Day: August 6, 2021

ಉಡುಪಿ:ನೂತನ ಸಚಿವರನ್ನು ಸ್ವಾಗತಿಸುವ ಸಂದರ್ಭ ಕೆಲ ಕಾರ್ಯಕರ್ತರ ಜೇಬಿಗೆ ಕತ್ತರಿ!! ಜನಜಂಗುಳಿಯ ನಡುವೆ ತಮ್ಮ ಕೈಚಳಕ ಪ್ರದರ್ಶಿಸಿದ ಜೇಬುಗಳ್ಳರು

ಕಾರ್ಯಕರ್ತರೆಲ್ಲ ಸೇರಿ ನೂತನ ಸಚಿವರನ್ನು ಜಿಲ್ಲೆಗೆ ಸ್ವಾಗತಿಸುವ ಕಾರ್ಯಕ್ರಮ,ಸಚಿವರಾದ ಬಳಿಕ ಮೊದಲ ಬಾರಿ ಜಿಲ್ಲೆಗೆ ಆಗಮಿಸುತ್ತಿರುವ ಸಚಿವರನ್ನು ಕಾಣುವ ತವಕದಲ್ಲಿ ಎಲ್ಲೆಡೆಯಲ್ಲೂ ಜನಜಂಗುಳಿ ನೂಕುನುಗ್ಗಲು. ಇದೇ ಸರಿಯಾದ ಸಮಯವೆಂದು ಕೆಲ ಜೇಬುಗಳ್ಳರು ತಮ್ಮ ಕೈಚಳಕವನ್ನು ಮೆರೆದಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೂ ಪಡೆದಿದ್ದಾರೆ. ಅಂದಹಾಗೆ ಈ ಘಟನೆ ನಡೆದದ್ದು ಉಡುಪಿ ಜಿಲ್ಲೆಯಲ್ಲಿ.ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಸುನೀಲ್‌ಕುಮಾರ್ ಅವರನ್ನು ಸ್ವಾಗತಿಸುವ ಸಂದರ್ಭ ಈ ಪ್ರಕರಣ …

ಉಡುಪಿ:ನೂತನ ಸಚಿವರನ್ನು ಸ್ವಾಗತಿಸುವ ಸಂದರ್ಭ ಕೆಲ ಕಾರ್ಯಕರ್ತರ ಜೇಬಿಗೆ ಕತ್ತರಿ!! ಜನಜಂಗುಳಿಯ ನಡುವೆ ತಮ್ಮ ಕೈಚಳಕ ಪ್ರದರ್ಶಿಸಿದ ಜೇಬುಗಳ್ಳರು Read More »

ಅಶಕ್ತರ ಸೇವೆಯನ್ನೇ ನಿತ್ಯ ಧ್ಯೇಯವಾಗಿಸಿಕೊಂಡ ವಸಂತ ಬಂಗೇರರಿಂದ ಮತ್ತೊಂದು ಮಾನವೀಯ ಸೇವಾಕಾರ್ಯ| ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಮಲೆಬೆಟ್ಟು ನಿವಾಸಿಗೆ ಗಾಲಿಕುರ್ಚಿಯ ಹಸ್ತಾಂತರ

ಮಲೆಬೆಟ್ಟು:ಬೆಳ್ತಂಗಡಿ ತಾಲೂಕಿನ ಮಲೆಬೆಟ್ಟು ನಿವಾಸಿ ಖಾಸೀಂ ಎಂಬವರು ಕಳೆದ ವರ್ಷ ರಿಕ್ಷಾ ಅಪಘಾತದಿಂದ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು ಮಾಜಿ ಶಾಸಕ ಕೆ ವಸಂತ ಬಂಗೇರರವರನ್ನು ಭೇಟಿಯಾದ ಸಂದರ್ಭದಲ್ಲಿ ಬಂಗೇರರು ಸಾಂತ್ವನ ತುಂಬಿ ಮನೆಗೆ ಬೇಕಾದ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿ ಖಾಸೀಂರವರ ಮಗನ ವಿಧ್ಯಾಭ್ಯಾಸಕ್ಕೆ ಅಗತ್ಯ ನೆರವನ್ನು ಕಲ್ಪಿಸುವ ಹಾಗೂ ಆರೋಗ್ಯ ಸುಧಾರಣೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಭರವಸೆಯನ್ನು ನೀಡಿದ್ದರು.ಅಂತೆಯೇ ಖಾಸೀಂರವರಿಗೆ ನಿಯಮಿತ ಸಂಚಾರಕ್ಕೆ ಅವಕಾಶವಾಗಿಸುವ ನಿಟ್ಟಿನಲ್ಲಿ ಗಾಲಿಕುರ್ಚಿಯನ್ನು ತನ್ನ ಅಭಿಮಾನಿಗಳ,ಕಾರ್ಯಕರ್ತರ ಸಮ್ಮುಖದಲ್ಲಿ …

ಅಶಕ್ತರ ಸೇವೆಯನ್ನೇ ನಿತ್ಯ ಧ್ಯೇಯವಾಗಿಸಿಕೊಂಡ ವಸಂತ ಬಂಗೇರರಿಂದ ಮತ್ತೊಂದು ಮಾನವೀಯ ಸೇವಾಕಾರ್ಯ| ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಮಲೆಬೆಟ್ಟು ನಿವಾಸಿಗೆ ಗಾಲಿಕುರ್ಚಿಯ ಹಸ್ತಾಂತರ Read More »

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಕೊಕ್ಕಡ ಗ್ರಾಮ ಸಮಿತಿಯ ಸಭೆ

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಕೊಕ್ಕಡ ಗ್ರಾಮ ಸಮಿತಿಯ ಸಭೆ ಹಾಗೂ ಸಹಾಯ ಹಸ್ತ ಕಾರ್ಯಕ್ರಮದ ಮಾಹಿತಿ ಕಾರ್ಯಕ್ರಮ 05/08/2021 ರಂದು ಸಂಜೆ 5 ಗಂಟೆಗೆ ಯುವ ಕೊಕ್ಕಡ ಯುವ ಕಾಂಗ್ರೆಸ್ ಕಛೇರಿ ಸಭಾಂಗಣದಲ್ಲಿ ಜರಗಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ನಿರ್ದೇಶನದಂತೆ ಪ್ರತೀ ಗ್ರಾಮ ಮಟ್ಟದಲ್ಲು ಕೋವಿಡ್ ಸಹಾಯ ಹಸ್ತ ಎಂಬ ಕಾರ್ಯಕ್ರಮದ ಅನುಷ್ಠಾನ ಮಾಡಿದ್ದು ಅದರ ಮಾಹಿತಿಯನ್ನ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀ ರಂಜನ್ ಜಿ …

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಕೊಕ್ಕಡ ಗ್ರಾಮ ಸಮಿತಿಯ ಸಭೆ Read More »

ಕಡಬ ಕಾಲೇಜಿಗೆ ತೆರಳಿದ ಯುವತಿ ನಾಪತ್ತೆ

ಕಡಬ: ಕಡಬ ಸಮೀಪದ ಕಳಾರ ಎಂಬಲ್ಲಿ ಮನೆಯಿಂದ ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿಯೋರ್ವಳು ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ. . ಕಳಾರ ನಿವಾಸಿ ಹದಿನೇಳು ವರ್ಷದ ಯುವತಿಯು ಗುರುವಾರದಂದು ಕಾಲೇಜಿಗೆಂದು ಮನೆಯಿಂದ ತೆರಳಿದ್ದು, ಸಂಜೆಯವರೆಗೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡಿಕಾಡಿದ ಆಕೆಯ ಮನೆಯವರು ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶುಕ್ರವಾರ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಸರ್ಕಾರದಿಂದ ಸಿಗದ ಗ್ರೀನ್ ಸಿಗ್ನಲ್ ಇಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಿಲ್ಲ!!!ಒಂದೆರಡು ದಿನಗಳ ಬಳಿಕ ಫಲಿತಾಂಶಕ್ಕೆ ದಿನ ನಿಗದಿಯಾಗುವ ಸಾಧ್ಯತೆ

ರಾಜ್ಯಾದ್ಯಂತ ವಿದ್ಯಾರ್ಥಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಎಸ್ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಕ್ಕೆ ಇಂದು ದಿನ ನಿಗದಿಯಾಗಿತ್ತಾದರೂ ಕೊನೇ ಕ್ಷಣದಲ್ಲಿ ಫಲಿತಾಂಶ ಪ್ರಕಟಕ್ಕೆ ಬ್ರೇಕ್ ಬಿದ್ದಿದ್ದು ಈ ಮೂಲಕ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಮೂಡಿದೆ. ಸದ್ಯ ಪರೀಕ್ಷೆಯ ಮೌಲ್ಯಮಾಪನ ಪೂರ್ಣಗೊಂಡಿದ್ದು,ಇಂದೇ ಫಲಿತಾಂಶ ಪ್ರಕಟವಾಗುತ್ತದೆ ಎಂದು ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ ಈಗ ಸರ್ಕಾರದಿಂದ ಯಾವುದೇ ಅನುಮತಿ ದೊರೆಯದ ಕಾರಣ ಹಾಗೂ ಈ ಬಗ್ಗೆ ಶಿಕ್ಷಣ ಇಲಾಖೆ ಎಲ್ಲಿಯೂ ಪ್ರಕಟಣೆ ನೀಡದ ಕಾರಣ ಇಂದು ಫಲಿತಾಂಶ ಪ್ರಕಟವಾಗುವುದಿಲ್ಲ …

ಸರ್ಕಾರದಿಂದ ಸಿಗದ ಗ್ರೀನ್ ಸಿಗ್ನಲ್ ಇಂದು ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಿಲ್ಲ!!!ಒಂದೆರಡು ದಿನಗಳ ಬಳಿಕ ಫಲಿತಾಂಶಕ್ಕೆ ದಿನ ನಿಗದಿಯಾಗುವ ಸಾಧ್ಯತೆ Read More »

ಆಗಸ್ಟ್ 23ರಿಂದ ಪ್ರೌಢ ಸಹಿತ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತರಗತಿ ಆರಂಭ | ತಜ್ಞರ ಸಲಹೆಯಂತೆ ಶಾಲೆ ತೆರೆಯಲು ಕ್ರಮ ಕೈಗೊಂಡ ಬೊಮ್ಮಾಯಿ

ರಾಜ್ಯದಲ್ಲಿ ಈಗಾಗಲೇ ಕೊರೋನಾ 3ನೇ ಅಲೆಯ ಮುನ್ಸೂಚನೆ ನೀಡಿದ್ದು,ಸದ್ಯ ಗಡಿನಾಡ ಕೆಲ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್ ಡೌನ್ ಜೊತೆಗೆ ನೈಟ್ ಕರ್ಫ್ಯೂ ಹೇರಲಾಗಿದ್ದು ಈ ಮಧ್ಯೆ ಆಗಸ್ಟ್ 23 ರಿಂದ ಶಾಲಾ-ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೇ ಆಗಸ್ಟ್ 23 ರಿಂದ ರಾಜ್ಯಾದ್ಯಂತ 9, 10, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲು ಕ್ರಮ ಕೈಗೊಂಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಶಾಲಾ- ಕಾಲೇಜು ತೆರೆಯುವ ಬಗ್ಗೆ ಈಗಾಗಲೇ ತಜ್ಞರೊಂದಿಗೆ ಚರ್ಚಿಸಲಾಗಿದ್ದು,ಮೊದಲ …

ಆಗಸ್ಟ್ 23ರಿಂದ ಪ್ರೌಢ ಸಹಿತ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತರಗತಿ ಆರಂಭ | ತಜ್ಞರ ಸಲಹೆಯಂತೆ ಶಾಲೆ ತೆರೆಯಲು ಕ್ರಮ ಕೈಗೊಂಡ ಬೊಮ್ಮಾಯಿ Read More »

ಪ್ರೀತಿ ನಿರಾಕರಿಸಿದಳೆಂದು ಹಿಂದೂ ಯುವತಿಯನ್ನು ನಡುರಸ್ತೆಯಲ್ಲೇ ತಿವಿದುಕೊಂದ ಭಗ್ನ ಪ್ರೇಮಿ ಜಿಹಾದಿ!!ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಸಾವು

ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಯುವಕನೋರ್ವ ನಡುರಸ್ತೆಯಲ್ಲೇ ಚಾಕುವಿನಿಂದ ಹಿಗ್ಗಾಮುಗ್ಗ ತಿವಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಯಬಾಗ ತಾಲೂಕಿನ ಹಾರೂಗೇರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ವಿವರ:16 ವರ್ಷದ ಆ ಯುವತಿಯನ್ನು ತೇರದಾಳ ಗ್ರಾಮದ ಯುವಕ ಅಮೀರ್ ಜಮಾದಾರ ಎಂಬಾತ ಪ್ರೀತಿಸುತ್ತಿದ್ದೂ, ಈತನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಕೊಲೆಯಾದ ದಿನ ಯುವತಿಯು ತನ್ನ ತಂಗಿಯ ಜೊತೆ ಊರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಸಂದರ್ಭ ಯಮನಂತೆ ರಸ್ತೆ ಮಧ್ಯೆ ಆರೋಪಿ ಎದುರಾಗುತ್ತಾನೆ.ತನ್ನನ್ನು ಪ್ರೀತಿಸುವಂತೆ ಪೀಡಿಸಿದ ಆತನ ಮಾತಿಗೆ …

ಪ್ರೀತಿ ನಿರಾಕರಿಸಿದಳೆಂದು ಹಿಂದೂ ಯುವತಿಯನ್ನು ನಡುರಸ್ತೆಯಲ್ಲೇ ತಿವಿದುಕೊಂದ ಭಗ್ನ ಪ್ರೇಮಿ ಜಿಹಾದಿ!!ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಸಾವು Read More »

ದ.ಕ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ನಾಳೆಯಿಂದ ವೀಕೆಂಡ್ ಕರ್ಫ್ಯೂ ಜಾರಿ

ರಾಜ್ಯದಲ್ಲಿ ಕೊರೋನಾ 3ನೇ ಅಲೆಯ ಮುನ್ಸೂಚನೆ ನೀಡಿದ್ದು, ಈ ಸಂದರ್ಭದಲ್ಲಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಪ್ಯೂ ಜಾರಿಯಾಗಲಿದೆ. ಇದರೊಂದಿಗೆ ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಬಿಗಿಯಾಗಿ ಜಾರಿಗೊಳ್ಳಲಿದೆ. ಈಗಾಗಲೇ ಗಡಿ …

ದ.ಕ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ನಾಳೆಯಿಂದ ವೀಕೆಂಡ್ ಕರ್ಫ್ಯೂ ಜಾರಿ Read More »

ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಅಶ್ಲೀಲ ಫೋಟೋ!! ಸೂಕ್ತ ಕಾನೂನು ಕ್ರಮ ಜರುಗಿಸಲು ಹಿಂದೂಪರ ಸಂಘಟನೆಗಳಿಂದ ಒತ್ತಾಯ

ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮಿ ಕೊರಗಜ್ಜ ದೈವದ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹರಿಯ ಬಿಟ್ಟದ್ದಕ್ಕೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಡಿಗೇಡಿಗಳು ಸ್ವಾಮಿ ಕೊರಗಜ್ಜ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಗಳು ಕೇಳಿ ಬಂದಿವೆ. ಈ ಬಗ್ಗೆ ಈಗಾಗಲೇ ಹಿಂದೂ ಜಾಗರಣ ವೇದಿಕೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ …

ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಅಶ್ಲೀಲ ಫೋಟೋ!! ಸೂಕ್ತ ಕಾನೂನು ಕ್ರಮ ಜರುಗಿಸಲು ಹಿಂದೂಪರ ಸಂಘಟನೆಗಳಿಂದ ಒತ್ತಾಯ Read More »

ರಾಜೀವ್ ಗಾಂಧಿ ಖೇಲ್ ರತ್ನ ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ | ಮಾಜಿ ಪ್ರಧಾನಿಯ ಹೆಸರಲ್ಲಿದ್ದ ಪ್ರಶಸ್ತಿಗೆ ಇನ್ನು ಹಾಕಿ ದಂತ ಕಥೆಯ ಹೆಸರು

ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ. ಇಂತಹ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಐತಿಹಾಸಿಕ ಘೋಷಣೆಗೂ ಒಂದು ಮುಖ್ಯ ಕಾರಣವಿದೆ. ಅದು ಬೇರೆನೂ ಅಲ್ಲ, ಈ ಬಾರಿಯ ಒಲಂಪಿಕ್ಸ್ ನಲ್ಲಿ ಹಾಕಿ ತಂಡದ ಸಾಧನೆ ಎಂದೇ ಹೇಳಬಹುದು. ಟೋಕಿಯೊ ಒಲಿಂಪಿಕ್ಸ್ ನಲ್ಲಿ …

ರಾಜೀವ್ ಗಾಂಧಿ ಖೇಲ್ ರತ್ನ ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ | ಮಾಜಿ ಪ್ರಧಾನಿಯ ಹೆಸರಲ್ಲಿದ್ದ ಪ್ರಶಸ್ತಿಗೆ ಇನ್ನು ಹಾಕಿ ದಂತ ಕಥೆಯ ಹೆಸರು Read More »

error: Content is protected !!
Scroll to Top