ಎದುರಾಗಿದೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ!

ಕೊರೊನಾ ವೈರಸ್‌ ಸೋಂಕು ಸ್ವಲ್ಪ ತಗ್ಗಿದ ನಿರಾಳತೆಯಲ್ಲಿರುವಾಗ ಈಗ ಮತ್ತೆ ಹೊಸ ಹೊಸ ಸೂಕ್ಷ್ಮಜೀವಿಗಳಿಂದ ಆತಂಕ ಎದುರಾಗಿದೆ. ಶೀಲಿಂದ್ರ ಸೊಂಕು !

ಬ್ರೂವರ್ಸ್ ಯೀಸ್ಟ್, ಅಣಬೆಗಳು, ರೋಕ್ಫೋರ್ಟ್ ಚೀಸ್ ಮತ್ತು ಪೆನ್ಸಿಲಿನ್‌ನಂತಹ ಪ್ರತಿಜೀವಕಗಳ ಉತ್ಪಾದನೆ ಸೇರಿದಂತೆ ಶಿಲೀಂಧ್ರಗಳ ಬಗ್ಗೆ  ತಿಳಿದು ಬಂದಿದೆ. ಭಾರತದಲ್ಲಿ ಆಕ್ರಮಣಕಾರಿ ಶೀಲಿಂದ್ರ ಸೋಂಕುಗಳು  ಅಪಾಯಕಾರಿಯೇ.!


Ad Widget

Ad Widget

Ad Widget

2021ರ ಮಧ್ಯದಲ್ಲಿ ಕೊರೊನಾದ ಗಂಭೀರ ಲಕ್ಷಣಗಳಿಂದ ಬಳಲುತ್ತಿದ್ದ ಕೆಲವು ರೋಗಿಗಳಲ್ಲಿ ಶಿಲೀಂಧ್ರ ಸೋಂಕು ಪತ್ತೆಯಾಗಿತ್ತು. ಕೋವಿಡ್‌ ನಿಂದ ಚೇತರಿಸಿಕೊಂಡವರು ಕೂಡ ಫಂಗಸ್‌ ದಾಳಿಗೆ ತುತ್ತಾಗಿದ್ದರು. ಆಸ್ಪರ್ಜಿಲೊಸಿಸ್ ನಿಂದಾಗಿ ರೋಗಿಗಳಲ್ಲಿ ಉಸಿರಾಟದ ಸೋಂಕು ಕಂಡುಬಂದಿತ್ತು. ಇದೆಲ್ಲದರಿಂದ ಗಂಭೀರವಾದ ಶಿಲೀಂಧ್ರಗಳ ಸೋಂಕು-ಮ್ಯೂಕೋರ್ಮೈಕೋಸಿಸ್, ದೀರ್ಘಕಾಲದ ತೀವ್ರ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗುತ್ತದೆ.

ಶಿಲೀಂಧ್ರಗಳು ಭೂಮಿಯ ಮೇಲಿನ ಅತ್ಯಂತ ವೈವಿಧ್ಯಮಯ ಮತ್ತು ಬಹುಮುಖ ಜೀವಿಗಳಲ್ಲೊಂದು. ಸೌತ್‌ ವೆಸ್ಟರ್ನ್‌ ಯುನೈಟೆಡ್ ಸ್ಟೇಟ್ಸ್, ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಈ ಶಿಲೀಂಧ್ರಗಳ ಹಾವಳಿ ಹೆಚ್ಚಾಗಿದೆ. ಈ ಶಿಲೀಂಧ್ರ ಮಣ್ಣಿನಲ್ಲಿ ಕಂಡುಬರುತ್ತದೆ. ಕೋಕ್ಸಿಡಿಯೋಡೋಮೈಕೋಸಿಸ್ ಎಂದು ಇದನ್ನು ಕರೆಯಲಾಗುತ್ತದೆ. ಇವುಗಳಿಂದ ಪ್ರಾಣಿಗಳು ಮತ್ತು ಮನುಷ್ಯರಿಗೆ ಅಪಾಯವಿದೆ ಅನ್ನೋದು  ದೃಢಪಟ್ಟಿದೆ.

ಇದು ವಸ್ತುಗಳ ಮೇಲ್ಮೈ ಮೂಲಕ, ಆಸ್ಪತ್ರೆಯ ವಾತಾವರಣದಲ್ಲಿ, ನೈಸರ್ಗಿಕ ಪರಿಸರ ವ್ಯವಸ್ಥೆಗಳಲ್ಲಿ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಶಿಲೀಂಧ್ರಗಳ ಸೋಂಕು ತಡೆಗಟ್ಟಲು ಆಂಟಿಮೈಕ್ರೊಬಿಯಲ್‌ಗಳ ಬಳಕೆಯನ್ನು ನಿರ್ಬಂಧಿಸಬೇಕು.

Leave a Reply

error: Content is protected !!
Scroll to Top
%d bloggers like this: