ಕಡಬ ತಾಲೂಕಿಗೆ ಸರಕಾರಿ ಪದವಿ ಕಾಲೇಜು ಮಂಜೂರು ಮಾಡುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ತಹಶಿಲ್ದಾರರಿಗೆ ಮನವಿ

ಕಡಬ.ಸೆ 06: ಕಡಬ ತಾಲೂಕು ಶೈಕ್ಷಣಿಕವಾಗಿ ಬೆಳೆಯುತ್ತಿರುವ ನಾಡು. ಆದರೆ ಇಲ್ಲಿ ಒಂದೇ ಒಂದು ಸರಕಾರಿ ಪದವಿ‌ ಕಾಲೇಜು ಇಲ್ಲ ಎನ್ನುವುದು ಕಡಬ ತಾಲೂಕಿಗೆ ಕಪ್ಪುಚುಕ್ಕೆಯಾಗಿದೆ. ಆದ್ದರಿಂದ ಶೀಘ್ರವಾಗಿ ತಾಲೂಕಿಗೆ ಸರಕಾರಿ ಪದವಿ ಕಾಲೇಜು ಮಂಜೂರುಗೊಳಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಉಪ್ಪಿನಂಗಡಿ ವತಿಯಿಂದ ಕಡಬ ತಹಶಿಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಡಬದಿಂದ ಹಲವಾರು ವಿದ್ಯಾರ್ಥಿಗಳು ತಮ್ಮ ಪದವಿ ಕಲಿಕೆಗಾಗಿ ದೂರದ ಕಾಲೇಜನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ತಾಲೂಕಿನ ಹಲವಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ಕಾಲೇಜನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಿದ್ದಾರೆ. ಅದರಲ್ಲೂ ವಿದ್ಯಾರ್ಥಿನಿಯರು ದೂರದ ಕಾಲೇಜಿಗೆ ಹೋಗಲು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಮತ್ತು ಹಲವಾರು ವಿದ್ಯಾರ್ಥಿನಿಯರು ಪದವಿ ಕಾಲೇಜಿಗೆ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದುವುತ್ತಿರುವ ಕಡಬ ತಾಲೂಕಿನ ಹೃದಯ ಭಾಗದಲ್ಲಿ ಸುಸಜ್ಜಿತವಾದ ಪದವಿ ಕಾಲೇಜು ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಕ್ಯಾಂಪಸ್ ಫ್ರಂಟ್ ನಿಯೋಗವು ತಹಶಿಲ್ದಾರರ ಜೊತೆ ಮಾತುಕತೆ ನಡೆಸಿ ಶೀಘ್ರ ಕಾರ್ಯಪ್ರವೃತರಾಗುವಂತೆ ಮನವಿ ಸಲ್ಲಿಸಲಾಯಿತು.


Ad Widget

Ad Widget

Ad Widget

Ad Widget

Ad Widget

Ad Widget

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಕಾರ್ಯದರ್ಶಿಯಾದ ಮರ್ಝುಕ್ ಕೋಲ್ಪೆ, ಉಪಾಧ್ಯಕ್ಷರಾದ ಅಫ್ಸಲ್ ಕಡಬ, ಮತ್ತು ಹಸನ್ ನೆಲ್ಯಾಡಿ ಉಪಸ್ಥಿತರಿದ್ದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ

error: Content is protected !!
Scroll to Top
%d bloggers like this: