ಬಂಟ್ವಾಳ : ಬೈಕ್‌ಗೆ ಡಿಕ್ಕಿಯಾಗಿ ಆಟೋರಿಕ್ಷಾ ಪಲ್ಟಿ ,ಬೈಕ್ ಸವಾರ ಗಂಭೀರ

ಬಂಟ್ವಾಳ : ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿಯಲ್ಲಿ ಸಂಭವಿಸಿದೆ.

ಮಾಣಿಯಿಂದ ಗಡಿಯಾರ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಉಪ್ಪಿನಂಗಡಿಯಿಂದ ಬಂದ ಬೈಕ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ರಿಕ್ಷಾ ರಸ್ತೆಯಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave A Reply

Your email address will not be published.