Day: November 15, 2021

ಶಾಂತಿಮೊಗರು : ಬೈಕ್‌ಗೆ ಹಿಂಬಂದಿಯಿಂದ ಕಾರು ಡಿಕ್ಕಿ ಹೊಡೆದು ಪರಾರಿ,ಬೈಕ್ ಸವಾರಗೆ ಗಾಯ

ಸವಣೂರು : ಕಾರೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಹಾಗೂ ಸವಾರ ಗಾಯಗೊಂಡ ಘಟನೆ ಶಾಂತಿ ಮೊಗರು ಸೇತುವೆ ಸಮೀಪ ನ 15 ರಂದು ರಾತ್ರಿ ನಡೆದಿದೆ. ಕಾಣಿಯೂರು ಸಮೀಪದ ನೂಜಿ ನಿವಾಸಿ ಮಹೇಶ್ ಗಾಯಗೊಂಡ ಬೈಕ್ ಸವಾರ. ಇವರನ್ನು ಸ್ಥಳೀಯರ ಸಹಾಯದಿಂದ ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕುದ್ಮಾರ್ – ಆಲಂಕಾರನ್ನು ಸಂಪರ್ಕಿಸುವ ರಸ್ತೆಯಲ್ಲಿ ಶಾಂತಿ ಮೊಗರು ಸೇತುವೆಯಿಂದ 300 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ನೂಜಿ ಮಹೇಶ್ ರವರು ತಮ್ಮ ಬಜಾಜ್‌ …

ಶಾಂತಿಮೊಗರು : ಬೈಕ್‌ಗೆ ಹಿಂಬಂದಿಯಿಂದ ಕಾರು ಡಿಕ್ಕಿ ಹೊಡೆದು ಪರಾರಿ,ಬೈಕ್ ಸವಾರಗೆ ಗಾಯ Read More »

ಚುನಾವಣಾ ನೀತಿ ಸಂಹಿತೆ ಜಾರಿ!!ನಾಳೆಯಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಮುಂದೂಡಿದ ಆಯೋಜಕರು

ಮಂಗಳೂರು ವಿಶ್ವವಿದ್ಯಾನಿಯದಲ್ಲಿ ಉದ್ಯೋಗ ಮಾಹಿತಿ ಮಾರ್ಗದರ್ಶಕ ಕೇಂದ್ರ ಹಾಗೂ ತರಬೇತಿ ಉದ್ಯೋಗ ಕೋಶ ಮಂಗಳ ಗಂಗೋತ್ರಿಯ ಜಂಟಿ ಆಶ್ರಯದಲ್ಲಿ ದಿನಾಂಕ 16 ಮತ್ತು 17 ರಂದು ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದಾಗಿ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಸೂಚನೆಯ ಮೇರೆಗೆ ಉದ್ಯೋಗ ಮೇಳ ನಡೆಸಲು ನಿರ್ಧರಿಸಿದ್ದ ಎಲ್ಲಾ ಸಿದ್ಧತೆಗಳನ್ನು ಸದ್ಯದಿಂದಲೇ ಕೈಬಿಡಲಾಗಿದೆ. ಚುನಾವಣಾ ನೀತಿ ಸಂಹಿತೆ ಸಡಿಲವಾದ ಬಳಿಕ ಮುಂದಿನ ಕಾರ್ಯಕ್ರಮದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಆಯೋಜಕರು …

ಚುನಾವಣಾ ನೀತಿ ಸಂಹಿತೆ ಜಾರಿ!!ನಾಳೆಯಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಮುಂದೂಡಿದ ಆಯೋಜಕರು Read More »

ಕಾರ್ಕಳ : ಸಿಡಿಲು ಬಡಿದು ವ್ಯಕ್ತಿ ಸಾವು

ಉಡುಪಿ : ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ನೀರೆ ಎಂಬಲ್ಲಿ ಮನೆಗೆ ಸಿಡಿಲು ಬಡಿದು ವ್ಯಕ್ತಿಯೊರ್ವರು ಸಾವಿಗೀಡಾದ ಘಟನೆ ನ. 15ರಂದು ಸಂಭವಿಸಿದೆ. ವಾದಿರಾಜ ಆಚಾರ್ಯ (65) ಎಂಬವರೇ ಸಿಡಿಲಾಘಾತಕ್ಕೆ ಮೃತಪಟ್ಟ ವ್ಯಕ್ತಿ. ಮನೆಯ ವೈರಿಂಗ್‌ ಸುಟ್ಟುಕರಕಲಾಗಿದೆ. ಕಾರ್ಕಳ ತಹಶೀಲ್ದಾರ್‌ ಪುರಂದರ ಸೇರಿದಂತೆ ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನದಿಯಲ್ಲಿ ಪೋಟೋ ಶೂಟ್ ಮಾಡಲು ಹೋದಾಕೆ ನೀರಿಗೆ ಬಿದ್ದಳು !! ಆಮೇಲೆ ಏನಾಯ್ತು…ಈ ಸ್ಟೋರಿ ಓದಿ

ಫೋಟೋಶೂಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಂಗಸರಿಗಂತೂ ಕೇಳಲೇ ಬೇಡ. ಚಿಕ್ಕಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೂ ಫೋಟೋಗಳಿಗೆ ಪೋಸ್ ನೀಡುವುದು ಸರ್ವೇಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಬ್ಬಳು ಮಹಿಳೆ ಫೋಟೋ ಶೂಟ್ ಮಾಡಲು ಹೋಗಿ ಅನುಭವಿಸಿದ ಫಜೀತಿ ಅಷ್ಟಿಷ್ಟಲ್ಲ. ನದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ಮಹಿಳೆ ನೀರಿನೊಳಗೆ ಬಿದ್ದಿರುವ ಹಾಸ್ಯಮಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ. ಹೌದು, ಮಹಿಳೆಯೊಬ್ಬರು ನದಿಯ ದಡದಲ್ಲಿ ಸುಂದರವಾದ ಪಿಂಕ್ ಕಲರ್ ಲಾಂಗ್ ಡ್ರೆಸ್ ಅನ್ನು ಧರಿಸಿ, ಹೇರ್ …

ನದಿಯಲ್ಲಿ ಪೋಟೋ ಶೂಟ್ ಮಾಡಲು ಹೋದಾಕೆ ನೀರಿಗೆ ಬಿದ್ದಳು !! ಆಮೇಲೆ ಏನಾಯ್ತು…ಈ ಸ್ಟೋರಿ ಓದಿ Read More »

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದ್ದ ಮಗು ಅದಲು-ಬದಲು ಪ್ರಕರಣ!! ಡಿಎನ್ಎ ಟೆಸ್ಟ್ ವರದಿ ಬರುವ ಮುನ್ನವೇ ಪೋಷಕರಿಗೆ ಶಾಕ್

ಕೆಲ ದಿನಗಳ ಹಿಂದೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದ್ದ ಮಗು ಅದಲು ಬದಲು ಗಂಭೀರ ಪ್ರಕರಣದಲ್ಲಿನ ಮಗುವೊಂದು ಇಂದು ಮೃತಪಟ್ಟಿದೆ. ಅಕ್ಟೋಬರ್ 15 ರಂದು ನಡೆದ ಘಟನೆ ಇದಾಗಿದ್ದು, ಕುಂದಾಪುರ ಮೂಲದ ದಂಪತಿಯ ಮಗುವನ್ನು ಲೇಡಿಗೋಷನ್ ಆಸ್ಪತ್ರೆಯಲ್ಲಿ ಬದಲಿಸಲಾಗಿದೆ, ಹೆರಿಗೆಯಾದ ಕೂಡಲೇ ಹೆಣ್ಣುಮಗುವನ್ನು ತೋರಿಸಿದ್ದ ಸಿಬ್ಬಂದಿಗಳು ಆ ಬಳಿಕ ಬೇರೆ ಯಾರದ್ದೋ ಗಂಡುಮಗುವನ್ನು ನೀಡಿದ್ದರು. ದಾಖಲೆಗಳಲ್ಲೂ ಹೆಣ್ಣು ಮಗು ಎಂದು ನಮೂದಿಸಲಾಗಿದ್ದರೂ ಗಂಡುಮಗು ನೀಡಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ಆ …

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದ್ದ ಮಗು ಅದಲು-ಬದಲು ಪ್ರಕರಣ!! ಡಿಎನ್ಎ ಟೆಸ್ಟ್ ವರದಿ ಬರುವ ಮುನ್ನವೇ ಪೋಷಕರಿಗೆ ಶಾಕ್ Read More »

ಮಂಗಳೂರು : ಖಾಸಗಿ ಬಸ್‌ಗೆ ಕಿಡಿಗೇಡಿಗಳಿಂದ ಕಲ್ಲೆಸೆತ

ಮಂಗಳೂರು : ಮಣಿಪಾಲ-ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಸೋಮವಾರ ನಡೆದಿದೆ. ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಎಕೆಎಂಎಸ್ ಎಕ್ಸ್‌ಪ್ರೆಸ್ ಬಸ್ ಕೋಡಿಕಲ್ ಕ್ರಾಸ್ ತಲುಪಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಬಸ್ಸಿನ ಗಾಜಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಲ್ಲೆಸೆತದಿಂದ ಬಸ್ಸಿನ ಗಾಜಿಗೆ ಹಾನಿಯಾಗಿದೆ. ಕಿಡಿಗೇಡಿಗಳು ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಕಾಣದಂತೆ ಮರೆಮಾಚಿದ್ದಾರೆ. ಕಳೆದ ವಾರ ಪಣಂಬೂರು ಸಮೀಪ ಕಾಟಿಪಳ್ಳ ಕೈಕಂಬದಿಂದ ಮಂಗಳಾದೇವಿ ರೂಟ್‌ನತ್ತ ಬರುತ್ತಿದ್ದ …

ಮಂಗಳೂರು : ಖಾಸಗಿ ಬಸ್‌ಗೆ ಕಿಡಿಗೇಡಿಗಳಿಂದ ಕಲ್ಲೆಸೆತ Read More »

ಹರಿದು ಹೋದ ಅಥವಾ ಗಮ್ ಟೇಪ್ ಅಂಟಿಸಿದ ನೋಟು ನಿಮ್ಮ ಕೈ ಸೇರಿ ಅದನ್ನು ಸಾಗ್ ಹಾಕಲು ವ್ಯಥೆ ಪಡುತ್ತೀದ್ದೀರಾ? ಹಾಗಿದ್ರೆ ನಿಮ್ಮ ಟೆನ್ಷನ್ ಗೆ ಹೇಳಿ ಗುಡ್ ಬೈ, ಆರ್ ಬಿಐ ಜಾರಿ ಮಾಡಿದೆ ನೋಟುಗಳ ಬದಲಾವಣೆಯ ನಿಯಮ

ನಾವು ಎಷ್ಟೇ ಹುಷಾರಾಗಿದ್ದರೂ ಕೂಡ ಕೆಲವು ಸಂದರ್ಭಗಳಲ್ಲಿ ಎಲ್ಲಿಂದಲಾದರೂ ಹರಿದ ಅಥವಾ ಗಮ್ ಟೇಪ್ ಅಂಟಿಸಿದ ನೋಟು ನಮ್ಮ ಕೈ ಸೇರಿಕೊಳ್ಳುತ್ತದೆ. ವಿಪರ್ಯಾಸವೆಂದರೆ ಈ ನೋಟು ಸಾಮಾನ್ಯವಾಗಿ ಬಹುತೇಕ ಕಡೆ ಕೆಲಸಕ್ಕೆ ಬರುವುದಿಲ್ಲ. ಅಂಗಡಿಯವರಾಗಲಿ ಅಥವಾ ಬೇರೆ ಯಾರೇ ಆಗಲಿ ಈ ನೋಟುಗಳನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಆದರೆ ಇನ್ನು ಮುಂದೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಈ ನೋಟಿನ ಬದಲಿಗೆ ನೀವು ಬೇರೆ ನೋಟನ್ನು ಪಡೆಯಬಹುದು. ಈ ಟೇಪ್ ಸ್ಟಿಕ್ಕಿಂಗ್ ನೋಟ್ ಅನ್ನು ಬದಲಿಸಲು ಆರ್‌ಬಿಐ ಹೊಸ ನಿಯಮಗಳನ್ನು …

ಹರಿದು ಹೋದ ಅಥವಾ ಗಮ್ ಟೇಪ್ ಅಂಟಿಸಿದ ನೋಟು ನಿಮ್ಮ ಕೈ ಸೇರಿ ಅದನ್ನು ಸಾಗ್ ಹಾಕಲು ವ್ಯಥೆ ಪಡುತ್ತೀದ್ದೀರಾ? ಹಾಗಿದ್ರೆ ನಿಮ್ಮ ಟೆನ್ಷನ್ ಗೆ ಹೇಳಿ ಗುಡ್ ಬೈ, ಆರ್ ಬಿಐ ಜಾರಿ ಮಾಡಿದೆ ನೋಟುಗಳ ಬದಲಾವಣೆಯ ನಿಯಮ Read More »

ಸ್ನೇಹಿತರ ಬಳಗ ಕಲ್ಪಡ,ಕೊಡಿಯಾಲ | ನೂತನ ಅಧ್ಯಕ್ಷ:ಯುವರಾಜ ಕೆ.ಪಿ, ಕಾರ್ಯದರ್ಶಿ:ಲೋಕೇಶ್ ಕೆ.ವಿ.

ಕೊಡಿಯಾಲ: ಸ್ನೇಹಿತರ ಬಳಗ(ರಿ)ಕಲ್ಪಡ,ಕೊಡಿಯಾಲ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಅಧ್ಯಕ್ಷ ಗಣೇಶ್ ಅಂಗಾರಡ್ಕರವರ ಅಧ್ಯಕ್ಷತೆಯಲ್ಲಿ ಮೂವಪ್ಪೆ ಶಾಲಾ ವಠಾರದಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ಯುವರಾಜ ಕೆ. ಪಿ.,ಕಾರ್ಯದರ್ಶಿಯಾಗಿ ಲೋಕೇಶ್ ಕೆ.ವಿ. ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಶಿವರಾಮ ಉಪಾಧ್ಯಾಯ,ಉಪಾಧ್ಯಕ್ಷರಾಗಿಗಿರೀಶ್ ಕಲ್ಪಡ,ಜೊತೆ ಕಾರ್ಯದರ್ಶಿ ದೀಕ್ಷಿತ್ ಕುಕ್ಕುತ್ತಡಿ,ಸಂಘಟನಾ ಕಾರ್ಯದರ್ಶಿ ದಯಾನಂದ ಕೆ.ಕೆ., ಕ್ರೀಡಾ ಕಾರ್ಯದರ್ಶಿ ವಸಂತ ಇಪ್ಪುಲ್ತಡಿ,ಕೋಶಾಧಿಕಾರಿ ಜಗದೀಶ್ ಕಲ್ಪಡಸಾಂಸ್ಕೃತಿಕ ಕಾರ್ಯದರ್ಶಿ ಪ್ರಸಾದ್ ಅಂಗರಡ್ಕ, ಗೌರವ ಸಲಹೆಗರಾರಾಗಿ ಲೋಕೇಶ್ ತಾಳಿತ್ತಾಡಿ,ವಿಠಲ ಗೌಡಕೇಶವ ತೋಟ,ಕುಶಾಲಪ್ಪ ಪೋಲಜೆ,ಹೊನ್ನಪ್ಪ ಕಲ್ಪಡ,ಸುಂದರ ಪೋಲಾಜೆ ಆಯ್ಕೆಯಾದರು.

ಕೆಸಿಐಎಪಿಎಂ ಅಧ್ಯಕ್ಷರಾಗಿ ಡಾ.ಎನ್ ಕಿಶೋರ್ ಆಳ್ವ ಆಯ್ಕೆ

ಮಂಗಳೂರು : ಇಂಡಿಯನ್ ಅಸೋಸಿಯೇಷನ್ ಆಫ್ ಪೆಥೋಲೊ ಜಿಸ್ಟ್ ಕರ್ನಾಟಕ ಸ್ಟೇಟ್ ಚ್ಯಾಪ್ಟರ್ (ಕೆಸಿಐಎಪಿಎಂ) ಇದರ ನೂತನ ಅಧ್ಯಕ್ಷರಾಗಿ ಡಾ.ಎನ್ ಕಿಶೋರ್ ಆಳ್ವ ಮಿತ್ತಳಿಕೆ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರು ರಾಮಯ್ಯ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾಗಿ ಮತ್ತು ಈಶ ಡಯಗೋಸ್ಟಿಕ್ ಸೆಂಟರ್ ಬೆಂಗಳೂರು ಇದರ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವತು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮಿತ್ತಳಿಕೆ ಕಾರಮುಗೇರು ಶಾಂತ ಆಳ್ವ ಮತ್ತು ಮಿತ್ತಳಿಕೆ ಸರಸ್ವತಿ ಎಸ್ ಆಳ್ವ ಇವರ ಪುತ್ರರಾಗಿದ್ದಾರೆ.

ತಾನು ಸಾಕುತ್ತಿರುವ ಎಮ್ಮೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ | ಅಷ್ಟಕ್ಕೂ ಆತ ಎಮ್ಮೆಯ ಬಗ್ಗೆ ನೀಡಿರುವ ದೂರು ಏನು ಗೊತ್ತಾ ??

ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಎಲ್ಲಿ, ಯಾರಿಗೆ, ಹೇಗೆ, ಯಾವಾಗ ಏನು ನಡೆಯುತ್ತೆ ಅನ್ನೋ ಕಲ್ಪನೆಯೇ ಇಲ್ಲ. ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಚಿತ್ರ ಘಟನೆಗಳು, ಹೊಸ ಹೊಸ ವಿದ್ಯಮಾನಗಳು ಇದ್ದೇ ಇರುತ್ತೆ. ಕೆಲವೊಂದು ಹಾಸ್ಯಮಯವಾಗಿದ್ರೆ ಕೆಲವೊಂದು ವಿಸ್ಮಯಕಾರಿ ಆಗಿರೋದಂತೂ ನಿಜ. ಆದ್ರೆ ಇಲ್ಲಿ ನಡೆದಿರೋ ವಿಷಯ ವಿಶೇಷವಾದ್ರೂ ನಿಜವಾಗಿ ನಡೆದಿರೋ ಘಟನೆ. ಸಾಮಾನ್ಯವಾಗಿ ನಮಗೆ ತೊಂದರೆಯಾದರೆ ನಾವು ಮೊದಲು ಭೇಟಿಯಾಗೋದು ಪೊಲೀಸರನ್ನು. ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಯಾವ ಕಾರಣಕ್ಕೆ ಪೊಲೀಸ್ ಮೆಟ್ಟಿಲೇರಿದ್ದಾನೆ ಎಂಬುದನ್ನು …

ತಾನು ಸಾಕುತ್ತಿರುವ ಎಮ್ಮೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ | ಅಷ್ಟಕ್ಕೂ ಆತ ಎಮ್ಮೆಯ ಬಗ್ಗೆ ನೀಡಿರುವ ದೂರು ಏನು ಗೊತ್ತಾ ?? Read More »

error: Content is protected !!
Scroll to Top