Day: December 21, 2021

ಪರಮಹಿಳೆಯ ಬಯಸಿದಾತನ ಕತ್ತಿಗೆ ಬಿತ್ತು ಮಚ್ಚು!! ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾಗಿದ್ದರೂ ಬೆನ್ನು ಬಿಡದ ಬೇತಾಳನಂತೆ ಆಡಿದಾತನಿಗೆ ಟಿಕೆಟ್ ಕೊಟ್ಟ ಗಂಡ

ಅದಾಗಲೇ ಮದುವೆಯಾಗಿದ್ದ ಮಹಿಳೆಯೋರ್ವಳ ಸಹವಾಸ ಬಯಸಿ ಆಕೆಯ ಗಂಡನ ಮಚ್ಚಿನೇಟಿಗೆ ಇಲ್ಲೋರ್ವ ಇಹಲೋಕವನ್ನೇ ತ್ಯಜಿಸಿದ್ದಾನೆ. ಮೊದಲು ತಾನು ಪ್ರೀತಿಸುತ್ತಿದ್ದ ಮಹಿಳೆಗೆ ಬೇರೆ ವಿವಾಹವಾದ ವಿಚಾರ ಅರಿತಿದ್ದರೂ ಆ ಮಹಿಳೆಯ ಸಹವಾಸ ಬಯಸಿದ್ದೇ ಆತನ ಅಂತ್ಯಕ್ಕೆ ಕಾರಣವಾಗಿದೆ.ಮೃತ ಯುವಕನನ್ನು 32 ವರ್ಷದ ವೆಂಕಟರಮಣ ಯಾನೇ ವೆಂಕಿ ಎಂದು ಗುರುತಿಸಲಾಗಿದೆ. ಘಟನೆ ವಿವರ: ಮೃತ ಯುವಕ ವೆಂಕಿ ಈ ಮೊದಲು ಯುವತಿಯೊರ್ವಳನ್ನು ಪ್ರೀತಿಸುತ್ತಿದ್ದ. ಆಕೆಯೂ ಈತನೊಂದಿಗೆ ಸಲುಗೆಯಿಂದಲೇ ಇದ್ದಳು. ಆದರೆ ಆಕೆಗೆ ರಾಕೇಶ್ ಎಂಬ ಇನ್ನೊಬ್ಬ ಯುವಕನೊಂದಿಗೆ ವಿವಾಹ ನಡೆದಿತ್ತು.ಇದರಿಂದ …

ಪರಮಹಿಳೆಯ ಬಯಸಿದಾತನ ಕತ್ತಿಗೆ ಬಿತ್ತು ಮಚ್ಚು!! ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾಗಿದ್ದರೂ ಬೆನ್ನು ಬಿಡದ ಬೇತಾಳನಂತೆ ಆಡಿದಾತನಿಗೆ ಟಿಕೆಟ್ ಕೊಟ್ಟ ಗಂಡ Read More »

ಕಾರ್ಕಳ: ಕಾಲೇಜಿಗೆ ತೆರಳಿದ್ದ ಯುವತಿ ಮನೆಗೆ ಹಿಂದಿರುಗದೆ ನಾಪತ್ತೆ!! ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು- ಪತ್ತೆಗೆ ಮನವಿ

ಕಾರ್ಕಳ: ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯೋರ್ವಳು ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಆಕೆಯ ಪೋಷಕರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹುಕಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ(18) ನಾಪತ್ತೆಯಾದ ಯುವತಿಯಾಗಿದ್ದು, ಈಕೆಯು 5 ಅಡಿ 2 ಇಂಚು ಎತ್ತರ,ಗೋಧಿ ಮೈಬಣ್ಣ ಹಾಗೂ ತುಳು-ಕನ್ನಡ ಭಾಷೆ ಮಾತನಾಡುತ್ತಾಳೆ. ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ಕಾರ್ಕಳ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.ಠಾಣಾ ದೂರವಾಣಿ ಸಂಖ್ಯೆ …

ಕಾರ್ಕಳ: ಕಾಲೇಜಿಗೆ ತೆರಳಿದ್ದ ಯುವತಿ ಮನೆಗೆ ಹಿಂದಿರುಗದೆ ನಾಪತ್ತೆ!! ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು- ಪತ್ತೆಗೆ ಮನವಿ Read More »

ಖಿನ್ನತೆ ಎಚ್ಚರ.. ಖಿನ್ನತೆ ಬರೀ ಮನಸ್ಸನ್ನು ಮಾತ್ರ ಕಾಡಲ್ಲ..ನಿಮ್ಮ ದೇಹವನ್ನೇ ಹಾಳು ಮಾಡುತ್ತೆ!

ಖಿನ್ನತೆ ಎಚ್ಚರ.. ಖಿನ್ನತೆ ಬರೀ ಮನಸ್ಸನ್ನು ಮಾತ್ರ ಕಾಡಲ್ಲ..ನಿಮ್ಮ ದೇಹವನ್ನೇ ಹಾಳು ಮಾಡುತ್ತೆ! ನಮ್ಮ ಮನಸ್ಸಿನ ಆರೋಗ್ಯ ಸದಾ ನಮ್ಮ ದೇಹದ ಮೇಲಿನ ಆರೋಗ್ಯಕ್ಕೂ ಪರಿಣಾಮ ಬೀರುತ್ತಲೇ ಇರುತ್ತದೆ… ನಮ್ಮ ಮೆದುಳು ಸದಾ ಚಟುವಟಿಕೆಯಿಂದ ಇರುವುದರಿಂದ ದೇಹದಲ್ಲಿನ ಹಲವು ಭಾಗಗಳು ಸಹ ಆರೋಗ್ಯದಾಯಕವಾಗಿರುವವು.. ಆದ್ರೆ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯ ದೇಹದಲ್ಲಿ ಹಲವು ಬದಲಾವಣೆಗಳು ಹಾಗೂ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿ ಮಾನಸಿಕವಾಗಿ ಆಘಾತಗೊಂಡಿರುತ್ತಾನೆ.. ಜೀವನದಲ್ಲಿ ಯಾವುದರ ಮೇಲೂ ಉತ್ಸಾಹ ಇರುವುದಿಲ್ಲ.ಸದಾ …

ಖಿನ್ನತೆ ಎಚ್ಚರ.. ಖಿನ್ನತೆ ಬರೀ ಮನಸ್ಸನ್ನು ಮಾತ್ರ ಕಾಡಲ್ಲ..ನಿಮ್ಮ ದೇಹವನ್ನೇ ಹಾಳು ಮಾಡುತ್ತೆ! Read More »

ಬಂಟ್ವಾಳ : ಬೈಕ್‌ಗೆ ಡಿಕ್ಕಿಯಾಗಿ ಆಟೋರಿಕ್ಷಾ ಪಲ್ಟಿ ,ಬೈಕ್ ಸವಾರ ಗಂಭೀರ

ಬಂಟ್ವಾಳ : ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ಸಂಭವಿಸಿದೆ. ಮಾಣಿಯಿಂದ ಗಡಿಯಾರ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಉಪ್ಪಿನಂಗಡಿಯಿಂದ ಬಂದ ಬೈಕ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ರಿಕ್ಷಾ ರಸ್ತೆಯಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಳ್ತಂಗಡಿ: ತಹಶೀಲ್ದಾರ್ ಮಹೇಶ್ .ಜೆ ಅವರ ವರ್ಗಾವಣೆ ರದ್ದು

ಬೆಳ್ತಂಗಡಿಯ ತಹಶೀಲ್ದಾರ್ ಮಹೇಶ್ .ಜೆ. ಅವರ ವರ್ಗಾವಣೆಯನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ಚಾಮರಾಜನಗರಕ್ಕೆ ವರ್ಗಾವಣೆ ಮಾಡಿದ ಆದೇಶ ರದ್ದಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಡಿ 16 ರಂದು ಬೆಳ್ತಂಗಡಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್ ಮಹೇಶ್ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆಗೊಳಿಸಿ ಆದೇಶ ಬಂದಿತ್ತು. ಆದರೆ ಇದೀಗ ವರ್ಗಾವಣೆಯನ್ನು ತಕ್ಷಣ ರದ್ದು ಗೊಳಿಸಿ, ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದುವರಿಯುವಂತೆ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಕೊರೆಯುವ ಚಳಿಯಲ್ಲಿ ನವಜಾತ ಶಿಶುವನ್ನು ಹೊಲದಲ್ಲಿ ಬಿಟ್ಟು ಹೋದ ವ್ಯಕ್ತಿ !! |ರಾತ್ರಿಯಿಡೀ ಕಾದು ಮಗುವಿನ ಆರೈಕೆ ಮಾಡಿದ ಬೀದಿ ನಾಯಿಗಳು

ಈ ಕೊರೆಯುವ ಚಳಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ನವಜಾತ ಶಿಶುವೊಂದನ್ನು ಹೊಲದಲ್ಲಿ ಬಿಟ್ಟು ಹೋಗಿದ್ದು, ರಾತ್ರಿಯಿಡೀ ನಾಯಿಯೊಂದು ಆ ಕಂದಮ್ಮನನ್ನು ಆರೈಕೆ ಮಾಡಿರುವ ಹೃದಯವಿದ್ರಾವಕ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಮುಂಗೇಲಿ ಜಿಲ್ಲೆಯ ಲೊರ್ಮಿಯ ಸರಿಸ್ಟಾಲ್ ಗ್ರಾಮದ ಹೊಲವೊಂದರಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗುವನ್ನು ಹೊಲದಲ್ಲಿ ಬಿಟ್ಟು ಹೋಗಲಾಗಿದ್ದು, ರಾತ್ರಿಯಿಡೀ ನಾಯಿಯೊಂದು ಆರೈಕೆ ಮಾಡುತ್ತಿತ್ತು. ಮಗುವಿನ ಅಳುವನ್ನು ಕೇಳಿದ ಗ್ರಾಮಸ್ಥರು ರಕ್ಷಿಸಿದ್ದಾರೆ. ಮಗುವನ್ನು ಹೊಲದಲ್ಲಿ ಬಿಟ್ಟಿದ್ದಕ್ಕಾಗಿ ಜನರು ವಿರೋಧ ವ್ಯಕ್ತಪಡಿಸಿದ್ದು, ಪ್ರಾಣಿಯು ತೋರಿದ ಸಹಾನುಭೂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ …

ಕೊರೆಯುವ ಚಳಿಯಲ್ಲಿ ನವಜಾತ ಶಿಶುವನ್ನು ಹೊಲದಲ್ಲಿ ಬಿಟ್ಟು ಹೋದ ವ್ಯಕ್ತಿ !! |ರಾತ್ರಿಯಿಡೀ ಕಾದು ಮಗುವಿನ ಆರೈಕೆ ಮಾಡಿದ ಬೀದಿ ನಾಯಿಗಳು Read More »

ಹೊಸ ವರ್ಷದ ಸಾಮೂಹಿಕ ಆಚರಣೆಗೆ ಮಾರ್ಗ ಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ರಾಜ್ಯಾದ್ಯಂತ ಸಾಮೂಹಿಕ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ರಾಜ್ಯಾದ್ಯಂತ ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಹೊಸ ವರ್ಷದ ಸಾಮೂಹಿಕ ಆಚರಣೆಗೆ ನಿರ್ಬಂಧ ಹೇರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುವರ್ಣಸೌಧದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಬಗ್ಗೆ ಚರ್ಚೆ ನಡೆಸಲಾಯಿತು. ಅಲ್ಲದೆ ಕ್ರಿಸ್ ಮಸ್, ಹೊಸ ವರ್ಷ ಆಚರಣೆ ಬಗ್ಗೆಯೂ ಚರ್ಚಿಸಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಾಸ್ ಆಚರಣೆಗೆ ಅವಕಾಶವಿಲ್ಲ. ಕ್ರಿಸ್ ಮಸ್ ಗೆ ಯಾವುದೇ …

ಹೊಸ ವರ್ಷದ ಸಾಮೂಹಿಕ ಆಚರಣೆಗೆ ಮಾರ್ಗ ಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ Read More »

ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ. ಪ್ರಿಯಕರನ ಬಂಧನ.

ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ. ಪ್ರಿಯಕರನ ಬಂಧನ. ಉಳ್ಳಾಲ: ಖಾಸಗಿ ವಸತಿ ಸಂಕೀರ್ಣ ದಲಿದ್ದ ನಾಟೆಕಲ್ ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತ್ತೂರು ಬಳಿ ನಡೆದಿದೆ. ಬೀದರ್ ಆನಂದ ನಗರದ ನಿವಾಸಿ ವೈಶಾಲಿ ಗಾಯಕ್ವಾಡ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ.ಇದರ ಸಂಬಂಧ ಅವಳ ಪ್ರಿಯಕರ ಸುಜೀತ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ .ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಎಂಬಿಬಿಎಸ್ ಪದವಿ ಮುಗಿಸಿ ಇಬ್ಬರು ಪರೀಕ್ಷೆ ಬರುವವರಿದ್ದರು. ಇಬ್ಬರು …

ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ. ಪ್ರಿಯಕರನ ಬಂಧನ. Read More »

ಮದುವೆ ಮಂಟಪದಲ್ಲೇ ನಿದ್ದೆ ತೂಕಡಿಸಿದ ವಧು | ಇಲ್ಲಿ ವಧು ನಿದ್ರಿಸುತ್ತಿದ್ದಾಳೆ, ಇನ್ನೂ ಮದುವೆ ಮುಗಿದಿಲ್ಲ ಎಂಬ ವೀಡಿಯೋ ಪೋಸ್ಟ್ ವೈರಲ್

ಮದುವೆ ಎಂದರೇನು ಹಾಗೆ ಶಾಸ್ತ್ರಗಳು ತುಂಬಾ ಇರುತ್ತದೆ. ಅದರಲ್ಲೂ ಭಾರತೀಯ ಮದುವೆಗಳಲ್ಲಿ ಶಾಸ್ತ್ರಗಳದ್ದೇ ಕಾರುಬಾರು. ಹಾಗೆಯೇ ಇಲ್ಲೊಂದು ಮದುವೆಯಲ್ಲಿ ಬೆಳಗ್ಗಿನವರೆಗೂ ಮದುವೆ ಸಂಪ್ರದಾಯ ನಡೆದಿರುವ ಹಿನ್ನೆಲೆಯಲ್ಲಿ ಮಂಟಪದಲ್ಲೇ ವಧು ನಿದ್ದೆಗೆ ಜಾರಿದ ವೀಡಿಯೋವೊಂದು ವೈರಲ್ ಆಗಿದೆ. Battered Suitcase ಹೆಸರಿನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಧು ನಿದ್ರಿಸುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇಲ್ಲಿ ನೋಡಿ ವಧು ನಿದ್ರಿಸುತ್ತಿದ್ದಾಳೆ. ಈಗಾಗಲೇ ಸಮಯ ಬೆಳಗ್ಗೆ 6.30 ಆಗಿದೆ ಆದರೂ ಮದುವೆಯ ಸಂಪ್ರದಾಯ ಇನ್ನು ಮುಗಿದಿಲ್ಲ ಎಂದು ಬರೆದು ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. …

ಮದುವೆ ಮಂಟಪದಲ್ಲೇ ನಿದ್ದೆ ತೂಕಡಿಸಿದ ವಧು | ಇಲ್ಲಿ ವಧು ನಿದ್ರಿಸುತ್ತಿದ್ದಾಳೆ, ಇನ್ನೂ ಮದುವೆ ಮುಗಿದಿಲ್ಲ ಎಂಬ ವೀಡಿಯೋ ಪೋಸ್ಟ್ ವೈರಲ್ Read More »

ಕಾಲೇಜಿಗೆ ಹೋಗುವಾಗ ಜಡೆಯೆಳೆದು, ಬಟ್ಟೆಯನ್ನೂ ಎಳೆದಾಡಿದ ಪುಂಡರು | ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಪುಂಡರ ಕಿರುಕುಳದಿಂದ ನೊಂದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ರಾಧಿಕಾ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶೀರನಕಟ್ಟೆ ಗ್ರಾಮದ ಮನೆಯಲ್ಲಿ ರಾಧಿಕಾ ನೇಣಿಗೆ ಕೊರಳೊಡಿದ್ದಾಳೆ. ಮುದ್ದಪ್ಪ, ಸುದೀಪ್, ಕೋಟಿ, ಅಭಿ ಎಂಬವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕಾಲೇಜಿಗೆ ಹೋಗುವಾಗ ಬರುವಾಗ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದರು. ಜಡೆ ಹಿಡಿದು ಎಳೆಯುವುದಲ್ಲದೆ, ಬಟ್ಟೆ ಕೂಡ ಎಳೆದಾಡಿದ್ದಾರೆ. ಅದಲ್ಲದೆ ಅಶ್ಲೀಲವಾಗಿ ಮಾತಾಡಿ ಕಿರುಕುಳ ಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೋಷಕರ …

ಕಾಲೇಜಿಗೆ ಹೋಗುವಾಗ ಜಡೆಯೆಳೆದು, ಬಟ್ಟೆಯನ್ನೂ ಎಳೆದಾಡಿದ ಪುಂಡರು | ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು Read More »

error: Content is protected !!
Scroll to Top