ಅಶಕ್ತರ ಸೇವೆಯನ್ನೇ ನಿತ್ಯ ಧ್ಯೇಯವಾಗಿಸಿಕೊಂಡ ವಸಂತ ಬಂಗೇರರಿಂದ ಮತ್ತೊಂದು ಮಾನವೀಯ ಸೇವಾಕಾರ್ಯ| ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಮಲೆಬೆಟ್ಟು ನಿವಾಸಿಗೆ ಗಾಲಿಕುರ್ಚಿಯ ಹಸ್ತಾಂತರ

ಮಲೆಬೆಟ್ಟು:ಬೆಳ್ತಂಗಡಿ ತಾಲೂಕಿನ ಮಲೆಬೆಟ್ಟು ನಿವಾಸಿ ಖಾಸೀಂ ಎಂಬವರು ಕಳೆದ ವರ್ಷ ರಿಕ್ಷಾ ಅಪಘಾತದಿಂದ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು ಮಾಜಿ ಶಾಸಕ ಕೆ ವಸಂತ ಬಂಗೇರರವರನ್ನು ಭೇಟಿಯಾದ ಸಂದರ್ಭದಲ್ಲಿ ಬಂಗೇರರು ಸಾಂತ್ವನ ತುಂಬಿ ಮನೆಗೆ ಬೇಕಾದ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿ ಖಾಸೀಂರವರ ಮಗನ ವಿಧ್ಯಾಭ್ಯಾಸಕ್ಕೆ ಅಗತ್ಯ ನೆರವನ್ನು ಕಲ್ಪಿಸುವ ಹಾಗೂ ಆರೋಗ್ಯ ಸುಧಾರಣೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಭರವಸೆಯನ್ನು ನೀಡಿದ್ದರು.ಅಂತೆಯೇ ಖಾಸೀಂರವರಿಗೆ ನಿಯಮಿತ ಸಂಚಾರಕ್ಕೆ ಅವಕಾಶವಾಗಿಸುವ ನಿಟ್ಟಿನಲ್ಲಿ ಗಾಲಿಕುರ್ಚಿಯನ್ನು ತನ್ನ ಅಭಿಮಾನಿಗಳ,ಕಾರ್ಯಕರ್ತರ ಸಮ್ಮುಖದಲ್ಲಿ ಹಸ್ತಾಂತರಿಸಿದರು

ಈ ಸಂದರ್ಭದಲ್ಲಿ ಪ್ರಮುಖರಾದ ದಿನೇಶ್ ಕೋಟ್ಯಾನ್,ಅನೂಪ್ ಬಂಗೇರ,ಪಾಪಣ್ಣ,ಭಗವಾನ್ ದಾಸ್,ಯೋಗಿಶ್ ಗೌಡ,ಖಾಸೀಂ,ಹರ್ಷೀಣಿ ಬಿ ಬಂಟ್ವಾಳ ಗುರುದೇವ ಕಾಲೇಜ್ ಬೆಳ್ತಂಗಡಿ ಹಾಗು ಮತ್ತಿತರ ಪ್ರಮುಖರ ಸಹಿತ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದು ಮಾನವೀಯ ಸೇವಾಕಾರ್ಯಕ್ಕೆ ಸಾಕ್ಷಿಯಾದರು.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: