Day: September 6, 2021

ಶಾಲೆಗಳ ಬಳಿ ಹಾದು ಹೋಗುವ ವಿದ್ಯುತ್ ತಂತಿ ತೆರವುಗೊಳಿಸಲು ಹೈಕೋರ್ಟ್ ಸೂಚನೆ

ರಾಜ್ಯಾದ್ಯಂತ ಶಾಲೆಗಳ ಬಳಿ ಹಾದು ಹೋಗುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಬೇಕೆಂದು ಹೈಕೋರ್ಟ್ ಸೂಚನೆ ನೀಡಿದೆ. ಸ್ವಾತಂತ್ರ್ಯ ದಿನಾಚರಣೆಯಂದು ತುಮಕೂರಿನ ಶಾಲೆಯೊಂದರಲ್ಲಿ ಧ್ವಜಸ್ತಂಭ ನೆಡುವ ವೇಳೆ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಅದೇಶ ಹೊರಡಿಸಿದೆ. ಮೃತ ಬಾಲಕನ ಕುಟುಂಬಕ್ಕೆ ಸರಕಾರವು 1 ಲಕ್ಷದ ಬದಲಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

ದ.ಕ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಕುರಿತು ಮಾರ್ಗಸೂಚಿ ಹೊರಡಿಸಿದ ಜಿಲ್ಲಾಡಳಿತ

ರಾಜ್ಯ ಸರ್ಕಾರ ಹೊರಡಿಸಿದ ಆದೇಶದಲ್ಲಿ ಕೆಲವು ಬದಲಾವಣೆ ಮಾಡಿದ ಜಿಲ್ಲಾಡಳಿತ ದ.ಕ ಜಿಲ್ಲೆಯಲ್ಲಿ 3 ದಿನ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದೆ. ದೇವಸ್ಥಾನ, ಸಮುದಾಯ ಭವನ, ಮನೆಗಳಲ್ಲಿ ಸರಳ ಆಚರಣೆ ನಡೆಸುವಂತೆ ಸೂಚಿಸಲಾಗಿದೆ. ಶಾಮಿಯಾನ, ಪೆಂಡಾಲ್ ಹಾಕಿ ಗಣೇಶೋತ್ಸವ ಆಚರಣೆಗೆ ಅವಕಾಶವನ್ನು ನಿರಾಕರಿಸಲಾಗಿದೆ,ಯಾವುದೇ ಮೈದಾನ ಅಥವಾ ಜನನಿಬಿಡ ಪ್ರದೇಶಗಳಲ್ಲಿ ಆಚರಣೆ ನಡೆಸುವಂತಿಲ್ಲ ಎಂದು ದ.ಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.

ಆತೂರು : ಬೈಕ್‌ಗೆ ಜೀಪು ಡಿಕ್ಕಿ ,ಬೈಕ್ ಸವಾರ ಸಹಿತ ಇಬ್ಬರು ಗಂಭೀರ

ಕಡಬ : . ಜೀಪ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಜೀಪ್ ಪಲ್ಟಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಆತೂರು ನಿವಾಸಿ ಇಸ್ಮಾಯಿಲ್ ಎಂಬವರು ಸಾಮಾನು ಖರೀದಿಸಲೆಂದು ಅಂಗಡಿಗೆ ತೆರಳುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಆತೂರು ಕಡೆಗೆ ಬರುತ್ತಿದ್ದ ಜೀಪ್ ಆಯಿಶಾ ಶಾಲೆಯ ಬಳಿ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ರಸ್ತೆಗೆಸೆಯಲ್ಪಟ್ಟ ಇಸ್ಮಾಯಿಲ್ ಹಾಗೂ ಜೀಪ್ ನಲ್ಲಿದ್ದ ಶಿಹಾಬ್ ಗೋಳಿತ್ತಡಿ …

ಆತೂರು : ಬೈಕ್‌ಗೆ ಜೀಪು ಡಿಕ್ಕಿ ,ಬೈಕ್ ಸವಾರ ಸಹಿತ ಇಬ್ಬರು ಗಂಭೀರ Read More »

ಕಡಬ ತಾಲೂಕಿಗೆ ಸರಕಾರಿ ಪದವಿ ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ತಹಶಿಲ್ದಾರರಿಗೆ ಮನವಿ

ಕಡಬ.ಸೆ 06: ಕಡಬ ತಾಲೂಕು ಶೈಕ್ಷಣಿಕವಾಗಿ ಬೆಳೆಯುತ್ತಿರುವ ನಾಡು. ಆದರೆ ಇಲ್ಲಿ ಒಂದೇ ಒಂದು ಸರಕಾರಿ ಪದವಿ‌ ಕಾಲೇಜು ಇಲ್ಲ ಎನ್ನುವುದು ಕಡಬ ತಾಲೂಕಿಗೆ ಕಪ್ಪುಚುಕ್ಕೆಯಾಗಿದೆ. ಆದ್ದರಿಂದ ಶೀಘ್ರವಾಗಿ ತಾಲೂಕಿಗೆ ಸರಕಾರಿ ಪದವಿ ಕಾಲೇಜು ಮಂಜೂರುಗೊಳಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಉಪ್ಪಿನಂಗಡಿ ವತಿಯಿಂದ ಕಡಬ ತಹಶಿಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಡಬದಿಂದ ಹಲವಾರು ವಿದ್ಯಾರ್ಥಿಗಳು ತಮ್ಮ ಪದವಿ ಕಲಿಕೆಗಾಗಿ ದೂರದ ಕಾಲೇಜನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ತಾಲೂಕಿನ ಹಲವಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ …

ಕಡಬ ತಾಲೂಕಿಗೆ ಸರಕಾರಿ ಪದವಿ ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ತಹಶಿಲ್ದಾರರಿಗೆ ಮನವಿ Read More »

ನೆಟ್ಟಣ ರೈಲ್ವೆ ಸ್ಟೇಷನ್ ಪಕ್ಕದ ಗುಡ್ಡದಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

ಕಡಬ : ಸುಬ್ರಹ್ಮಣ್ಯ ಸಮೀಪದ ನೆಟ್ಟಣ ರೈಲ್ವೇ ನಿಲ್ದಾಣದ ಸಮೀಪ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.ಈ ಮೃತದೇಹದ ಗುರುತು ಪತ್ತೆಯಾಗಿದೆ. ಪಕ್ಕದ ಗುಡ್ಡದಲ್ಲಿ ಮಲಗಿರುವ ಸ್ಥಿತಿಯಲ್ಲಿ ಈ ಮೃತದೇಹ ಪತ್ತೆಯಾಗಿದೆ.ಬಾಯಿಯಲ್ಲಿ ರಕ್ತದ ಕಲೆ ಕಾಣಿಸಿಕೊಂಡಿದೆ.ಸ್ಥಳದಲ್ಲಿ ದೊರೆತ ದಾಖಲೆ ಪ್ರಕಾರ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಪತಂಜಲಿನಗರದ ದಿ.ಶಿವಲಿಂಗಯ್ಯರ ಪುತ್ರ ರಾಜಶೇಖರ್ ಎಂದು ಹೇಳಲಾಗಿದೆ. ಎಸ್.ಬಿ.ಐ ಇನ್ಸೂರೆನ್ಸ್ನ ಕುಣಿಗಲ್ ಬ್ರಾಂಚಿನ ಲೈಫ್ ಮಿತ್ರ ಎಂಬ ಐಡಿ ಕಾರ್ಡ್ ಪತ್ತೆಯಾಗಿದೆ. ಸ್ಥಳೀಯರು ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು,ಪೊಲೀಸರು ಪರಿಶೀಲನೆ ನಡೆಸಿ,ಮೃತದೇಹವನ್ನು …

ನೆಟ್ಟಣ ರೈಲ್ವೆ ಸ್ಟೇಷನ್ ಪಕ್ಕದ ಗುಡ್ಡದಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ Read More »

ನಾನ್ ಸಿಆರ್‌ಝೆಡ್ ಮರಳುಗಾರಿಕೆ ಪರವಾಗಿ ಕೋರ್ಟ್ ಆದೇಶ ,ಗಣಿ ಸಚಿವರೊಂದಿಗೆ ಮರಳು ಮಾರಾಟಗಾರರ ಸಂಘದ ಮಾತುಕತೆ

ಕಡಬ : ನಾನ್ ಸಿಆರ್ ಝೆಡ್ ಮರಳುಗಾರಿಕೆ ಕುರಿತು ಈಗಾಗಲೇ ಕೋರ್ಟ್ ನಲ್ಲಿ ಮರಳುಗಾರಿಕೆ ಪರವಾಗಿ ಆದೇಶ ಬಂದಿದೆ‌. ಈ ಕುರಿತು ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಹಾಲಪ್ಪ ಆಚಾರ್ ಅವರೊಂದಿಗೆ ಮರಳುಗಾರಿಕೆ ಆರಂಭಿಸುವ ಕುರಿತು ಮಾತುಕತೆ ನಡೆಸಲಾಯಿತು. ಮರಳುಗಾರಿಕೆ ನಡೆಸುವ ಕುರಿತು ಮರಳುಗಾರರ ಪರವಾಗಿ ದ.ಕ. ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಿನೇಶ್ ಮೆದು ಮತ್ತು ಸಂಘದ ಸದಸ್ಯರಾದ ಸುರೇಶ್ ಕುಂಡಡ್ಕ ಅವರು ಮಾತುಕತೆ ನಡೆಸಿದರು.

ಉಪ್ಪಿನಂಗಡಿ: ಹಿಂದೂ ಯುವಕನ ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ | ಆರೋಪಿಗಳ ಪತ್ತೆಗಾಗಿ ಹಿಂ.ಜಾ.ವೇ.ಯಿಂದ ಪೊಲೀಸ್ ಠಾಣೆಯ ಮುಂಭಾಗ ‘ಬೃಹತ್ ಧರಣಿ ಸತ್ಯಾಗ್ರಹ’

ಉಪ್ಪಿನಂಗಡಿ: ಹಳೆಗೇಟಿನಲ್ಲಿದ್ದ ಹಿಂದೂ ಕಾರ್ಯಕರ್ತನ ಮೀನಿನ ಅಂಗಡಿಗೆ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು, ಈ ಘಟನೆಯ ಆರೋಪಿಗಳನ್ನು ಇನ್ನೂ ಪತ್ತೆ ಹಚ್ಚದ ಕಾರಣ ನೈಜ ಆರೋಪಿಗಳನ್ನು ಘಟನೆ ನಡೆದು ಇಷ್ಟೂ ದಿನಗಳಾದರೂ ಬಂಧಿಸದ ಹಿನ್ನೆಲೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆl ಇಂದು ಉಪ್ಪಿನಂಗಡಿ ಠಾಣೆಯ ಮುಂಭಾಗ ಬೃಹತ್ ಧರಣಿ ಸತ್ಯಾಗ್ರಹ ನಡೆಸಿದರು. ಪ್ರತಿಭಟನೆಯಲ್ಲಿ ಹಿಂದೂ ಮುಖಂಡರು ಹಾಗೂ ಹಲವಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಗಳಾಗಿದ್ದಾರೆ. ಠಾಣೆಗೆ ತೆರಳುವ …

ಉಪ್ಪಿನಂಗಡಿ: ಹಿಂದೂ ಯುವಕನ ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ | ಆರೋಪಿಗಳ ಪತ್ತೆಗಾಗಿ ಹಿಂ.ಜಾ.ವೇ.ಯಿಂದ ಪೊಲೀಸ್ ಠಾಣೆಯ ಮುಂಭಾಗ ‘ಬೃಹತ್ ಧರಣಿ ಸತ್ಯಾಗ್ರಹ’ Read More »

ಇದುವರೆಗೂ ತಲೆಬಾಗದೆ ಕೆಚ್ಚೆದೆಯಿಂದ ಹೋರಾಡಿದ ಪಂಜಶೀರ್ ಯೋಧರು ಕೊನೆಗೂ ತಾಲಿಬಾನಿಗಳಿಗೆ ಶರಣು !!? | ಸಂಪೂರ್ಣ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಸರ್ಕಾರ ರಚನೆಯ ಕಸರತ್ತಲ್ಲಿ ತಾಲಿಬಾನಿಗಳು!

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಎಷ್ಟು ದಿನ ಕೆಚ್ಚೆದೆಯಿಂದ ಹೋರಾಡಿದ ಪಂಜಶೀರ್ ಯೋಧರು ಕೊನೆಗೂ ತಾಲಿಬಾನಿಗಳಿಗೆ ಶರಣಾಗಿದ್ದಾರೆ. ಇದೂವರೆಗೆ ಯಾರಿಗೂ ತಲೆಬಾಗದೇ ಸ್ವತಂತ್ರವಾಗಿದ್ದ ಅಫ್ಘಾನಿಸ್ತಾನದ ಪಂಜಶಿರ್ ಪ್ರಾಂತ್ಯವನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ ಎನ್ನಲಾಗಿದೆ. ಪಂಜಶಿರ್​ನ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್ ತಾವು ಸೋತಿಲ್ಲ, ಇನ್ನೂ ಪ್ರಮುಖ ಆಯಕಟ್ಟು ಜಾಗಗಳು ನಮ್ಮ ನಿಯಂತ್ರಣದಲ್ಲೇ ಇವೆ ಎಂದು ಹೇಳಿದೆಯಾದರೂ ಪಂಜಶಿರ್​ನ ಬಹುತೇಕ ಪ್ರದೇಶಗಳು ತಾಲಿಬಾನ್ ಸುಪರ್ದಿಯಲ್ಲಿವೆ ಎಂದು ವಿವಿಧ ಮಾಧ್ಯಮಗಳ ವರದಿಗಳು ಖಚಿಪಡಿಸಿವೆ. ಪಂಜಶಿರ್ ಸಂಪೂರ್ಣವಾಗಿ ತನ್ನ ವಶಕ್ಕೆ ಬಂದಿದೆ ಎಂದು ತಾಲಿಬಾನ್ …

ಇದುವರೆಗೂ ತಲೆಬಾಗದೆ ಕೆಚ್ಚೆದೆಯಿಂದ ಹೋರಾಡಿದ ಪಂಜಶೀರ್ ಯೋಧರು ಕೊನೆಗೂ ತಾಲಿಬಾನಿಗಳಿಗೆ ಶರಣು !!? | ಸಂಪೂರ್ಣ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಸರ್ಕಾರ ರಚನೆಯ ಕಸರತ್ತಲ್ಲಿ ತಾಲಿಬಾನಿಗಳು! Read More »

ಡಾರ್ಕ್ ರೈಡರ್ಸ್ ಕುಂಬ್ರ | ಮೊದಲ ದಿನವೇ ಕಾರ್ಮೋಡ ತುಂಬಿದ ಅಪಘಾತ | ತಂಡದ ಎರಡು ಬೈಕ್ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ, ಓರ್ವ ಗಂಭೀರ

ಪುತ್ತೂರು : ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸೆ.6ರಂದು ಮಧ್ಯಾಹ್ನ ನಡೆದಿದೆ. ಮೃತ ಬೈಕ್ ಸವಾರ ಪುತ್ತೂರು ಮನೋಜ್ ಕುಂಬ್ರ ಸಮೀಪದ ನಿವಾಸಿ ಎಂದು ಹೇಳಲಾಗಿದೆ. ಇವರ ತಂಡ ಇಂದು ಬೆಳಿಗ್ಗೆ ಕುಂಬ್ರದಲ್ಲಿ ಇವರ ಡಾರ್ಕ್ ರೈಡರ್ಸ್ ಪೋಸ್ಟರ್ ಬಿಡುಗಡೆಗೊಳಿಸಿ ತಮ್ಮ ಪಯಣ ಆರಂಭಿಸಿತು.ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಆಗಮಿಸಿ ಬಳಿಕ ಉಪ್ಪಿನಂಗಡಿ ಮೂಲಕ ಸಕಲೇಶಪುರಕ್ಕೆ …

ಡಾರ್ಕ್ ರೈಡರ್ಸ್ ಕುಂಬ್ರ | ಮೊದಲ ದಿನವೇ ಕಾರ್ಮೋಡ ತುಂಬಿದ ಅಪಘಾತ | ತಂಡದ ಎರಡು ಬೈಕ್ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ, ಓರ್ವ ಗಂಭೀರ Read More »

ಒಂದೇ ಕುಟುಂಬದ ಮೂವರು ನೇಣಿಗೆ ಶರಣು | ನಿಗೂಢವಾಗಿದೆ ಈ ಅಜ್ಜಿ, ಮಗಳು, ಮೊಮ್ಮಗಳ ಸಾವಿನ ಹಿಂದಿರುವ ಕಾರಣ !!

ಚಿಕ್ಕಮಗಳೂರು: ಒಂದೇ ಕುಟುಂಬದ ಮೂವರು ಅತ್ಮಹತ್ಯೆಗೆ ಶರಣಾಗಿರುವ ಘಟನೆ ಶೃಂಗೇರಿ ತಾಲೂಕಿನ ಮಕ್ಕಿಮನೆಯಲ್ಲಿ ನಡೆದಿದೆ. ಅಜ್ಜಿ, ಮಗಳು, ಮೊಮ್ಮಗಳು ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದು,ಶಾರದಮ್ಮ (70), ವೀಣಾ (40), ಶ್ರಾವ್ಯ (17)ಮೃತ ಪಟ್ಟವರೆಂದು ಗುರುತಿಸಲಾಗಿದೆ.ಇವರಲ್ಲಿ ವೀಣಾ ಎಂಬುವವರು ಅಂಗನವಾಡಿಯ ಶಿಕ್ಷಕಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ಮೂವರ ದೇಹ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಇವರ ಈ ನಿರ್ಧಾರಕ್ಕೆ ಏನು ಕಾರಣ? ಯಾಕೆ ಈ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ಈ ಘಟನೆ …

ಒಂದೇ ಕುಟುಂಬದ ಮೂವರು ನೇಣಿಗೆ ಶರಣು | ನಿಗೂಢವಾಗಿದೆ ಈ ಅಜ್ಜಿ, ಮಗಳು, ಮೊಮ್ಮಗಳ ಸಾವಿನ ಹಿಂದಿರುವ ಕಾರಣ !! Read More »

error: Content is protected !!
Scroll to Top