ಪ್ರೀತಿ ನಿರಾಕರಿಸಿದಳೆಂದು ಹಿಂದೂ ಯುವತಿಯನ್ನು ನಡುರಸ್ತೆಯಲ್ಲೇ ತಿವಿದುಕೊಂದ ಭಗ್ನ ಪ್ರೇಮಿ ಜಿಹಾದಿ!!ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿ ಸಾವು

Share the Article

ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಯುವಕನೋರ್ವ ನಡುರಸ್ತೆಯಲ್ಲೇ ಚಾಕುವಿನಿಂದ ಹಿಗ್ಗಾಮುಗ್ಗ ತಿವಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಯಬಾಗ ತಾಲೂಕಿನ ಹಾರೂಗೇರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ವಿವರ:16 ವರ್ಷದ ಆ ಯುವತಿಯನ್ನು ತೇರದಾಳ ಗ್ರಾಮದ ಯುವಕ ಅಮೀರ್ ಜಮಾದಾರ ಎಂಬಾತ ಪ್ರೀತಿಸುತ್ತಿದ್ದೂ, ಈತನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಕೊಲೆಯಾದ ದಿನ ಯುವತಿಯು ತನ್ನ ತಂಗಿಯ ಜೊತೆ ಊರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಸಂದರ್ಭ ಯಮನಂತೆ ರಸ್ತೆ ಮಧ್ಯೆ ಆರೋಪಿ ಎದುರಾಗುತ್ತಾನೆ.ತನ್ನನ್ನು ಪ್ರೀತಿಸುವಂತೆ ಪೀಡಿಸಿದ ಆತನ ಮಾತಿಗೆ ಆಕೆ ನಿರಾಕರಿಸಿದಾಗ ಆಕೆಗೆ ಹಲವು ಬಾರಿ ಚಾಕುವಿನಿಂದ ತಿವಿಯುತ್ತಾನೆ.ತಿವಿದ ಏಟಿಗೆ ಆಕೆಯ ಹೊಟ್ಟೆ,ಎದೆ ಹಾಗೂ ಕೈ ಗೆ ಗಂಭೀರ ಗಾಯಗಳಾಗಿ ರಸ್ತೆ ಮಧ್ಯೆಯೇ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ.

ಘಟನೆ ನಡೆದ ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು,ಕಬ್ಬಿನ ಗದ್ದೆಯೊಳಗೆ ಅವಿತುಕೊಂಡಿದ್ದ.ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಊರವರ ಸಹಕಾರದಿಂದ ಮಧ್ಯರಾತ್ರಿ ಕಬ್ಬಿನ ಗದ್ದೆಯಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ.

ಮೃತ ಯುವತಿಯು ಮಧ್ಯಮ ವರ್ಗದವಳಾಗಿದ್ದು,ಕಲಿಕೆ ಕ್ರೀಡೆ ಸಹಿತ ಎಲ್ಲಾ ಚಟುವಟಿಕೆಯಲ್ಲೂ ಪ್ರತಿಭಾವಂತೆಯಾಗಿದ್ದಳು.ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು,ಚಾಕುವಿನಿಂದ ತಿವಿದ ಆರೋಪಿಗೆ ಕಠಿಣ ಶಿಕ್ಷೆಯಾಗಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave A Reply

Your email address will not be published.