಫೀಸ್)-1 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಎಲ್ಲ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ.

ವಯೋಮಿತಿ: ಮೇಲೆ ನೀಡಲಾದ ಎಲ್ಲಾ ಹುದ್ದೆಗಳಿಗೂ 20ರಿಂದ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್, ಇನ್‌ಮೇರ್ಷನ್ ಸೈನ್ಸ್‌ನಲ್ಲಿ ಬಿಇ/ ಬಿಟೆಕ್/ಎಂಸಿಎ ಪದವಿ ಪಡೆದಿರಬೇಕು. ಶೇ.50 ಅಂಕದೊಂದಿಗೆ ಅಭ್ಯರ್ಥಿಗಳು ತೇರ್ಗಡೆಯಾಗಿರಬೇಕು. ಕನಿಷ್ಠ 1ರಿಂದ 3 ವರ್ಷ ವೃತ್ತಿ ಅನುಭವ ಇರಬೇಕು.

ವೇತನ: ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದವರಿಗೆ 44,000 ರೂ., ಅಸಿಸ್ಟೆಂಟ್ ಮ್ಯಾನೇಜರ್‌ಗೆ 32,500 ರೂ. ಹಾಗೂ ಜೂನಿಯರ್ ಆಫೀಸರ್‌ಗೆ 34,000 ಮಾಸಿಕ ವೇತನದೊಂದಿಗೆ ಇತರ ಭತ್ಯೆ ಇರಲಿದೆ.

ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ: THE GENERAL MANAGER, HR DEPARTMENT, CANARA BANK SECURITIES LTD, 7 TH FLOOR, MAKER CHAMBER III NARIMAN POINT MUMBAI – 400021

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Reply

error: Content is protected !!
Scroll to Top
%d bloggers like this: