ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಅಭಿವೃದ್ಧಿ ಕಾರ್ಯ ಸಹಿಸದೆ ಅಪಪ್ರಚಾರ | ಕೈಲಾಗದವರು ಮೈ ಪರಚಿಕೊಂಡರು !
ಕಡಬ : ಅನ್ಯ ಕೋಮಿನ ಯುವಕನೊಂದಿಗಿದ್ದ ಹಿಂದೂ ಹುಡುಗಿಯ ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ವಿಚಾರದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಮಾಡಿರುವ ಆರೋಪ ವ್ಯವಸ್ಥಿತ ಷಡ್ಯಂತರವಾಗಿದ್ದು, ಶಾಸಕ ಸಂಜೀವ ಮಠಂದೂರು ವಿರೋಧಿಗಳು ಮಾಡಿರುವ ದುಷ್ಕೃತ್ಯವಾಗಿದೆ ಎಂದು ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗುಂಡ್ಯ ಹೇಳಿದ್ದಾರೆ. ಅವರು ಇಂದು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲ್ಲಿನ ಘಟನೆಗೆ ನಾನು ಪ್ರತ್ಯಕ್ಷದರ್ಶಿಯಾಗಿದ್ದೇನೆ. ಒಬ್ಬ ಸಜ್ಜನ ಶಾಸಕ …