ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ಆ ಜೋಡಿ ಇಂದು ಸಂಭ್ರಮದಲ್ಲಿ ಮಿಂದೇಳಬೇಕಿತ್ತು!! ದಿಬ್ಬಣದ ವರನ ಜೊತೆ ಅದ್ದೂರಿಯಾಗಿ ಫೋಟೋ ಶೂಟ್ ನಡೆಸಿ ಧಾರೆಗೂ ಮುನ್ನ ಕಾಡಿತ್ತು ಶಾಕ್!!

ಆ ಟೆಕ್ಕಿ ದಂಪತಿಗಳು ನೆನೆಸಿದಂತೆ ಆಗುತ್ತಿದ್ದರೆ ಇಂದು ಖುಷಿಯ ಕಡಲಲ್ಲಿ ತೆಲಾಡುತ್ತಿರುತ್ತಿದ್ದರು.ವಧು-ವರರ ಪೋಷಕರು ತಮ್ಮ ಮಕ್ಕಳ ಮದುವೆಯ ಖುಷಿ ಕಾಣುವ ತವಕದಲ್ಲಿ ಯೋಚನೆಗೆ ಅವಕಾಶ ಕೊಡದ ತಪ್ಪಿಗೆ ಇಂದು ಪಶ್ಚತ್ತಾಪ ಪಡುತ್ತಾ ರೋಧಿಸುತ್ತಿರುವ ಪರಿ ವೈರಿಗೂ ಬಾರದಿರಲಿ ಎಂದು ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ.ಮದುವೆಗೆ ತಯಾರಾದ ಮಂಟಪದಲ್ಲಿ ಒಂದೇ ಬಾರಿ ಶೋಕದ ಮೌನ ವಾತಾವರಣ ನಿರ್ಮಾಣವಾಗಲು ಕಾರಣ ತಿಳಿದರೆ ನೀವೂ ಕೂಡಾ ಆಕೆಗೆ ಹಿಡಿಶಾಪ ಹಾಕುವುದಂತೂ ಗ್ಯಾರಂಟೀ.ಹೌದು, ಮದುವೆಯ ಸಂಭ್ರಮದಲ್ಲಿದ್ದ ಮನೆಗೆ ಒಂದೇ ಬಾರಿಗೆ ನೋವುಂಟು ಮಾಡಿ ಮದುಮಗಳೇ ಪರಾರಿಯಾದ ಘಟನೆಯೊಂದು ಬೆಳಕಿಗೆ ಬಂದಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ಹೊರವಲಯದ ಕಲ್ಯಾಣಮಂಟಪದಲ್ಲಿ ಬುಧವಾರ ಬೆಳಗ್ಗೆ ಈ ದೃಶ್ಯ ಕಂಡು ಬಂತು. ಬೆಂಗಳೂರು ಮೂಲದ ಯುವಕನೊಂದಿಗೆ ಚನ್ನಪಟ್ಟಣದ ಯುವತಿ ಜತೆ ಹಿರಿಯರ ಸಮ್ಮುಖದಲ್ಲಿ ವಿವಾಹ ನಿಶ್ಚಯವಾಗಿತ್ತು. ಯುವಕ-ಯುವತಿ ಇಬ್ಬರೂ ಬಿಇ ಪದವೀಧರರು. ಇವರಿಬ್ಬರ ಮದುವೆ ಚನ್ನಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ನಿಗದಿಯಾಗಿತ್ತು. ಅದರಂತೆ ಮಂಗಳವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೇರವೇರಿತ್ತು. ಆರತಕ್ಷತೆಯಲ್ಲಿ ಸಂತೋಷದಿಂದಲೇ ಮದುಮಗನೊಂದಿಗೆ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಳು. ಬುಧವಾರ ಬೆಳಗ್ಗೆ ಧಾರಾಮುಹೂರ್ತ ಇತ್ತು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಆದರೆ, ಆರತಕ್ಷತೆ ಮುಗಿದ ಬಳಿಕ ಕುಟುಂಬದ ಎಲ್ಲರೂ ನಿದ್ರೆಗೆ ಜಾರಿದ್ದರು. ಆದರೆ ಮದುಮಗಳು ಮಾತ್ರ ಅಂದು ಮಧ್ಯರಾತ್ರಿಯೇ ಪರಾರಿಯಾಗಿದ್ದಾಳೆ. ಆತಂಕಕ್ಕೆ ಒಳಗಾದ ವಧುವಿನ ಕುಟುಂಬಸ್ಥರು ಬುಧವಾರ ಬೆಳಗ್ಗೆಯೇ ಕಲ್ಯಾಣಮಂಟಪ ಖಾಲಿ ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಿಯಕರನೊಂದಿಗೆ ಮಧುಮಗಳು ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.

Leave a Reply

error: Content is protected !!
Scroll to Top
%d bloggers like this: