ಉಡುಪಿ:ನೂತನ ಸಚಿವರನ್ನು ಸ್ವಾಗತಿಸುವ ಸಂದರ್ಭ ಕೆಲ ಕಾರ್ಯಕರ್ತರ ಜೇಬಿಗೆ ಕತ್ತರಿ!! ಜನಜಂಗುಳಿಯ ನಡುವೆ ತಮ್ಮ ಕೈಚಳಕ ಪ್ರದರ್ಶಿಸಿದ ಜೇಬುಗಳ್ಳರು

ಕಾರ್ಯಕರ್ತರೆಲ್ಲ ಸೇರಿ ನೂತನ ಸಚಿವರನ್ನು ಜಿಲ್ಲೆಗೆ ಸ್ವಾಗತಿಸುವ ಕಾರ್ಯಕ್ರಮ,ಸಚಿವರಾದ ಬಳಿಕ ಮೊದಲ ಬಾರಿ ಜಿಲ್ಲೆಗೆ ಆಗಮಿಸುತ್ತಿರುವ ಸಚಿವರನ್ನು ಕಾಣುವ ತವಕದಲ್ಲಿ ಎಲ್ಲೆಡೆಯಲ್ಲೂ ಜನಜಂಗುಳಿ ನೂಕುನುಗ್ಗಲು. ಇದೇ ಸರಿಯಾದ ಸಮಯವೆಂದು ಕೆಲ ಜೇಬುಗಳ್ಳರು ತಮ್ಮ ಕೈಚಳಕವನ್ನು ಮೆರೆದಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೂ ಪಡೆದಿದ್ದಾರೆ.

ಅಂದಹಾಗೆ ಈ ಘಟನೆ ನಡೆದದ್ದು ಉಡುಪಿ ಜಿಲ್ಲೆಯಲ್ಲಿ.ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಸುನೀಲ್‌ಕುಮಾರ್ ಅವರನ್ನು ಸ್ವಾಗತಿಸುವ ಸಂದರ್ಭ ಈ ಪ್ರಕರಣ ನಡೆದಿದ್ದು,ಜನರ ನೂಕು ನುಗ್ಗಲಿನಲ್ಲಿ ಕಳ್ಳರು ಹಲವರ ಜೇಬಿಗೆ ಕತ್ತರಿ ಹಾಕಿದ್ದಾರೆ.

ಶುಕ್ರವಾರ ಹೆಜಮಾಡಿಯಲ್ಲಿ ಸಚಿವರನ್ನು ಸ್ವಾಗತಿಸುವ ವೇಳೆ ಗುತ್ತಿಗೆದಾರ ಬ್ರಹ್ಮಾವರದ ಜೀವನ್ ಶೆಟ್ಟಿ ಅವರ ಜೇಬಿನಿಂದ 50 ಸಾವಿರ ರೂ. ಹಾಗೂ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್ ಜೇಬಿನಿಂದ 28 ಸಾವಿರ ರೂಪಾಯಿ ನಗದನ್ನು ಕಳ್ಳರು ಎಗರಿಸಿದ್ದು,ಈ ಹಿಂ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಡಿ.ವಿ. ಸದಾನಂದ ಗೌ ಅವರನ್ನು ಇಲ್ಲಿ ಸ್ವಾಗತಿಸುವ ವೇಳೆಯೂ ಇಂಥದ್ದೇ ಕಳ್ಳತನ ನಡೆದಿತ್ತು ಎಂಬ ವಿಷಯವೂ ಬೆಳಕಿಗೆ ಬಂದಿದೆ. ಈ ಬಗ್ಗೆ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಈ ಮೊದಲೇ ಎಚ್ಚರಿಸಿದ್ದರೂ ಅದನ್ನು ಮರೆತು ಸ್ವಾಗತಿಸುವ ಉತ್ಸಾಹದಲ್ಲಿ ಕಾರ್ಯಕರ್ತರು ಮತ್ತೆ ತಮ್ಮ ಹಣ ಕಳೆದುಕೊಳ್ಳುವಂತಾಗಿದೆ.

Ad Widget / / Ad Widget

Leave a Reply

error: Content is protected !!
Scroll to Top
%d bloggers like this: