Day: October 26, 2021

ಸಂಬಂಧಿಕರ ಮನೆಗೆ ಬಂದಿದ್ದ ಯುವಕ ತೋಡಿಗೆ ಬಿದ್ದು ಸಾವು

ಉಡುಪಿ :ಸಂಬಂಧಿಕರ ಮನೆಗೆ ಬಂದಿದ್ದ ಯುವಕನೋರ್ವ ಆಕಸ್ಮಿಕವಾಗಿ ತೋಡಿನ ನೀರಿನಲ್ಲಿ ಜಾರಿ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಕಲ್ಲಗುಂಡಿ ಎಂಬಲ್ಲಿ ಮಂಗಳವಾರ ನಡೆದಿದೆ. ಮೃತ ಯುವಕನನ್ನು ಬಾಳೆಹೊನ್ನೂರಿನ ಪ್ರವೀಣ್ ( 19 ) ಎಂದು ಗುರುತಿಸಲಾಗಿದೆ. ಬಾಳೆಹೊನ್ನೂರು ನಿವಾಸಿಯಾಗಿರುವ ಪ್ರವೀಣ್ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬಂದಿದ್ದು ಮಂಗಳವಾರ ಮಧ್ಯಾಹ್ನ ಮನೆಯ ಸಮೀಪದ ತೋಡಿಗೆ ಮನೆಯವರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿಗೆ ಬಿದ್ದು ಸುಳಿಗೆ ಸಿಕ್ಕಿ ನೀರಿನಲ್ಲಿ ಮುಳುಗಿ …

ಸಂಬಂಧಿಕರ ಮನೆಗೆ ಬಂದಿದ್ದ ಯುವಕ ತೋಡಿಗೆ ಬಿದ್ದು ಸಾವು Read More »

ಹವ್ಯಕರ ಸಂಬಂಧ ಬೆಳೆಸಿದ ಮಲ್ಲಿಕಾರ್ಜುನ ಖರ್ಗೆ | ವಿಟ್ಲದ ಪಾಣಿನಿ ಭಟ್ ಅವರಿಗೆ ತನ್ನ ಮೊಮ್ಮಗಳು ಪ್ರಾರ್ಥನಾರನ್ನು ಮದುವೆ ಮಾಡಿಸಿದ ಕಾಂಗ್ರೆಸ್ ಹಿರಿಯ ಮುಖಂಡ

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕರಾವಳಿಯ ಹವ್ಯಕ ಬ್ರಾಹ್ಮಣರ ಜೊತೆ ಸಂಬಂಧ ಬೆಳೆಸಿದ್ದಾರೆ. ದಲಿತ ಸಮುದಾಯದ ಖರ್ಗೆಯವರ ಮೊಮ್ಮಗಳ ವಿವಾಹ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಹವ್ಯಕ ಬ್ರಾಹ್ಮಣ ಯುವಕನ ಜೊ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಲೋಕಸಭೆಯ ಪ್ರತಿಪಕ್ಷದ ನಾಯಕ ಖರ್ಗೆ ಹವ್ಯಕ ಬ್ರಾಹ್ಮಣರ ಮನೆಯ ಬೀಗರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಪುತ್ರಿ ಜಯಶ್ರೀ ಮತ್ತು ರಾಧಾಕೃಷ್ಣ ದಂಪತಿಯ ಪುತ್ರಿ ಪ್ರಾರ್ಥನಾರನ್ನು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಗಿಲ್ಕಿಂಜಿ ಮನೆಯ …

ಹವ್ಯಕರ ಸಂಬಂಧ ಬೆಳೆಸಿದ ಮಲ್ಲಿಕಾರ್ಜುನ ಖರ್ಗೆ | ವಿಟ್ಲದ ಪಾಣಿನಿ ಭಟ್ ಅವರಿಗೆ ತನ್ನ ಮೊಮ್ಮಗಳು ಪ್ರಾರ್ಥನಾರನ್ನು ಮದುವೆ ಮಾಡಿಸಿದ ಕಾಂಗ್ರೆಸ್ ಹಿರಿಯ ಮುಖಂಡ Read More »

ರೆಂಜಿಲಾಡಿ: ನಿಲ್ಲದ ಕಾಡಾನೆ ಹಾವಳಿ; ಅಪಾರ ಕೃಷಿ ಹಾನಿ

ಕಡಬ: ಕೃಷಿ ತೋಟಕ್ಕೆ ನಿರಂತರ ಕಾಡಾನೆ ಲಗ್ಗೆ ಇಡುತ್ತಿರುವ ಪರಿಣಾಮ ಕೃಷಿಕರು ಅಪಾರ ನಷ್ಟ ಅನುಭವಿಸುತ್ತಿರ ಸ್ಥಿತಿ ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಪಂಜ ವಲಯ ಅರಣ್ಯ ವ್ಯಾಪ್ತಿಯ ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮದಲ್ಲಿ ಸಂಭವಿಸುತ್ತಿದೆ.ಕಳೆದ ಹಲವು ದಿನಗಳಿಂದ ರೆಂಜಿಲಾಡಿ ಗ್ರಾಮದಲ್ಲಿ ಕಾಡಾನೆ ಕೃಷಿ ತೋಟಕ್ಕೆ ದಾಳಿ ನಡೆಸಿ ಹಾನಿಗೈಯುತ್ತಿದೆ. ಎಳುವಾಳೆ ರಾಮಚಂದ್ರ ಗೌಡ ಅವರ ತೋಟಕ್ಕೆ ಕಳೆದ ಹಲವು ದಿನಗಳಿಂದ ಕಾಡಾನೆ ಲಗ್ಗೆ ಇಟ್ಟು 100 ಅಧಿಕ ಬಾಳೆ, 50ಕ್ಕೂ ಅಧಿಕ ಅಡಿಕೆ, ತೆಂಗು, ನೀರಿನ ಪೈಪ್ …

ರೆಂಜಿಲಾಡಿ: ನಿಲ್ಲದ ಕಾಡಾನೆ ಹಾವಳಿ; ಅಪಾರ ಕೃಷಿ ಹಾನಿ Read More »

ಪಾಕ್ ವಿರುದ್ಧದ ಒಂದು ಸೋಲಿನಿಂದ ವಿಶ್ವಕಪ್ ಅಭಿಯಾನ ಅಂತ್ಯವಾಗದು- ವಿರಾಟ್ ಕೊಹ್ಲಿ

ಈವರೆಗೆ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸದ ಭಾರತ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸಿದೆ. ಇದಕ್ಕೆ ಭಾರತದ ಆಟಗಾರರ ವಿರುದ್ಧ ಹಲವು ಟೀಕೆಗಳು ಈಗಾಗಲೇ ಕೇಳಿಬಂದಿದೆ. ಅದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ತಂಡ ನಮಗಿಂತ ಅತ್ಯುತ್ತಮ ಪ್ರದರ್ಶನ ತೋರಿದೆ ಎಂಬುದನ್ನು ಒಪ್ಪಿಕೊಳ್ಳಲು ನಾಚಿಕೆಪಡಬೇಕಾದ ಅಗತ್ಯವಿಲ್ಲ. ಈ ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ ಎಂದು ವಿರಾಟ್‌ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. “ಪಾಕಿಸ್ತಾನ ತಂಡ ನಮ್ಮನ್ನು ಮೀರಿಸಿದ …

ಪಾಕ್ ವಿರುದ್ಧದ ಒಂದು ಸೋಲಿನಿಂದ ವಿಶ್ವಕಪ್ ಅಭಿಯಾನ ಅಂತ್ಯವಾಗದು- ವಿರಾಟ್ ಕೊಹ್ಲಿ Read More »

ಮಂಗಳೂರಿನಲ್ಲಿ1500 ಕೆಜಿ ಭಾರೀ ಮೀನು ಸಿಕ್ಕ ಸಂಭ್ರಮ | ಆದರೆ ಮೀನುಗಾರರಿಗೆ ಆಗಿದೆ 1.5 ಲಕ್ಷ ಲಾಸ್ !!

ಅರಬ್ಬೀ ಸಮುದ್ರದಲ್ಲಿ ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದ್ದು, ದೈತ್ಯ ಮೀನು ಹಿಡಿದ ಮೀನುಗಾರರ ಮುಖದಲ್ಲಿ ವಿಶೇಷ ಸಂತಸ ಮನೆಮಾಡಿದೆ. ಅಷ್ಟು ದೊಡ್ಡ ಮೀನು ಹಿಡಿದರು ಮೀನುಗಾರರಿಗೆ ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಮೀನು ಸಿಕ್ಕರೂ ನಷ್ಟವೇ ?!.. ಹೌದು, ಬನ್ನಿ ಈ ಸುದ್ದಿ ಓದಿ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ತೆರಳಿತ್ತು.ಕಳೆದ 10 ದಿನಗಳ ಹಿಂದೆ ಈ ಬೋಟ್ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿತ್ತು. …

ಮಂಗಳೂರಿನಲ್ಲಿ1500 ಕೆಜಿ ಭಾರೀ ಮೀನು ಸಿಕ್ಕ ಸಂಭ್ರಮ | ಆದರೆ ಮೀನುಗಾರರಿಗೆ ಆಗಿದೆ 1.5 ಲಕ್ಷ ಲಾಸ್ !! Read More »

ದೀಪಾವಳಿಯಂದು ದೇವಸ್ಥಾನಗಳಲ್ಲಿ ಗೋಪೂಜೆ ಮಾಡಲು ಸರಕಾರ ಆದೇಶ

ದೀಪಾವಳಿ ಹಬ್ಬದಂದು ದೇವಸ್ಥಾನಗಳಲ್ಲಿ ಗೋಪೂಜೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ನವೆಂಬರ್ 5ರ ಬಲಿಪಾಡ್ಯಮಿಯಂದು ಪೂಜೆ ಸಲ್ಲಿಸಲು ಆದೇಶ ನೀಡಲಾಗಿದೆ. ಸಂಜೆ 5.30 ರಿಂದ 6.30ರ ವೇಳೆಯಲ್ಲಿ ಪೂಜೆ ನಡೆಸಲು ಸೂಚನೆ ನೀಡಲಾಗಿದೆ. ಬಲಿಪಾಡ್ಯಮಿ ದಿನದಂದು ಮುಜುರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲು ಹಿಂದು ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಕೊಡಲಾಗಿದೆ. ಬಲಿಪಾಡ್ಯಮಿ ದಿನ ಸಂಜೆ 5.30 ರಿಂದ 6.30ರ ಸಮಯದಲ್ಲಿ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಸ್ನಾನ ಮಾಡಿಸಿ ದೇವಾಲಯದಲ್ಲಿ …

ದೀಪಾವಳಿಯಂದು ದೇವಸ್ಥಾನಗಳಲ್ಲಿ ಗೋಪೂಜೆ ಮಾಡಲು ಸರಕಾರ ಆದೇಶ Read More »

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಲಕ್ಷ ಲಕ್ಷ ಸಂಬಳ ಸಿಗುವ ಉದ್ಯೋಗ | ಜಸ್ಟ್ ಫುಡ್ ಟೇಸ್ಟ್ ಹೇಳಿದರೆ ಸಾಕು… ಅಷ್ಟೇ ಕೆಲಸವಂತೆ !!

ಇವಾಗ ಅಂತೂ ಕೆಲಸ ಇಲ್ಲದೆ ಅದೆಷ್ಟೋ ಮಂದಿ ಮನೆಯಲ್ಲೇ ಕೂತವರು ಇದ್ದಾರೆ.ಅಂತವರಿಗೆ ಇಲ್ಲೊಂದು ಕೆಲಸ ಇದೆ.ಈ ರೀತಿಯ ಉದ್ಯೋಗವಕಾಶ ಅದೃಷ್ಟವಂತರಿಗೆ ಮಾತ್ರ ಸಿಗುವುದಕ್ಕೆ ಸಾಧ್ಯ.ಇದು ಒಂದು ರೀತಿಯ ‘ಡ್ರೀಮ್ ಜಾಬ್’ ಅಂತಲೇ ಹೇಳಬಹುದು.ಇಲ್ಲಿ ಯಾವುದೇ ರೀತಿಯ ಒತ್ತಡಮಯ ಕೆಲಸವೂ ಇರುವುದಿಲ್ಲ.ನೀವು ತುಂಬಾ ಆರಾಮಾಗಿ ಓಡಾಡಿಕೊಂಡೇ ಕೆಲಸ ಮಾಡಬಹುದು. ಅದೆಷ್ಟೋ ಮಂದಿ ನಮಗೂ ಯಾವುದೇ ರೀತಿಯ ಒತ್ತಡವಿಲ್ಲದ ಕೆಲಸ ಸಿಗಲಿ ಅಂತಾ ಅಂದುಕೊಳ್ಳುತ್ತಲೇ ಜೀವನ ಸಾಗಿಸುತ್ತಿರುತ್ತಾರೆ.ಇಂತವರಿಗೆ ನಾವು ಇಂದು ತಿಳಿಸುತ್ತಿರುವ ಕೆಲಸದ ಬಗ್ಗೆ ಗೊತ್ತಾದರೆ ನಿಮಗೆ ಅಚ್ಚರಿಯ ಜೊತೆಗೆ …

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಲಕ್ಷ ಲಕ್ಷ ಸಂಬಳ ಸಿಗುವ ಉದ್ಯೋಗ | ಜಸ್ಟ್ ಫುಡ್ ಟೇಸ್ಟ್ ಹೇಳಿದರೆ ಸಾಕು… ಅಷ್ಟೇ ಕೆಲಸವಂತೆ !! Read More »

ಭಾರಿ ಮಳೆಯ ಜೊತೆಗೆ ಆಕಾಶದಿಂದ ತಪತಪ ಉದುರಿದ ಮೀನುಗಳು!! | ಮೀನಿನ ಮಳೆಯಲ್ಲಿ ಸುಮಾರು 50 ಕೆ.ಜಿಯಷ್ಟು ಮೀನು ಸಂಗ್ರಹಿಸಿದ ಸ್ಥಳೀಯರು

ಆಗಸದಿಂದ ಒಂದೊಮ್ಮೆ ಭೋರ್ಗರೆವ ಮಳೆ ಜೊತೆಗೆ ಆಲಿಕಲ್ಲು ಬೀಳುವುದನ್ನು ಕೇಳಿರುತ್ತೇವೆ, ಜೊತೆಗೆ ಒಮ್ಮೆಯಾದರೂ ನೋಡಿರುತ್ತೇವೆ. ಆದರೆ ಎಂದಾದರೂ ಮೀನಿನ ಮಳೆ ಬಿದ್ದಿರುವುದನ್ನು ಕೇಳಿದ್ದೀರಾ. ಹೌದು, ನಿಮಗೆ ಅಚ್ಚರಿಯೆನಿಸಿದ್ರೂ ಇದು ನಿಜ ಘಟನೆ. ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಜನರು ಆಶ್ಚರ್ಯದ ಜೊತೆಗೆ ಆತಂಕಕ್ಕೆ ಒಳಗಾಗಿದ್ದಾರೆ. ಭದೋಹಿ ಪ್ರದೇಶದಲ್ಲಿ ಸೋಮವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಜೋರಾದ ಗಾಳಿ ಮಳೆಯ ಜೊತೆಗೆ ಆಕಾಶದಿಂದ ಮೀನುಗಳು ಸುರಿದಿವೆ. ಮೀನುಗಳು ಬೀಳುತ್ತಿರುವುದನ್ನು ಕಂಡ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಇದೊಂದು …

ಭಾರಿ ಮಳೆಯ ಜೊತೆಗೆ ಆಕಾಶದಿಂದ ತಪತಪ ಉದುರಿದ ಮೀನುಗಳು!! | ಮೀನಿನ ಮಳೆಯಲ್ಲಿ ಸುಮಾರು 50 ಕೆ.ಜಿಯಷ್ಟು ಮೀನು ಸಂಗ್ರಹಿಸಿದ ಸ್ಥಳೀಯರು Read More »

ಕೆಸರು ಮಿಶ್ರಿತ ನೀರಿಗೆ ಸುಳ್ಯ ನಗರ ಪಂಚಾಯತ್ ನೇರ ಹೊಣೆ:-SDPI

▪️ಸುಸಜ್ಜಿತ ನೀರು ಶುದ್ಧ ನೀರಿನ ಘಟಕ ಸ್ಥಾಪಿಸಲು ಆಗ್ರಹ ಸುಳ್ಯ,ಅ 26:- ನಗರದಲ್ಲಿ ಸರಬರಾಜು ಆಗುತ್ತಿರುವ ಕುಡಿಯುವ ನೀರು ಕೆಸರು ಮಿಶ್ರಿತ ಗೊಂಡು ನೀರಿನಲ್ಲಿ ವ್ಯತ್ಯಯ ಉಂಟಾಗಲು ಸುಳ್ಯ ನಗರ ಪಂಚಾಯತ್ ನೇರ ಕಾರಣವಾಗಿದೆಯೆಂದು SDPI ಸುಳ್ಯ ನಗರಾಧ್ಯಕ್ಷ ಅಥಾವುಲ್ಲಾ ಸುಳ್ಯ ಆರೋಪಿಸಿದ್ದಾರೆ. ಕುಡಿಯುವ ನೀರು ಮೂಲಭೂತ ಸೌಕರ್ಯ ವಾಗಿದ್ದರು ಇದರ ಬಗ್ಗೆ ಸುಳ್ಯ ನಗರ ಪಂಚಾಯತ್ ನಿರಂತರವಾಗಿ ನಿರ್ಲಕ್ಷ್ಯ ವಹಿಸಿದ ಕಾರಣದಿಂದಲೇ ಈ ರೀತಿಯ ಘಟನೆಗಳು ನಡೆಯಲು ಕಾರಣವಾಗಿದೆ. 15 ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ …

ಕೆಸರು ಮಿಶ್ರಿತ ನೀರಿಗೆ ಸುಳ್ಯ ನಗರ ಪಂಚಾಯತ್ ನೇರ ಹೊಣೆ:-SDPI Read More »

ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮಾತನಾಡುವ ಸ್ಪರ್ಧೆ | ಪ್ರ-50 ಸಾವಿರ,ದ್ವಿ-30 ಸಾವಿರ,ತೃ-20 ಸಾವಿರ ರೂ. ಬಹುಮಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಕನ್ನಡ ಮಾತನಾಡುವ ಸ್ವರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಸಾರ್ವಜನಿಕರಿಗಾಗಿ ನಡೆಯ ಲಿದ್ದು, ಎಲ್ಲ ಕನ್ನಡಿಗರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಹಂತದ ಹಾಗೂ ಹೊರನಾಡಿನವರಿಗಾಗಿ ಇರುವ ಮೊದಲ ಹಂತದ ಸ್ಪರ್ಧೆಯಲ್ಲಿ ಅ.26ರ ರಾತ್ರಿ 10 ಗಂಟೆಯ ಒಳಗೆ ಕೇಳಲಾದ ಅಗತ್ಯ ಮಾಹಿತಿಯೊಂದಿಗೆ ಫೇಸ್‌ಬುಕ್ ಅಥವಾ ಯುಟ್ಯೂಬ್ ವೀಡಿಯೊ ಕೊಂಡಿಯನ್ನು ಗೂಗಲ್ ನಮೂನೆಯಲ್ಲಿ ನಮೂದಿಸತಕ್ಕದ್ದು. ಫೇಸ್‌ಬುಕ್ ಅಥವಾ ಯುಟ್ಯೂಬ್‌ನಲ್ಲಿ ಯಾವುದಾದರೂ ಒಂದರಲ್ಲಿ ವೀಡಿಯೊ ಅಪ್‌ಲೋಡ್ …

ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮಾತನಾಡುವ ಸ್ಪರ್ಧೆ | ಪ್ರ-50 ಸಾವಿರ,ದ್ವಿ-30 ಸಾವಿರ,ತೃ-20 ಸಾವಿರ ರೂ. ಬಹುಮಾನ Read More »

error: Content is protected !!
Scroll to Top