ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಲಕ್ಷ ಲಕ್ಷ ಸಂಬಳ ಸಿಗುವ ಉದ್ಯೋಗ | ಜಸ್ಟ್ ಫುಡ್ ಟೇಸ್ಟ್ ಹೇಳಿದರೆ ಸಾಕು… ಅಷ್ಟೇ ಕೆಲಸವಂತೆ !!

ಇವಾಗ ಅಂತೂ ಕೆಲಸ ಇಲ್ಲದೆ ಅದೆಷ್ಟೋ ಮಂದಿ ಮನೆಯಲ್ಲೇ ಕೂತವರು ಇದ್ದಾರೆ.ಅಂತವರಿಗೆ ಇಲ್ಲೊಂದು ಕೆಲಸ ಇದೆ.ಈ ರೀತಿಯ ಉದ್ಯೋಗವಕಾಶ ಅದೃಷ್ಟವಂತರಿಗೆ ಮಾತ್ರ ಸಿಗುವುದಕ್ಕೆ ಸಾಧ್ಯ.ಇದು ಒಂದು ರೀತಿಯ ‘ಡ್ರೀಮ್ ಜಾಬ್’ ಅಂತಲೇ ಹೇಳಬಹುದು.ಇಲ್ಲಿ ಯಾವುದೇ ರೀತಿಯ ಒತ್ತಡಮಯ ಕೆಲಸವೂ ಇರುವುದಿಲ್ಲ.ನೀವು ತುಂಬಾ ಆರಾಮಾಗಿ ಓಡಾಡಿಕೊಂಡೇ ಕೆಲಸ ಮಾಡಬಹುದು.

ಅದೆಷ್ಟೋ ಮಂದಿ ನಮಗೂ ಯಾವುದೇ ರೀತಿಯ ಒತ್ತಡವಿಲ್ಲದ ಕೆಲಸ ಸಿಗಲಿ ಅಂತಾ ಅಂದುಕೊಳ್ಳುತ್ತಲೇ ಜೀವನ ಸಾಗಿಸುತ್ತಿರುತ್ತಾರೆ.ಇಂತವರಿಗೆ ನಾವು ಇಂದು ತಿಳಿಸುತ್ತಿರುವ ಕೆಲಸದ ಬಗ್ಗೆ ಗೊತ್ತಾದರೆ ನಿಮಗೆ ಅಚ್ಚರಿಯ ಜೊತೆಗೆ ಆಶ್ಚರ್ಯವೂ ಆಗುತ್ತದೆ.ಆ ಕೆಲಸ ಯಾವುದೆಂದು ಕುತೂಹಲವಿದ್ದರೆ ಮುಂದೆ ಓದಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೌದು. ಈ ಕೆಲಸ ಕೇವಲ ಆಹಾರ ಸೇವಿಸಿ ಅದರ ರುಚಿ ತಿಳಿಸಲು,ಕೆಲವು ಕಂಪನಿಗಳು ಲಕ್ಷ ಲಕ್ಷ ಸಂಬಳ ಕೊಟ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ.ಈ ಕೆಲಸಕ್ಕೆ ಇಂಗ್ಲೆಂಡ್ ನ ಕಂಪನಿಯೊಂದು ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಜಾಹೀರಾತನ್ನೂ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ ಈ ಉದ್ಯೋಗವನ್ನು ಪಡೆದುಕೊಳ್ಳಬಹುದು.

ಆಯ್ಕೆಯಾದ ಉದ್ಯೋಗಿಗೆ ವಿವಿಧ ರೀತಿಯ ಆಹಾರವನ್ನು ನೀಡಲಾಗುತ್ತದೆ. ಆಹಾರ ಸೇವಿಸಿ ಅದರ ರುಚಿ ಹೇಗಿದೆ ಅಂತಾ ತಿಳಿಸುವುದು ಉದ್ಯೋಗಿಯ ಕೆಲಸವಾಗಿರುತ್ತದೆ. ಇದಕ್ಕೆ ಯುಕೆ ಫುಡ್ ಕಂಪನಿ ಲಕ್ಷ ಲಕ್ಷ ಸಂಬಳವನ್ನು ಉದ್ಯೋಗಿಗೆ ಪಾವತಿಸುತ್ತದೆ. ಉದ್ಯೋಗಿ ರುಚಿಯನ್ನು ಪರೀಕ್ಷಿಸುವುದರ ಜೊತೆಗೆ ಆಹಾರವನ್ನು ಎಷ್ಟು ಚೆನ್ನಾಗಿ ತಯಾರಿಸಲಾಗಿದೆ ಎಂಬುದರ ಬಗ್ಗೆ ತಿಳಿಸಬಹುದು. ಅದರಲ್ಲಿ ಏನಾದರೂ ಕೊರತೆಯಿದ್ದರೆ ಉಪಯುಕ್ತ ಸಲಹೆ ನೀಡಬೇಕು.

‘ಬರ್ಡ್ಸ್ ಐ’ ಹೆಸರಿನ ಈ ಯುಕೆ ಮೂಲದ ಕಂಪನಿಯು ಚಿಕನ್ ಡಿಪ್ಪರ್‌ಗಳನ್ನು ತಯಾರಿಸುತ್ತದೆ. ಗರಿಗರಿಯಾಗಿ ಡಿಪ್ಪರ್‌ಗಳ ರುಚಿ ಬಗ್ಗೆ ಉದ್ಯೋಗಿ ತಿಳಿಸಬೇಕು. ಕೆಲಸದ ಸಂಪೂರ್ಣ ಮಾಹಿತಿಯನ್ನು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ನೀಡಿದೆ. ಆಯ್ಕೆಯಾದ ಅಭ್ಯರ್ಥಿ ಚೀಫ್ ಡಿಪ್ಪಿಂಗ್ ಆಫೀಸರ್ ಹುದ್ದೆಯನ್ನು ಪಡೆಯುತ್ತಾನೆ. ಬಳಿಕ ಕಂಪನಿಯಲ್ಲಿ ತಯಾರಿಸಿದ ಆಹಾರದ ರುಚಿ ಮತ್ತು ಗುಣಮಟ್ಟದ ಬಗ್ಗೆ ಬಾಸ್‌ಗೆ ತಿಳಿಸಬೇಕಾಗುತ್ತದೆ.

error: Content is protected !!
Scroll to Top
%d bloggers like this: