Cocoa Price Rise: ಕರಾವಳಿ ಜನಕ್ಕೆ ಜಾಕ್ ಪಾಟ್ – ಚಿನ್ನದ ಬೆಲೆ ಪಡೆದ ಕೊಕ್ಕೋ !!

Cocoa Price Rise: ಅಡಿಕೆ, ಕಾಫಿ ಬೆಲೆಗಳಲ್ಲಿ ಭಾರೀ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ಕೊಕ್ಕೋ ಬೆಳೆಯ ಧಾರಣೆ ಕೂಡ ದಿಢೀರ್‌ ಏರಿಕೆ ಆಗಿದ್ದು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಮೂಲಕ ಕರಾವಳಿ ಜನಕ್ಕೆ ಜಾಕ್ ಪಾಟ್ ಹೊಡೆದಿದೆ.

ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ- ಎದುರಾಯ್ತು ಹೊಸ ಸಮಸ್ಯೆ !!

ಮಾರುಕಟ್ಟೆಯಲ್ಲಾಗುತ್ತಿರುವ ಬೆಳವಣಿಗೆ ಕೊಕ್ಕೋ (Cocoa) ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ. ಕಿಲೋವೊಂದಕ್ಕೆ 250 ರಿಂದ 300ರ ಆಸುಪಾಸಿನಲ್ಲಿದ್ದ ಕೊಕ್ಕೋ ಬೆಲೆ‌ ಇದೀಗ ಧಿಡೀರ್ ಎಂದು ಕಿಲೋವೊಂದಕ್ಕೆ 1000 ರೂಪಾಯಿಯತ್ತ ಮುನ್ನುಗ್ಗುವ ಮೂಲಕ ಇತಿಹಾಸ ಬರೆದಿದೆ.

ಇದನ್ನೂ ಓದಿ: Success Story: ಈ ಯುವಕ ಸಣ್ಣ ವಯಸ್ಸಿಗೆ ತಿಂಗಳಿಗೆ 50,000 ದುಡಿಯುತ್ತಿದ್ದಾರಂತೆ! ಹೇಗೆ ಗೊತ್ತಾ?

ಕೃಷಿ ಮಾರುಕಟ್ಟೆ ತಜ್ಞರ ಅಭಿಪ್ರಾಯದ ಪ್ರಕಾರ ಇದೀಗ ಎಲ್ಲಾ ಸಾಧ್ಯತೆಗಳನ್ನೂ ಮೀರಿ ಒಣ ಕೊಕ್ಕೋ ಕೆ.ಜಿ.ಗೆ. ರೂ.1000 ದಾಟುವ ಹಾಗೂ ಹಸಿ ಕೊಕ್ಕೋ ಕೆ.ಜಿ.ಗೆ ರೂ.300 ದಾಟುವ ಸಾಧ್ಯತೆ ಇದೆ ಎನ್ನುತ್ತಾರೆ.

ಒಮ್ಮೆಲೆ ಬೆಲೆ ಏರಿಕೆಗೆ ಕಾರಣವೇನು?

ಮಾರುಕಟ್ಟೆ ಅವಕಾಶ ಕಡಿಮೆ ಇರುವುದು ಹಾಗೂ ಕೊಕ್ಕೋದ ಪ್ರಮುಖ ಬೆಳೆಗಾರ ಆಫ್ರಿಕಾ(Africa) ರಾಷ್ಟ್ರಗಳಲ್ಲಿ ವೈರಸ್ ರೋಗದ ದಾಳಿಗೆ ಒಳಗಾಗಿ ಕೊಕ್ಕೋ ಬೆಳೆ ನಾಶವಾಗಿ ಕೆಲವು ವರ್ಷಗಳ ಮಟ್ಟಿಗೆ ಬೆಳೆ ತೆಗೆಯಲು ಸಾಧ್ಯವಾಗದೇ ಇರುವುದು ಈ ಹೊಸ ಬೆಳವಣಿಗೆಗೆ ಕಾರಣವಾಗಿದೆ.

Leave A Reply

Your email address will not be published.