ಗೂಗಲ್ ಮ್ಯಾಪ್ ನಲ್ಲಿ ಕಂಡುಬಂತು ಕೈ-ಕಾಲು, ತಲೆಯೇ ಇಲ್ಲದ ಆಕೃತಿ !!| ಫೋಟೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು
ಪ್ರಪಂಚದಲ್ಲಿ ದಿನಕ್ಕೊಂದು ರೀತಿಯ ವಿಚಿತ್ರ ಘಟನೆಗಳ ದೃಶ್ಯಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ಹಾಸ್ಯಾಸ್ಪದ ಘಟನೆಗಳಾದರೆ ಇನ್ನು ಕೆಲವು ಘಟನೆಗಳು ಎಂತಹವರನ್ನಾದರೂ ಬೆಚ್ಚಿಬೀಳಿಸುತ್ತದೆ. ಅಂತೆಯೇ ಇದೀಗ ಅಂತಹುದೇ ಫೋಟೋ ಒಂದು ವೈರಲ್ ಆಗಿದ್ದು, ಅದನ್ನು ನೋಡಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!! ಹೌದು. ನ್ಯೂಯಾರ್ಕ್ನ ಬಹುಭದ್ರತೆಯ ಬೀದಿಯಲ್ಲಿ ಕೈ- ಕಾಲುಗಳಿಲ್ಲದ ಅಷ್ಟೇ ಏಕೆ ತಲೆಯೇ ಇಲ್ಲದ ಆಕೃತಿಯ ಚಿತ್ರಗಳು ವೈರಲ್ ಆಗಿವೆ. ಇದನ್ನು ನೋಡಿದ ಜನರೆಲ್ಲ ತಲೆಕೆಡಿಸಿಕೊಂಡಿದ್ದಾರೆ. ಗೂಗಲ್ ಮ್ಯಾಪ್ಗಳಲ್ಲಿ ಕಾಣಿಸಿಕೊಂಡ ಈ ಚಿತ್ರಗಳು ಇದೀಗ ವೈರಲ್ ಆಗಿವೆ. …