Day: November 26, 2021

ಬಿ.ಸಿ.ರೋಡ್ : ನಾಪತ್ತೆಯಾದ ಟೈಲರ್ ಶವವಾಗಿ ನೇತ್ರಾವತಿ ನದಿಯಲ್ಲಿ ಪತ್ತೆ

ಬಂಟ್ವಾಳ: ಟೈಲರ್ ವೃತ್ತಿಗೆಂದು ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಮೃತದೇಹ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಪೊಡಿಕ್ಕಳ ಬೆಂಜನಪದವು ನಿವಾಸಿ ನಾರಾಯಣ ಮೂಲ್ಯ ( 62) ಮೃತಪಟ್ಟ ವ್ಯಕ್ತಿ. ನಾರಾಯಣ ಮೂಲ್ಯ ಅವರು ನೆತ್ತರಕೆರೆ ಎಂಬಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದು, ಇತ್ತೀಚೆಗೆ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ. ನ.25 ರಂದು ಬೆಳಿಗ್ಗೆ ಮನೆಯಿಂದ ಹೊರಟ ಹೋದವರು ಮನೆಗೆ ಬರದೆ ನಾಪತ್ತೆಯಾಗಿದ್ದರು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶುಕ್ರವಾರ ನೇತ್ರಾವತಿ ನದಿಯಲ್ಲಿ ಶವ ತೇಲಾಡುವ ಸ್ಥಿತಿಯಲ್ಲಿ …

ಬಿ.ಸಿ.ರೋಡ್ : ನಾಪತ್ತೆಯಾದ ಟೈಲರ್ ಶವವಾಗಿ ನೇತ್ರಾವತಿ ನದಿಯಲ್ಲಿ ಪತ್ತೆ Read More »

ಸುಳ್ಯ, ಎಸ್‌ಡಿಪಿಐ ಯಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮ

ಸುಳ್ಯ, ನ 26:- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಸಮಿತಿ ವತಿಯಿಂದ ದೇಶದ ಜಾತ್ಯಾತೀತ ಮಾನವ ಹಕ್ಕು ಪ್ರಜಾಪ್ರಭುತ್ವ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಸಂವಿಧಾನ ದೀಕ್ಷೆ ಕಾರ್ಯಕ್ರಮವನ್ನು ತಹಶಿಲ್ದಾರರ ಕಚೇರಿ ಮುಂಭಾಗ ನಡೆಸಲಾಯಿತು. ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಸಂವಿಧಾನ ಪೀಠಿಕೆ ಓದಿಸುವ ಮೂಲಕ ಸಂವಿಧಾನ ಪ್ರತಿಜ್ಞಾವಿಧಿ ಗೈದರು.ನಂತರ ಮಾತನಾಡಿದ ಅವರು 1949 ನವೆಂಬರ್ 26 ರಂದು ಬಾಬ ಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ಅಂದಿನ ಒಕ್ಕೂಟ ಸರ್ಕಾರಕ್ಕೆ …

ಸುಳ್ಯ, ಎಸ್‌ಡಿಪಿಐ ಯಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮ Read More »

ದ.ಕ. ವಿಧಾನ ಪರಿಷತ್ ಚುನಾವಣಾ ಅಂತಿಮ ಕಣದಲ್ಲಿ ಮೂವರು ಅಭ್ಯರ್ಥಿಗಳು

ಮಂಗಳೂರು : ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದ 7 ಮಂದಿ ಅಭ್ಯರ್ಥಿಗಳಲ್ಲಿ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ನ.26ರ ಶುಕ್ರವಾರ ನಾಲ್ವರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ನಿತಿನ್ ಕುಮಾರ್, ಕೌಶಿಕ್ ಡಿ ಶೆಟ್ಟಿ, ನವೀನ್ ಕುಮಾರ್ ರೈ ಚೆಲ್ಯಡ್ಕ ಹಾಗೂ ಶಶಿಧರ್ ಎಂ ಉಮೇದುವಾರಿಕೆ ಹಿಂಪಡೆದುಕೊಂಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿ, …

ದ.ಕ. ವಿಧಾನ ಪರಿಷತ್ ಚುನಾವಣಾ ಅಂತಿಮ ಕಣದಲ್ಲಿ ಮೂವರು ಅಭ್ಯರ್ಥಿಗಳು Read More »

ಪುತ್ತೂರು : ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ | ನಾಲ್ವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಹಿಂ.ಜಾ.ವೇ.ಮುತ್ತಿಗೆ

ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ವಿದ್ಯಾರ್ಥಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಕ್ಕೆ ಸಂಬಂಧಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದಾರೆ. ಮಹಿಳಾ ಠಾಣೆಯಲ್ಲಿ ಕೌನ್ಸಿಲಿಂಗ್: ಕೊಂಬೆಟ್ಟು ಕಾಲೇಜು ಪರಿಸರದಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಗಳು ಅಪ್ರಾಪ್ತರಾದ ಹಿನ್ನಲೆಯಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಸಯವುದು ಸಮಂಜಸವಲ್ಲವೆಂದು ಮಹಿಳಾ ಪೊಲೀಸ್ ಠಾಣೆಯಲ್ಲಿರುವ ಅಪ್ರಾಪ್ತರ ಕೌನ್ಸಿಲಿಂಗ್ ವಿಭಾಗಕ್ಕೆ ನಾಲ್ವರು ಹಿಂದು ಮತ್ತು ಇಬ್ಬರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಘಟನೆಯ …

ಪುತ್ತೂರು : ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ | ನಾಲ್ವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಹಿಂ.ಜಾ.ವೇ.ಮುತ್ತಿಗೆ Read More »

ಬೆಳ್ತಂಗಡಿ: ನಾಳ ಸಮೀಪ ಮಾರುತಿ ಓಮ್ನಿ ಹಾಗೂ ರಿಟ್ಜ್ ಕಾರು ನಡುವೆ ಮುಖಾಮುಖಿ!! |ಉದ್ಯಮಿ ಸಹಿತ ಇತರರಿಗೆ ಗಂಭೀರ ಗಾಯ

ಬೆಳ್ತಂಗಡಿ:ನ್ಯಾಯತರ್ಫು ಇಲ್ಲಿಯ ನಾಳ ಸಮೀಪದಲ್ಲಿ ಇಂದು ಮಾರುತಿ ಓಮ್ನಿ ಮತ್ತು ಮಾರುತಿ ರಿಟ್ ಕಾರುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಈ ಘಟನೆಯಲ್ಲಿ ಓಮ್ನಿ ಕಾರು ಚಲಾಯಿಸುತ್ತಿದ್ದ ಚಾಲಕನ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದೆ. ಗೇರುಕಟ್ಟೆ ಸಮೀಪದ ಉದ್ಯಮಿ ಹಾಜಿ.ಹೆಚ್.ಉಸ್ಮಾನ್ ರವರು ತಮ್ಮ ಪತ್ನಿಯೊಂದಿಗೆ ಓಮ್ಮಿ ಕಾರಿನಲ್ಲಿ ಜಾರಿಗೆಬೈಲು ಸಮೀಪದ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ನಾಳ ಸಮೀಪಿಸುತ್ತಿದ್ದಂತೆ, ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಿಸುತ್ತಿದ್ದ ರಿಟ್ಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳ ಮುಂಭಾಗ …

ಬೆಳ್ತಂಗಡಿ: ನಾಳ ಸಮೀಪ ಮಾರುತಿ ಓಮ್ನಿ ಹಾಗೂ ರಿಟ್ಜ್ ಕಾರು ನಡುವೆ ಮುಖಾಮುಖಿ!! |ಉದ್ಯಮಿ ಸಹಿತ ಇತರರಿಗೆ ಗಂಭೀರ ಗಾಯ Read More »

ಪುತ್ತೂರು: ಫೊಟೋಗ್ರಾಫರ್ ಹತ್ಯೆ | ಮತ್ತೋರ್ವ ಆರೋಪಿ ಜಯರಾಜ ಶೆಟ್ಟಿ ಅಣಿಲೆ ಬಂಧನ

ಪುತ್ತೂರು: ಕೆಲ ದಿನಗಳ ಹಿಂದೆ ತನ್ನ ಜಮೀನು ನೋಡಲೆಂದು ಬಂದು ನಾಪತ್ತೆಯಾಗಿದ್ದ ಫೋಟೋಗ್ರಾಫರ್‌ ಅವರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಜಮೀನಿನ ವಿಚಾರಕ್ಕೆ ಸಂಬಂಧಿಸಿ ಸಂಬಂಧಿಕರೇ ಸುತ್ತಿಗೆಯಲ್ಲಿ ತಲೆಗೆ ಒಡೆದು ಕೊಲೆ ನಡೆಸಿ ಕಾಡಿನೊಳಗೆ ಹೂತಿಟ್ಟ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿತ್ತು.ಈ ಸಂಬಂಧ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಇನ್ನೋರ್ವ ಆರೋಪಿ ಬಡಗನ್ನೂರು ಗ್ರಾಮದ ಅಣಿಲೆ ಜಯರಾಜ ಶೆಟ್ಟಿ ಅಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತಿಂಗಳಾಡಿ ಉಮೇಶ್ ರೈ ಕೊಲೆ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದನು. …

ಪುತ್ತೂರು: ಫೊಟೋಗ್ರಾಫರ್ ಹತ್ಯೆ | ಮತ್ತೋರ್ವ ಆರೋಪಿ ಜಯರಾಜ ಶೆಟ್ಟಿ ಅಣಿಲೆ ಬಂಧನ Read More »

ಬೆಳ್ತಂಗಡಿ:ವೇಣೂರಿನ ಗೋಳಿಯಂಗಡಿ ಬಳಿ ಓಮಿನಿ ಮತ್ತು ಬೈಕ್ ನಡುವೆ ಅಪಘಾತ|ಬೈಕ್ ಸವಾರ ಗಂಭೀರ

ಬೆಳ್ತಂಗಡಿ : ವೇಣೂರಿನ ಗೋಲಿಯಂಗಡಿ ಎಂಬಲ್ಲಿ ಇದೀಗ ಓಮಿನಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದ್ದು,ಬೈಕ್ ಸವಾರ ಮೂಡಬಿದ್ರೆಯಿಂದ ಪಡಂಗಡಿ ಬರುವ ವೇಳೆ,ಓಮಿನಿ ಬೆಳ್ತಂಗಡಿಯಿಂದ ವೇಣೂರಿಗೆ ಚಲಿಸುವಾಗ ಈ ಘಟನೆ ಸಂಭವಿಸಿದೆ. ಬೈಕ್ ಸವಾರ ಗೋಲಿಯಂಗಡಿ ನಿವಾಸಿ ಆನಂದ್ ಅವರ ಪುತ್ರ ಅಂಕಿತ್(23) ಇವರು ತೀವ್ರ ಗಾಯಗೊಂಡಿದ್ದು,ಇವರನ್ನು ಬೆಳ್ತಂಗಡಿಯ ಅಭಯ ಆಸ್ಪತ್ರೆಗೆ ಚಿಕೆತ್ಸೆಗೆ ಕರೆತರಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಹೆಚ್ಚಿನ ಮಾಹಿತಿ ಇನ್ನು ತಿಳಿದುಬರಬೇಕಿದೆ.

ಪೆನ್ಸಿಲ್ ಕದ್ದ ಸ್ನೇಹಿತನ ವಿರುದ್ಧ ಕಂಪ್ಲೇಂಟ್ ನೀಡಿದ ಮೂರನೇ ತರಗತಿ ಬಾಲಕ

ಕೊಲೆ, ದರೋಡೆ, ಕಳ್ಳತನಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರುವುದು ಸಾಮಾನ್ಯ.ಆದರೆ ಇಲ್ಲೊಂದು ಕಡೆ ಯಾವ ವಿಚಾರಕ್ಕೆ ಯಾರು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ ಎಂದರೆ ನೀವು ನಗುವುದಂತೂ ಖಚಿತ. ಹೌದು. ಇಲ್ಲಿ 3 ನೇ ತರಗತಿಯ ಬಾಲಕ ತನ್ನ ಪೆನ್ಸಿಲ್‌ಗಳನ್ನು ಕದ್ದಿದ್ದಕ್ಕಾಗಿ ತನ್ನ ಸ್ನೇಹಿತನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಇದು ಫೆಬ್ರವರಿಯಲ್ಲಿ ನಡೆದಿದ್ದು, ಈ ಮಕ್ಕಳ ನಡುವಿನ ಸಂಭಾಷಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆದ ನಂತರ ಬೆಳಕಿಗೆ ಬಂದಿದೆ.ದೂರುದಾರನನ್ನು …

ಪೆನ್ಸಿಲ್ ಕದ್ದ ಸ್ನೇಹಿತನ ವಿರುದ್ಧ ಕಂಪ್ಲೇಂಟ್ ನೀಡಿದ ಮೂರನೇ ತರಗತಿ ಬಾಲಕ Read More »

ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಸಾವು

ಬಂಟ್ವಾಳ:ಯುವತಿಯೋರ್ವಳು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಾರಾಜೆ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಾಜೆ ನಿವಾಸಿ ಲಿಂಗಪ್ಪ ಮೂಲ್ಯರ ಪುತ್ರಿ ರಶ್ಮಿತ (24) ಮೃತ ಪಟ್ಟ ಯುವತಿ.ರಶ್ಮಿತ ಬೆಳಿಗ್ಗೆ ದೇವರಿಗೆ ಪೂಜೆ ಗಾಗಿ ಹೂ ಕೊಯ್ಯಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ಆ ಜೋಡಿ ಇಂದು ಸಂಭ್ರಮದಲ್ಲಿ ಮಿಂದೇಳಬೇಕಿತ್ತು!! ದಿಬ್ಬಣದ ವರನ ಜೊತೆ ಅದ್ದೂರಿಯಾಗಿ ಫೋಟೋ ಶೂಟ್ ನಡೆಸಿ ಧಾರೆಗೂ ಮುನ್ನ ಕಾಡಿತ್ತು ಶಾಕ್!!

ಆ ಟೆಕ್ಕಿ ದಂಪತಿಗಳು ನೆನೆಸಿದಂತೆ ಆಗುತ್ತಿದ್ದರೆ ಇಂದು ಖುಷಿಯ ಕಡಲಲ್ಲಿ ತೆಲಾಡುತ್ತಿರುತ್ತಿದ್ದರು.ವಧು-ವರರ ಪೋಷಕರು ತಮ್ಮ ಮಕ್ಕಳ ಮದುವೆಯ ಖುಷಿ ಕಾಣುವ ತವಕದಲ್ಲಿ ಯೋಚನೆಗೆ ಅವಕಾಶ ಕೊಡದ ತಪ್ಪಿಗೆ ಇಂದು ಪಶ್ಚತ್ತಾಪ ಪಡುತ್ತಾ ರೋಧಿಸುತ್ತಿರುವ ಪರಿ ವೈರಿಗೂ ಬಾರದಿರಲಿ ಎಂದು ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ.ಮದುವೆಗೆ ತಯಾರಾದ ಮಂಟಪದಲ್ಲಿ ಒಂದೇ ಬಾರಿ ಶೋಕದ ಮೌನ ವಾತಾವರಣ ನಿರ್ಮಾಣವಾಗಲು ಕಾರಣ ತಿಳಿದರೆ ನೀವೂ ಕೂಡಾ ಆಕೆಗೆ ಹಿಡಿಶಾಪ ಹಾಕುವುದಂತೂ ಗ್ಯಾರಂಟೀ.ಹೌದು, ಮದುವೆಯ ಸಂಭ್ರಮದಲ್ಲಿದ್ದ ಮನೆಗೆ ಒಂದೇ …

ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ಆ ಜೋಡಿ ಇಂದು ಸಂಭ್ರಮದಲ್ಲಿ ಮಿಂದೇಳಬೇಕಿತ್ತು!! ದಿಬ್ಬಣದ ವರನ ಜೊತೆ ಅದ್ದೂರಿಯಾಗಿ ಫೋಟೋ ಶೂಟ್ ನಡೆಸಿ ಧಾರೆಗೂ ಮುನ್ನ ಕಾಡಿತ್ತು ಶಾಕ್!! Read More »

error: Content is protected !!
Scroll to Top