Daily Archives

March 21, 2022

ಅಡಿಕೆ ಕುರಿತು ವದಂತಿ ಹಬ್ಬಬೇಡಿ -ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು :ಯಾರೂ ಅಡಿಕೆ‌ ಕುರಿತು ಇಲ್ಲ ಸಲ್ಲದ ಹೇಳಿಕೆ ನೀಡಬಾರದು, ಇದರಿಂದ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಹೇಳಿಕೆ ನೀಡಿದ್ದಾರೆ.ವಿಧಾನಸೌಧದಲ್ಲಿ ಮಾತನಾಡಿದ ಅವರು,ಅಡಿಕೆ‌ ಬ್ಯಾನ್ ಮಾಡುವ ವದಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ!! ಇಬ್ಬರು ಸ್ಥಳದಲ್ಲೇ ಮೃತ್ಯು-ಓರ್ವ ಗಂಭೀರ

ಗುಜರಿ ಅಂಗಡಿಯಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಒಂದು ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಮಾರ್ಚ್ 21 ರ ಮುಂಜಾನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ನಡೆದಿದೆ.ತಾಲೂಕಿನ ಫಕೀರ್ನಕಟ್ಟೆ ಎಂಬಲ್ಲಿಯ ಗುಜರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು,ಸ್ಫೋಟದ ತೀವ್ರತೆಗೆ ಇಬ್ಬರು ಮೃತಪಟ್ಟರೆ

ಸೆಖೆಗಾಲದಲ್ಲಿ ಬೆವರು ಗುಳ್ಳೆ ಸಮಸ್ಯೆಯಿಂದ ಬೇಸತ್ತಿದ್ದೀರಾ ? ಇಲ್ಲಿದೆ ಕೆಲವೊಂದು ಮನೆಮದ್ದು!

ಬೇಸಿಗೆ ಬಂತೆಂದರೆ ಬೆವರು, ಸೆಖೆ ಹೆಚ್ಚಾಗುತ್ತಲೇ ಇರುತ್ತದೆ. ಚರ್ಮದಲ್ಲಿ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಅಥವಾ ಇದನ್ನು ಬೆವರು ಸಾಲೆ ಎಂದೂ ಕರೆಯುತ್ತಾರೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುವುದು ಸರ್ವೇಸಾಮಾನ್ಯ.ಹೆಚ್ಚಾಗಿ ಸಣ್ಣ ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬರುತ್ತದೆ.

ಉಡುಪಿ : ಕಾಡು ಹಂದಿಗೆ ಬೈಕ್ ಡಿಕ್ಕಿ | ಸಹ ಸವಾರನಿಗೆ ಗಂಭೀರ ಗಾಯ‌!

ಉಡುಪಿ: ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡು ಹಂದಿಯೊಂದು ರಸ್ತೆ ಅಡ್ಡ ಬಂದ ಪರಿಣಾಮ ಗಲಿಬಿಲಿಗೊಂಡ ಬೈಕ್ ಸವಾರ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಬೈಕಿನಲ್ಲಿದ್ದ ಸಹಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆಯೊಂದು ನಡೆದಿದೆ.ಉಡುಪಿ ಜಿಲ್ಲೆಯ ಮುದೂರು ಗ್ರಾಮದ

ಕೇವಲ 60 ದಿನಗಳಲ್ಲಿ ಬೆಳೆಯುವ ಈ ಬೆಳೆಗೆ ಮಾರುಕಟ್ಟೆಯಲ್ಲಿದೆ ಭಾರೀ ಡಿಮ್ಯಾಂಡ್ !! | ರೈತರಿಗೆ ಉತ್ತಮ ಆದಾಯ ತಂದು…

ರೈತ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಕೃಷಿಯೊಂದಿಗೆ ಲಾಭ ಪಡೆಯಬಹುದಾದ ಬೆಳೆಗಳನ್ನೂ ಬೆಳೆಯುತ್ತಾನೆ. ಸರ್ಕಾರದಿಂದ ಅದಕ್ಕೆ ಪೂರಕವಾದ ಹಲವು ಯೋಜನೆಗಳು ಜಾರಿಗೆ ಬಂದಿದ್ದು, ಕೃಷಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಹೀಗಿರುವಾಗ ರೈತರಿಗೆ ನಿವ್ವಳ ಲಾಭ ತಂದುಕೊಡುವ ಬೀಟ್ರೂಟ್ ಕೃಷಿಯ

ಹಿರಿಯ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ ಅವರಿಗೆ ಪ್ರತಿಷ್ಟಿತ ಸಹಕಾರ ರತ್ನ ಪ್ರಶಸ್ತಿ ಪ್ರದಾನ

ಸವಣೂರು : ಪುತ್ತೂರು ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ,ಹಿರಿಯ ಸಹಕಾರಿ ಧುರೀಣ ,ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಅವರಿಗ ಸಹಕಾರಿ ಕ್ಷೇತ್ರದ ಅನುಪಮ ಸೇವೆಯನ್ನು ಪರಿಗಣಿಸಿ ಪ್ರತಿಷ್ಟಿತ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭೂಹಗರಣ ಪ್ರಕರಣ : ಸಂಸದ, ಖ್ಯಾತ ನಟನ ಸಹೋದರನನ್ನು ಅರೆಸ್ಟ್ ಮಾಡಿದ ಪೊಲೀಸರು !

ಭೂ ಹಗರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ, ಸಂಸದ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಅಸಿಂಧು ಎಂದು ಕೋರ್ಟ್ ಹೇಳಿದ್ದ ಭೂಮಿಯೊಂದನ್ನು ಮಾರಾಟ ಮಾಡಿರುವ ಆರೋಪ ಸುನೀಲ್ ಅವರ ಮೇಲಿದೆ. ಇವರ ವಿರುದ್ಧ ಕೊಯಮತ್ತೂರಿನ ಜಿಎನ್ ಮಿಲ್ಸ್ ನಿವಾಸಿ

ಮಾಸ್ಕ್ ಕಡ್ಡಾಯ ನಿಯಮ ಕೈಬಿಡಲು ಕೇಂದ್ರಕ್ಕೆ ಸಲಹೆ ನೀಡಿದ ತಜ್ಞರು !! | ಏಷ್ಯಾ ಹಾಗೂ ಯುರೋಪ್ ದೇಶಗಳಲ್ಲಿ ಕೋವಿಡ್…

ಏಷ್ಯಾ ಮತ್ತು ಯೂರೋಪ್ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ತಜ್ಞರು ಸರ್ಕಾರಕ್ಕೆ ಆಶ್ಚರ್ಯಕರ ಸಲಹೆ ನೀಡಿದ್ದು, ಮಾಸ್ಕ್‌ ಕಡ್ಡಾಯದ ನಿಯಮ ಕೈಬಿಡಬೇಕು ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ಏಷ್ಯಾ ಮತ್ತು ಯುರೋಪ್‌

ಇಂದು ಸುಳ್ಯದಲ್ಲಿ ಆಪ್ ಕಾರ್ಯಕರ್ತರ ಸಮಾವೇಶ

ಸುಳ್ಯ : ಆಮ್ ಆದ್ಮಿ ಪಕ್ಷದ ಪಂಜಾಬ್ ಗೆಲುವನ್ನು ಆಚರಿಸಲು ಮತ್ತು ಸ್ಥಳೀಯವಾಗಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಮಾರ್ಚ್ 21 ಸೋಮವಾರದಂದು ಪಕ್ಷದ ಕಾರ್ಯಕರ್ತರ ಸಭೆ ಮತ್ತು ಸಾರ್ವಜನಿಕ ಸಭೆಯನ್ನು ಹಮ್ಮಿಕೊಂಡಿದೆ.ಮದ್ಯಾಹ್ನ 2.30 ಕ್ಕೆ ಕಾನತ್ತಿಲ

ಸುಳ್ಯ:ಮಾರಕಾಸ್ತ್ರ ಸಹಿತ ಸಂಪಾಜೆಯ ಅರ್ಚಕರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ತಂಡ!! ಬೊಂಡ ಕೆತ್ತುವ ಕತ್ತಿ ಹಿಡಿದು…

ಸುಳ್ಯ: ದರೋಡೆಕೋರರ ತಂಡವೊಂದು ಮಾರಾಕಸ್ತ್ರ ಹಿಡಿದು ಮನೆಗೆ ನುಗ್ಗಿ ಬೆದರಿಸಿ ಚಿನ್ನ ಸಹಿತ ನಗದು ದೋಚಿದ ಬೆಚ್ಚಿ ಬೀಳಿಸುವ ಘಟನೆಯೊಂದು ಸುಳ್ಯ ತಾಲೂಕಿನ ಸಂಪಾಜೆ ಎಂಬಲ್ಲಿ ಮಾರ್ಚ್ 20 ರ ರಾತ್ರಿ ನಡೆದಿದೆ.ಸಂಪಾಜೆಯ ಅಂಬರೀಶ್ ಭಟ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ