ಪಾಕ್ ವಿರುದ್ಧದ ಒಂದು ಸೋಲಿನಿಂದ ವಿಶ್ವಕಪ್ ಅಭಿಯಾನ ಅಂತ್ಯವಾಗದು- ವಿರಾಟ್ ಕೊಹ್ಲಿ

ಈವರೆಗೆ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸದ ಭಾರತ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸಿದೆ. ಇದಕ್ಕೆ ಭಾರತದ ಆಟಗಾರರ ವಿರುದ್ಧ ಹಲವು ಟೀಕೆಗಳು ಈಗಾಗಲೇ ಕೇಳಿಬಂದಿದೆ. ಅದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಪಾಕಿಸ್ತಾನ ತಂಡ ನಮಗಿಂತ ಅತ್ಯುತ್ತಮ ಪ್ರದರ್ಶನ ತೋರಿದೆ ಎಂಬುದನ್ನು ಒಪ್ಪಿಕೊಳ್ಳಲು ನಾಚಿಕೆಪಡಬೇಕಾದ ಅಗತ್ಯವಿಲ್ಲ. ಈ ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ ಎಂದು ವಿರಾಟ್‌ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

“ಪಾಕಿಸ್ತಾನ ತಂಡ ನಮ್ಮನ್ನು ಮೀರಿಸಿದ ಪ್ರದರ್ಶನ ತೋರಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಪಂದ್ಯದಲ್ಲಿ ನಮಗೆ ಯಾವುದೇ ಅವಕಾಶವಿರಲಿಲ್ಲ. ಟಾಸ್‌ ಹಾಗೂ ರಾತ್ರಿಯ ಮಂಜು ಕೂಡ ಫ‌ಲಿತಾಂಶದ ಮೇಲೆ ಪರಿಣಾಮ ಬೀರಿತು” ಎಂದು ಕೊಹ್ಲಿ ಹೇಳಿದರು.

“ಪಾಕಿಸ್ತಾನದ ಆಟಗಾರರು ವೃತ್ತಿಪರರರಾಗಿದ್ದಾರೆ. ಹಾಗಾಗಿ ಅವರಿಗೆ ಗೆಲುವಿನ ಶ್ರೇಯ ಸಲ್ಲಬೇಕು. ನಾವು ಗರಿಷ್ಠ ಪ್ರಯತ್ನ ಮಾಡಿದ್ದೇವೆ. ಸೋಲು-ಗೆಲುವು ಕ್ರೀಡೆಯಲ್ಲಿ ಸಾಮಾನ್ಯ. ಇದಕ್ಕೆ ಬೇರೆ ರೀತಿಯ ಬಣ್ಣ ಹಚ್ಚುವುದು ಸರಿಯಲ್ಲ” ಎಂದು ಕೊಹ್ಲಿ ಟೀಕಿಸಿದವರನ್ನು ಕುಟುಕಿದರು.

‘ಒಂದು ಪಂದ್ಯದ ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಲಿದೆ ಎಂದು ನಾವು ಭಾವಿಸುವುದಿಲ್ಲ. ಪಾಕ್‌ ವಿರುದ್ಧ ನಾವು ಉತ್ತಮ ಕ್ರಿಕೆಟ್‌ ಆಡಿಲ್ಲ, ಇದನ್ನು ಒಪ್ಪಿಕೊಳ್ಳಬೇಕು. ಆದರೆ ಮುಂದಿನ ಪಂದ್ಯದಲ್ಲಿ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಗೆಲುವಿನ ಹಳಿ ಏರುವ ಅವಕಾಶ ಇದ್ದೇ ಇದೆ. ಇದು ಖಚಿತ’ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Leave A Reply

Your email address will not be published.