Day: November 3, 2021

ಬೆಳಕಿನ ಹಬ್ಬಕ್ಕೆ ಮೋದಿ ಸರ್ಕಾರದಿಂದ ಸಿಕ್ಕಿತು ಭರ್ಜರಿ ಆಫರ್!! ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಕ್ರಮ

ನವದೆಹಲಿ:ದೇಶದ ಜನತೆಗೆ ಬೆಳಕಿನ ಹಬ್ಬ ದೀಪಾವಳಿಗೆ ಮೋದಿ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ಸದ್ಯದಲ್ಲೇ ಏರಿಕೆ ಕಂಡಿದ್ದ ಇಂಧನ ಬೆಲೆಯು ಇಳಿಕೆ ಕಾಣಲಿದೆ. ಇಂತಹ ಒಂದು ಮಹತ್ವದ ನಿರ್ಧಾರ ಕೈಗೊಂಡ ಬಳಿಕ ದೀಪಾವಳಿಯ ಮುನ್ನಾ ದಿನದಂದು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಎಂದು ಘೋಷಿಸಿದೆ. ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ 5 ರೂ. ಮತ್ತು 10 ರೂಪಾಯಿ ಇಳಿಕೆಯಾಗಲಿದೆ. ಪೈಸೆಗಳ ಲೆಕ್ಕದಲ್ಲಿ ಪ್ರತಿದಿನ …

ಬೆಳಕಿನ ಹಬ್ಬಕ್ಕೆ ಮೋದಿ ಸರ್ಕಾರದಿಂದ ಸಿಕ್ಕಿತು ಭರ್ಜರಿ ಆಫರ್!! ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಗೆ ಕ್ರಮ Read More »

2022-2023ರ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ- ಸಚಿವ ಬಿ.ಸಿ.ನಾಗೇಶ್

ಕಡಬ : ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಶಿಕ್ಷಕರ ನೇಮಕಾತಿ ಆಗದ ಕಾರಣ ರಾಜ್ಯಾದ್ಯಂತ ಶಿಕ್ಷಕರ ಕೊರತೆ ತಲೆದೋರಿದೆ. ಈ ಹಿಂದೆ ಸುಮಾರು 10 ಸಾವಿರ ಶಿಕ್ಷಕರ ನೇಮಕಾತಿಗಾಗಿ ಟಿಇಟಿ ಮತ್ತು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಕೇವಲ 3 ಸಾವಿರ ಮಂದಿ ಮಾತ್ರ ತೇರ್ಗಡೆ ಹೊಂದಿದ್ದರು. ಈ ಕಾರಣದಿಂದ ತತ್‌ಕ್ಷಣವೇ ಮತ್ತೆ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಲು ಟಿಇಟಿ ಪರೀಕ್ಷೆ ನಡೆಸಿ ಶಿಕ್ಷಕರ ಆಯ್ಕೆ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ …

2022-2023ರ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ- ಸಚಿವ ಬಿ.ಸಿ.ನಾಗೇಶ್ Read More »

ಇಬ್ಬರು ಡಿವೈಎಸ್ಪಿ, 11 ಇನ್‌ಸ್ಪೆಕ್ಟರ್ ವರ್ಗಾವಣೆ

ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಎಂ.ಜೆ. ಪೃಥ್ವಿ, ಸಿ.ಬಾಲಕೃಷ್ಣ ಸೇರಿ 11 ಇನ್‌ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಲಾಗಿದೆ. ಇನ್‌ಸ್ಪೆಕ್ಟರ್ ಗಳಾದ ಎಲ್.ಪ್ರಕಾಶ್ ಮಾಲಿ, ಎಂ.ಎ ಸ್.ಹಿತೇಂದ್ರ, ಎಲ್.ಟಿ.ಚಂದ್ರಕಾಂತ್, ಜಿ.ವಿ.ಅರುಣ್‌ಕುಮಾರ್, ಆರ್.ಈರಸಂಗಪ್ಪ ಪಟ್ಟಣಶೆಟ್ಟಿ,ರಾಘವೇಂದ್ರ, ವೀರಭದ್ರಯ್ಯ ಹಿರೇಮಠ, ಮಹೇಶ್ ಕನಕಗಿರಿ, ಪಿ.ಜಿ.ನವೀನ್‌ಕುಮಾರ್, ಆರ್.ವರ್ಣಿ ಪ್ರಕಾಶ್, ಆರ್.ತಮ್ಮರಾಯ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇಚಿಲಂಪಾಡಿಯಲ್ಲಿ ರಸ್ತೆ ಬದಿ ಕಾಡಾನೆ : ಆನೆಯ ಸಮೀಪವೇ ಬೈಕ್ ನಿಂದ ಬಿದ್ದು ಜೀವ ಭಯದಿಂದ ಓಡಿದ ಯುವಕರು

ಕಡಬ :ಕಾಡಾನೆಯೊಂದು ಏಕಾಏಕಿ ರಸ್ತೆ ಬದಿ ಪ್ರತ್ಯಕ್ಷವಾಗಿ ಬೈಕ್ ಸವಾರರಿಬ್ಬರು ಸಾವಿನ ದವಡೆಯಿಂದ ಪಾರಾದ ಘಟನೆ ಇಚಿಲಂಪಾಡಿ ಸಮೀಪ ನ.2 ರಂದು ರಾತ್ರಿ ನಡೆದಿದೆ. ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ ನಿವಾಸಿ ಧರ್ಮಪಾಲ ಮತ್ತು ರಮೇಶ ಎಂಬವರು ಸಂಬಂಧಿಕರ ಮನೆಗೆಂದು ಕೊಕ್ಕಡಕ್ಕೆ ಇಚಿಲಂಪಾಡಿ ಮೂಲಕ ತಮ್ಮ ದ್ವಿಚ ಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಕಾಡಾನೆ ರಸ್ತೆ ದಾಟಿದೆ. ದಿಕ್ಕು ತೋಚದೆ ಬೈಕ್ ಸವಾರ ಹಠತ್ ಬ್ರೇಕ್ ಹಾಕಿದ ಕಾರಣ ಕಾಡಾನೆಯ ಪಕ್ಕವೇ ಬೈಕ್ ಮಗುಚಿ ಬಿದ್ದು ಸವಾರ ಮತ್ತು …

ಇಚಿಲಂಪಾಡಿಯಲ್ಲಿ ರಸ್ತೆ ಬದಿ ಕಾಡಾನೆ : ಆನೆಯ ಸಮೀಪವೇ ಬೈಕ್ ನಿಂದ ಬಿದ್ದು ಜೀವ ಭಯದಿಂದ ಓಡಿದ ಯುವಕರು Read More »

ಆಲಂಕಾರು ಶ್ರೀ ಭಾರತೀ ಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ

ಕಡಬ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಕಡಬ ತಾಲೂಕು ಆಲಂಕಾರು ಗ್ರಾಮದ ಶ್ರೀ ಭಾರತಿ ಶಾಲೆಗೆ ಬುಧವಾರ ಭೇಟಿ ನೀಡಿದರು.ಶಾಲಾ ಚಟುವಟಿಕೆಯ ಬಗ್ಗೆ ಶಾಲಾ ಆಡಳಿತ ಪ್ರಮುಖರು ಸಚಿವರಿಗೆ ವಿವರಿಸಿದರು. ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯಲ್ಲಿನ ಶಿಶುಮಂದಿರ ಕಟ್ಟಡಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸುವುದಾಗಿ ಸಚಿವರು ಭರವಸೆ ನೀಡಿದರು. ಶಾಲೆಯಲಿದ್ದ ವಿದ್ಯಾರ್ಥಿಗಳೊಂದಿಗೆ ಕೆಲ ಕಾಲ ಕಳೆದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿಯಿಂದ ಸಚಿವರನ್ನು ಗೌರವಿಸಲಾಯಿತು. ಆಡಳಿತ ಮಂಡಳಿ …

ಆಲಂಕಾರು ಶ್ರೀ ಭಾರತೀ ಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ Read More »

ಬೊಮ್ಮಾಯಿ ತವರೂರು ಹಾನಗಲ್ ನ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವು !??

ಹುಬ್ಬಳ್ಳಿ:ಹಾನಗಲ್ ನಲ್ಲಿ ಬಿಜೆಪಿ ಸೋಲು ಕಂಡಿದ್ದಕ್ಕೆ ಹಲವಾರು ಕಾರಣಗಳು ಕೇಳಿ ಬರುತ್ತಿದೆ. ಇದೀಗ ಸಿಎಂ ಬೊಮ್ಮಾಯಿ ತನ್ನ ತವರು ಜಿಲ್ಲೆಯಲ್ಲಿ ಸೋಲಿಗೆ ಪುನೀತ್ ರಾಜಕುಮಾರ್ ಸಾವೇ ಕಾರಣವಾಯಿತೇ ಎಂಬ ಪ್ರಶ್ನೆ ಹುಟ್ಟುತ್ತಿದೆ. ಹೌದು.ಅಕ್ಟೋಬರ್ 30 ರಂದು ಹಾನಗಲ್ ವಿಧಾನಸಭೆ ಉಪ ಚುನಾವಣೆಗೆ ಮತದಾನ ನಡೆದಿತ್ತು,ಅಂದೇ ನಟ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದ್ದರು. ಇದೇ ಕಾರಣದಿಂದ ಮತದಾರರು ಮತ ನೀಡದೆ ಸೋಲು ಕಂಡಿತೇ ಎಂಬ ಕಾರಣ ಕೇಳಿಬರುತ್ತಿದೆ. ನಟ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಅಚ್ಚು ಕಟ್ಟಾಗಿ …

ಬೊಮ್ಮಾಯಿ ತವರೂರು ಹಾನಗಲ್ ನ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವು !?? Read More »

ಸುಬ್ರಹ್ಮಣ್ಯ: ಕುಮಾರಧಾರ ನದಿಗೆ ಹಾರಲು ಯತ್ನಿಸಿದ ವೃದ್ಧ, ವೃದ್ಧನನ್ನು ರಕ್ಷಿಸಿದ ಬಜರಂಗದಳದ ಕಾರ್ಯಕರ್ತ

ಹಾಸನ ಮೂಲದ ವೃದ್ಧರೊಬ್ಬರು ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ಹಾರಲು ಪ್ರಯತ್ನಿಸಿದ ಘಟನೆ ನಡೆದಿದೆ. ವೃದ್ಧ ಕುಮಾರಧಾರ ನದಿಯ ಸೇತುವೆ ಮೇಲಿಂದ ಕೆಳಗೆ ಹಾರಲು ಯತ್ನಿಸುತ್ತಿದ್ದನ್ನು ಕಂಡ ಸ್ಥಳೀಯ ಬಜರಂಗಳದ ಕಾರ್ಯಕರ್ತ ಸುನಿಲ್ ಸುಬ್ರಹ್ಮಣ್ಯ ಎಂಬವರು ವೃದ್ಧರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಿಸಿದ ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವೃದ್ಧನನ್ನು ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

12 ಲಕ್ಷ ಹಣತೆಗಳ ಬೆಳಕಿನಲ್ಲಿ ಕಂಗೊಳಿಸಲಿದೆ ಶ್ರೀರಾಮನ ಜನ್ಮಭೂಮಿ ಅಯೋಧ್ಯೆ!! | ಗಿನ್ನಿಸ್ ಪುಟ ಸೇರಲಿದೆ ಈ ಬಾರಿಯ ದೀಪಾವಳಿ

ಖುಷಿಯ ದೀಪಗಳ ಹಬ್ಬ ಮತ್ತೆ ಬಂದಿದೆ. ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಸಡಗರದ ಹಬ್ಬಗಳಲ್ಲಿ ದೀಪಾವಳಿ ಕೂಡಾ ಒಂದು. ಮನೆ ಮುಂದೆ ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ, ಲಕ್ಷ್ಮೀ ಪೂಜೆ, ಗೋಪೂಜೆ ಸೇರಿದಂತೆ ಹಲವು ಪೂಜೆಗಳ ಮೂಲಕ ದೇವರನ್ನು ಅರ್ಚಿಸಿ ಈ ಹಬ್ಬವನ್ನು ಆಚರಿಸುವ ಖುಷಿಯೇ ಬೇರೆ. ಹೀಗಿರುವಾಗ ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ವಿಶೇಷವಾಗಿರಲಿದ್ದು, ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಲಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸುವ ಲೆಕ್ಕಚಾರದಲ್ಲಿರುವ …

12 ಲಕ್ಷ ಹಣತೆಗಳ ಬೆಳಕಿನಲ್ಲಿ ಕಂಗೊಳಿಸಲಿದೆ ಶ್ರೀರಾಮನ ಜನ್ಮಭೂಮಿ ಅಯೋಧ್ಯೆ!! | ಗಿನ್ನಿಸ್ ಪುಟ ಸೇರಲಿದೆ ಈ ಬಾರಿಯ ದೀಪಾವಳಿ Read More »

ಮದುವೆಯಾಗಿ ಎಂಟು ವರ್ಷಗಳಾದರೂ ಒಂದು ಬಾರಿಯೂ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡದ ಗಂಡ | ಈ ಕಾರಣಕ್ಕಾಗಿ ಪತ್ನಿ ಕೈಗೊಂಡ ತೀರ್ಮಾನವೇನು ಗೊತ್ತಾ??

ಯಾವುದೇ ಗಿಡವನ್ನು ನೆಟ್ಟ ಬಳಿಕ ಹಾಗೆ ಬಿಟ್ಟರೆ, ಅದು ಅಲ್ಲೇ ಬಾಡಿ ಹೋಗಿ ಸತ್ತು ಹೋಗುವುದು. ಸಂಬಂಧವು ಕೂಡ ಇದೇ ರೀತಿ. ಸಂಬಂಧಕ್ಕಾಗಿ ಹೆಚ್ಚು ಸಮಯ ನೀಡಬೇಕು. ಅದರಲ್ಲೂ ಗಂಡ-ಹೆಂಡತಿ ಸಂಬಂಧ. ತುಂಬಾ ಪ್ರಮುಖ ಸಂಬಂಧಗಳಲ್ಲೊಂದಾಗಿದೆ. ಒಂದು ಸಂಸಾರ ಸುಸೂತ್ರವಾಗಿ ನಡೆಯಬೇಕೆಂದರೆ ಅಲ್ಲಿ ಪತಿ-ಪತ್ನಿಯರಿಬ್ಬರ ಏಕ ಭಾವವೂ ಅಗತ್ಯ. ಮೊದಲು ಇಬ್ಬರೂ ನಾನು- ನಾನೆಂಬ ಅಹಂಕಾರವನ್ನು ತೊರೆದಿರಬೇಕು. ಗಂಡ-ಹೆಂಡತಿಯ ಮಧ್ಯೆ ಒಂದೂ ರಹಸ್ಯ ವಿಚಾರವುಳಿದಿಲ್ಲದಿದ್ದರೆ ಮಾತ್ರ ಅದು ಸುಖೀ ಸಂಸಾರವಾಗಿರಲು ಸಾಧ್ಯ. ಗಂಡ-ಹೆಂಡತಿ ಅಂದ್ರೆ ಒಬ್ಬರಿಗೆ ಮತ್ತೊಬ್ಬರು …

ಮದುವೆಯಾಗಿ ಎಂಟು ವರ್ಷಗಳಾದರೂ ಒಂದು ಬಾರಿಯೂ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡದ ಗಂಡ | ಈ ಕಾರಣಕ್ಕಾಗಿ ಪತ್ನಿ ಕೈಗೊಂಡ ತೀರ್ಮಾನವೇನು ಗೊತ್ತಾ?? Read More »

ಬೆಳ್ತಂಗಡಿ | ಮುಂಡಾಜೆಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸರ ದಾಳಿ, ಎರಡು ಟಿಪ್ಪರ್ ಹಾಗೂ ದೋಣಿ ವಶಕ್ಕೆ

ಮರಳುಗಾರಿಗೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ಎಎಸ್ಪಿ ಮತ್ತು ತಂಡ ಇಂದು ಬೆಳಗ್ಗಿನ ಜಾವ ಮಾರುವೇಷದಲ್ಲಿ ಏಕಾಏಕಿ ದಾಳಿ ನಡೆಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡಾಜೆ ಗ್ರಾಮದ ಹೊಸಕಾಪು ಎಂಬಲ್ಲಿ ನಡೆದಿದೆ. ದಾಳಿ ವೇಳೆ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿ ಹಾಗೂ ಎರಡು ಟಿಪ್ಪರ್ ವಾಹನವನ್ನು ವಶಪಡಿಸಿಕೊಂಡು ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಟಿಪ್ಪರ್ ವಾಹನ ಉಜಿರೆ ಮತ್ತು ಸೋಮಂತ್ತಡ್ಕದ ನಿವಾಸಿಗಳಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಎರಡು ಕಡೆ ದಾಳಿ ನಡೆದಿದ್ದು, ಈ …

ಬೆಳ್ತಂಗಡಿ | ಮುಂಡಾಜೆಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸರ ದಾಳಿ, ಎರಡು ಟಿಪ್ಪರ್ ಹಾಗೂ ದೋಣಿ ವಶಕ್ಕೆ Read More »

error: Content is protected !!
Scroll to Top