ಬೆಳ್ತಂಗಡಿ: ನಾಳ ಸಮೀಪ ಮಾರುತಿ ಓಮ್ನಿ ಹಾಗೂ ರಿಟ್ಜ್ ಕಾರು ನಡುವೆ ಮುಖಾಮುಖಿ!! |ಉದ್ಯಮಿ ಸಹಿತ ಇತರರಿಗೆ ಗಂಭೀರ ಗಾಯ

ಬೆಳ್ತಂಗಡಿ:ನ್ಯಾಯತರ್ಫು ಇಲ್ಲಿಯ ನಾಳ ಸಮೀಪದಲ್ಲಿ ಇಂದು ಮಾರುತಿ ಓಮ್ನಿ ಮತ್ತು ಮಾರುತಿ ರಿಟ್ ಕಾರುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಈ ಘಟನೆಯಲ್ಲಿ ಓಮ್ನಿ ಕಾರು ಚಲಾಯಿಸುತ್ತಿದ್ದ ಚಾಲಕನ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದೆ.

ಗೇರುಕಟ್ಟೆ ಸಮೀಪದ ಉದ್ಯಮಿ ಹಾಜಿ.ಹೆಚ್.ಉಸ್ಮಾನ್ ರವರು ತಮ್ಮ ಪತ್ನಿಯೊಂದಿಗೆ ಓಮ್ಮಿ ಕಾರಿನಲ್ಲಿ ಜಾರಿಗೆಬೈಲು ಸಮೀಪದ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ನಾಳ ಸಮೀಪಿಸುತ್ತಿದ್ದಂತೆ, ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಿಸುತ್ತಿದ್ದ ರಿಟ್ಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳ ಮುಂಭಾಗ ಜಖಂಗೊಂಡಿದ್ದು.ಓಮ್ಮಿ ಕಾರಿನಲ್ಲಿದ ಹಾಜಿ ಉಸ್ಮಾನ್ ರವರ 2 ಕಾಲುಗಳಿಗೂ ಗಂಭೀರ –ಗಾಯಗಳಾಗಿದ್ದು ಸ್ಥಳೀಯರ ಸಹಕಾರದಿಂದ ಶೀಘ್ರವೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಜೊತೆಗೆ ಅವರ ಪತ್ನಿಗೂ ಸಣ್ಣ ಪುಟ್ಟ ಗಾಯಗಳಾಗಿದೆ.

ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತು ಸದಸ್ಯರಾದ ಅಬ್ದುಲ್ ಕರೀಂ ಕೆ.ಎಮ್, ಲತೀಫ್ ಪರಿಮ, ಪರಪ್ಪು ಮಸೀದಿ ಅಧ್ಯಕ್ಷ
ಹಾಜಿ ಅಬೂಬಕ್ಕರ್ ಪೆಲತ್ತಳಿಕೆ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಪೂಜಾರಿ, ಶರತ್ ಕುಮಾರ್, ಸಿದ್ದಿಕ್ ಪುರಪ್ಪು, ಹಮೀದ್ ಗೇರುಕಟ್ಟೆ, ಸ್ಥಳೀಯರು ಉಪಸ್ಥಿತರಿದ್ದು, ಸಹಕರಿಸಿದರು.ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಶಿವರಾಮ ರೈಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: