Day: July 24, 2021

ಆಟವಾಡುತ್ತಾ 5 ಸೆಂಟಿಮೀಟರ್ ಉದ್ದದ ಗಣೇಶನ ಮೂರ್ತಿ ನುಂಗಿದ 3 ವರ್ಷದ ಮಗು | ಪವಾಡ ನಡೆದು ಮಗು ಬದುಕುಳಿದಿದೆ !

ಬೆಂಗಳೂರು, ಜುಲೈ 24: ಬೆಂಗಳೂರಿನಲ್ಲಿ ಮೂರು ವರ್ಷದ ಮಗುವನ್ನು ಗಣೇಶನ ಮೂರ್ತಿ ನುಂಗಿ ಸಾವಿನಂಚಿಗೆ ತೆರಳಿ ಬದುಕಿಬಂದ ಘಟನೆ ನಡೆದಿದೆ. ವಿನಾಯಕ ಬೆಂಗಳೂರಿನ ಮೂರು ವರ್ಷದ ಬಸವ ಎಂಬ ಹೆಸರಿನ ಮಗು ಗಣೇಶನ ವಿಗ್ರಹಗಳಿಗೆ ಆಟವಾಡುತ್ತಿತ್ತು. ಹಾಗೆ ಆಟವಾಡುತ್ತಿದ್ದ ಮಗುವಿಗೆ ಉಸಿರಾಡಲು ಕಷ್ಟವಾಗಿ ಅಳಲು ಆರಂಭಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಪೋಷಕರು ಬೆಂಗಳೂರಿನ ಹಳೆ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ಧಾವಿಸಿದ್ದಾರೆ. ಅಲ್ಲಿ ಮಗುವಿನ ಎಕ್ಸ್ ರೇ ಮಾಡಿದಾಗ ಎದೆಯಭಾಗದಲ್ಲಿ ಗಣೇಶನ ಮೂರ್ತಿ ಇರುವುದು ಗೋಚರಿಸಿದೆ. ಅದು ಸುಮಾರು …

ಆಟವಾಡುತ್ತಾ 5 ಸೆಂಟಿಮೀಟರ್ ಉದ್ದದ ಗಣೇಶನ ಮೂರ್ತಿ ನುಂಗಿದ 3 ವರ್ಷದ ಮಗು | ಪವಾಡ ನಡೆದು ಮಗು ಬದುಕುಳಿದಿದೆ ! Read More »

ಆನೆಯನ್ನು ಸಂರಕ್ಷಣೆ ಮಾಡಿದ ರಾಜ್ಯದಲ್ಲಿ ಕಾಡುಹಂದಿಗಿಲ್ಲ ಬದುಕುವ ಭಾಗ್ಯ!!!ಬೆಳೆನಾಶ ಮಾಡುವ ಕಾಡುಹಂದಿಗಳ ಬೇಟೆಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್

ದೇಶದ ನಾನಾ ರಾಜ್ಯಗಳಲ್ಲಿ ಅನೇಕ ತರಹದ ಕೃಷಿಗಳನ್ನು ಬೆಳೆಯುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಅದೇ ಕೃಷಿಗೆ ಕಾಡುಪ್ರಾಣಿಗಳ, ಕ್ರಿಮಿ ಕೀಟಗಳ ಹಾವಳಿ ಕೂಡಾ ತಪ್ಪಿದ್ದಲ್ಲ. ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಕೀಟನಾಶಕ ಸಿಂಪಡಿಸಿದರೆ,ಕಾಡು ಪ್ರಾಣಿಗಳಲ್ಲೊಂದಾದ ಕಾಡುಹಂದಿಯಿಂದ ಅನೇಕ ಕೃಷಿ ಚಟುವಟಿಕೆಗಳು ನಾಶವಾಗುತ್ತಿರುವುದು ಕೃಷಿಕರ ಕೋಪದ ಜೊತೆಗೆ ಬೇಸರಕ್ಕೂ ಕಾರಣವಾಗಿದೆ. ಇಲ್ಲಿ ಕಾಡುಹಂದಿಯ ಹಾವಳಿಯನ್ನು ತಪ್ಪಿಸಲು ಬ್ರೇಕ್ ವ್ಯೆರ್ ಬಳಸಿ ಉರುಳು ಮಾಡಿ ಹಂದಿಯನ್ನೂ ಸಾಯುಸುತ್ತಿರುವುದು ಕೂಡಾ ಕಾಮನ್. ಆದರೆ ಇದು ಅಪರಾಧವಾಗಿದ್ದು, ವನ್ಯಜೀವಿ ಸಂರಕ್ಷಣೆಯ ಅಡಿಯಲ್ಲಿ ಪ್ರಕರಣ …

ಆನೆಯನ್ನು ಸಂರಕ್ಷಣೆ ಮಾಡಿದ ರಾಜ್ಯದಲ್ಲಿ ಕಾಡುಹಂದಿಗಿಲ್ಲ ಬದುಕುವ ಭಾಗ್ಯ!!!ಬೆಳೆನಾಶ ಮಾಡುವ ಕಾಡುಹಂದಿಗಳ ಬೇಟೆಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್ Read More »

ಸವಣೂರು : ಕೆರೆಗೆ ಬಿದ್ದು ಯುವಕ ಸಾವು

ಸವಣೂರು : ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಸವಣೂರು ಗ್ರಾಮದ ಕಂಪ ಎಂಬಲ್ಲಿ ಯುವಕನೋರ್ವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಕುದ್ಮಾರು ಗ್ರಾಮದ ಕುಂಞ ಎಂಬವರ ಮಗ ನವೀನ್ (27 ವ.) ಎಂಬಾತನೇ ಮೃತಪಟ್ಟ ಯುವಕ.ನವೀನ್ ಸವಣೂರು ಗ್ರಾಮದ ಕಂಪ ಎಂಬಲ್ಲಿ ಪ್ರವೀಣ್ನಾಯಕ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು,ಜು.23ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋಗಿದ್ದು ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಹುಡುಕಾಟ ನಡೆಸಿದಾಗ ಜು.24ರಂದು ಪ್ರವೀಣ್ ನಾಯಕ್ ರವರ ತೋಟದ ಮಧ್ಯೆ ಇರುವ ಕೆರೆಯಲ್ಲಿ ನವೀನ್ …

ಸವಣೂರು : ಕೆರೆಗೆ ಬಿದ್ದು ಯುವಕ ಸಾವು Read More »

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಜಯರಾಜ್ ಜೈನ್ ಅವಿರೋಧ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು, ಶಾಖೆ ಬೆಳ್ತಂಗಡಿ ಇದರ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಸರಕಾರಿ ಉನ್ನತೀಕರಿಸಿದ‌ ಪ್ರಾಥಮಿಕ‌ ಶಾಲೆ ಮಾಲಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಜಯರಾಜ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜುಲೈ 24 ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಏಕತಾ ಸೌಧದಲ್ಲಿ ನಡೆದ ಚುನಾವಣೆ ಪ್ರಕ್ರೀಯೆಯಲ್ಲಿ ಅವರು ಆಯ್ಕೆಯಾದರು. ಸಂಘದಲ್ಲಿ ಈ ಹಿಂದೆ 22 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಡಾ. ಜಯಕೀರ್ತಿ ಜೈನ್‌ …

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಜಯರಾಜ್ ಜೈನ್ ಅವಿರೋಧ ಆಯ್ಕೆ Read More »

ಸಚಿವ ಎಸ್.ಅಂಗಾರ ಅವರಿಂದ ಕಡಬ ತಾಲೂಕಿನ ಐದು ಕೇಂದ್ರಗಳಿಗೆ ಇ.ಸಿ.ಜಿ. ಯಂತ್ರ ಹಸ್ತಾಂತರ

ಕಡಬ: ಕಡಬ ತಾಲೂಕಿನ ಐದು ಕೇಂದ್ರಗಳಿಗೆ ಇ.ಸಿ.ಜಿ. ಯಂತ್ರವನ್ನು ಮೀನುಗಾರಿಕೆ, ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಶನಿವಾರ ಹಸ್ತಾಂತರಿಸಿದರು. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಇ.ಸಿ.ಜಿ. ಯಂತ್ರವನ್ನು ಕಡಬ ತಾಲೂಕಿನ ನೂಜಿಬಾಳ್ತಿಲ, ಕಾಣಿಯೂರು, ಮರ್ದಾಳ, ಸುಬ್ರಹ್ಮಣ್ಯ, ಆಲಂಕಾರು ಕೇಂದ್ರಗಳಿಗೆ ಗ್ರಾ.ಪಂ. ನವರಲ್ಲಿ ಹಸ್ತಾಂತರಿಸಿದರು. ಕಾರ್ಡಿಯಾಲಾಜಿ ಎಟ್ ಡೋರ್ ಸ್ಟೆಪ್ಸ್ ಫೌಂಡೇಶನ್ ಟ್ರಸ್ಟ್, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಭಾರತೀಯ ಜನೌಷಧಿ …

ಸಚಿವ ಎಸ್.ಅಂಗಾರ ಅವರಿಂದ ಕಡಬ ತಾಲೂಕಿನ ಐದು ಕೇಂದ್ರಗಳಿಗೆ ಇ.ಸಿ.ಜಿ. ಯಂತ್ರ ಹಸ್ತಾಂತರ Read More »

ಎಟಿಎಂ ಗೆ ಹಣ ತುಂಬಿಸುವ ವಾಹನಕ್ಕೆ ಟ್ರಕ್ ಡಿಕ್ಕಿ | ಬೆಳ್ತಂಗಡಿಯ ಯುವಕ ವ್ಯಕ್ತಿ ಸಹಿತ ಇಬ್ಬರು ಸಾವು

ಕೇರಳದ ಕಣ್ಣೂರು ಜಿಲ್ಲೆಯ ಪೆರಿಯಾರು ಸಮೀಪ ಜು.23 ರಂದು ನಡೆದ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ವ್ಯಕ್ತಿ ಸಹಿತ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿ ನಿವಾಸಿ ಜಯಪ್ರಕಾಶ್ ಕುಲಾಲ್(45.ವ) ಎಂಬವರು ಸ್ಥಳದಲ್ಲೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಂಗಳೂರು ಐ.ಸಿ.ಐ.ಸಿ.ಐ ಖಾಸಗಿ ಬ್ಯಾಂಕಿನ ವಾಹನ ಚಾಲಕರಾಗಿದ್ದ ಜಯಪ್ರಕಾಶ್ ರವರು ಕೇರಳ ರಾಜ್ಯದ ಎಟಿಎಂಗಳಿಗೆ ಹಣವನ್ನು ತುಂಬಿಸುವ ಸಲುವಾಗಿ ಜು.23 ರಂದು ಸಂಸ್ಥೆಯ ಟಾಟಾ ಎಸ್ ವಾಹನವನ್ನು ಚಲಾಯಿಸುತ್ತಿದ್ದ ವೇಳೆ ಕಣ್ಣೂರು …

ಎಟಿಎಂ ಗೆ ಹಣ ತುಂಬಿಸುವ ವಾಹನಕ್ಕೆ ಟ್ರಕ್ ಡಿಕ್ಕಿ | ಬೆಳ್ತಂಗಡಿಯ ಯುವಕ ವ್ಯಕ್ತಿ ಸಹಿತ ಇಬ್ಬರು ಸಾವು Read More »

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಯನ್ನು ನೀಲಿ ಚಿತ್ರದಲ್ಲಿ ನಟಿಸುವಂತೆ ರಾಜ್ ಕುಂದ್ರಾ ಯತ್ನಿಸಿದ್ದ

ಫಿಲ್ಮ್ ದಂಧೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬಗ್ಗೆ ಶಾಕಿಂಗ್ ವಿಚಾರಗಳು ಬಹಿರಂಗವಾಗುತ್ತಿದೆ. ಈ ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ನಟಿ, ಮಾಡೆಲ್ ಗೆಹನಾ ವಸಿಸ್ತ್ ಅವರನ್ನು ವರ್ಷದ ಆರಂಭದಲ್ಲಿ ಬಂಧಿಸಲಾಗಿತ್ತು. ಜಾಮೀನ ಮೇಲೆ ಹೊರಬಂದರೂ ಇದೀಗ ಮತ್ತೆ ಆಕೆಯ ಹೆಸರು ಸದ್ದು ಮಾಡುತ್ತಿದೆ. ರಾಜ್ ಕುಂದ್ರ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಗೆಹನಾ, ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಯನ್ನು ನೀಲಿ ಚಿತ್ರದಲ್ಲಿ ನಟಿಸುವಂತೆ ಮಾಡಲು ರಾಜ್ ಕುಂದ್ರ …

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಯನ್ನು ನೀಲಿ ಚಿತ್ರದಲ್ಲಿ ನಟಿಸುವಂತೆ ರಾಜ್ ಕುಂದ್ರಾ ಯತ್ನಿಸಿದ್ದ Read More »

ಆಸ್ಪತ್ರೆಗೆ ದಾಖಲಾಗಿರುವ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ ಡಾ.ವೀರೇಂದ್ರ ಹೆಗ್ಗಡೆ

ಮಂಗಳೂರು: ಯೋಗ ಮಾಡುತ್ತಿದ್ದಾಗ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾಂಗ್ರೇಸ್ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಆರೋಗ್ಯ ವಿಚಾರಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಕರ್ ಫರ್ನಾಂಡಿಸ್ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಡಾಡಿ.ವೀರೇಂದ್ರ ಹೆಗ್ಗಡೆಯವರು ಶನಿವಾರ ಆಸ್ಪತ್ರೆಗೆ ಬೇಟಿ ನೀಡಿದರು.ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ ಮೊದಲಾದವರಿದ್ದರು‌. ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಸಹಿತ ಹಲವಾರು ನಾಯಕರು …

ಆಸ್ಪತ್ರೆಗೆ ದಾಖಲಾಗಿರುವ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ ಡಾ.ವೀರೇಂದ್ರ ಹೆಗ್ಗಡೆ Read More »

ಧರ್ಮಸ್ಥಳ | ವೈಭವದಿಂದ ನೆರವೇರಿದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳ ಚಾತುರ್ಮಾಸ್ಯ ವ್ರತಾರಂಭ ಹಾಗೂ ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ

ಸ್ಥಳ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶಾರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭ ಶ್ರೀ ಗುರುದೇವ ಮಠದಲ್ಲಿಇಂದು ನೆರವೇರಿತು. ಶ್ರೀ ಲಕ್ಷ್ಮೀಪತಿ ಗೋಪಾಲಚಾರ್ಯರು, ಆಗಮ ಪ್ರವೀಣ ಬೆಂಗಳೂರು ಇವರ ಪೌರೋಹಿತ್ಯದಲ್ಲಿ ಕಾರ್ಯಕ್ರಮವು ಜರುಗಿತು. ಅನ್ನಛತ್ರದ ಶಿಲಾನ್ಯಾಸವನ್ನು ಶಾಸಕ ಹರೀಶ ಪೂಂಜ ಅವರು ನೆರವೇರಿಸಿದರು. ಚಾತುರ್ಮಾಸ್ಯ ಸಮಿತಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ಸ್ವಾಗತಿಸಿದರು. ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ …

ಧರ್ಮಸ್ಥಳ | ವೈಭವದಿಂದ ನೆರವೇರಿದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳ ಚಾತುರ್ಮಾಸ್ಯ ವ್ರತಾರಂಭ ಹಾಗೂ ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ Read More »

ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ | ಆರು ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ

ಆರು ತಿಂಗಳ ಹಿಂದೆಯಷ್ಟೇ ಮದುವೆಯಾದ ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಸರಗೋಡು ಸಮೀಪದ ಕುಂಬಳೆ ಬಳಿಯ ಕಿದೂರು ಮೈರಾಳ ಎಂಬಲ್ಲಿ ಈ ಪ್ರಕರಣ ನಡೆದಿದೆ. ಮೃತಪಟ್ಟವರನ್ನು ಶ್ರೇಯಾ ಎಂದು ಗುರುತಿಸಲಾಗಿದೆ. ಆರು ತಿಂಗಳ ಹಿಂದೆಯಷ್ಟೇ ಶ್ರೇಯಾ ಅವರ ಮದುವೆ ಉದಯ ಕುಮಾರ್ ಎಂಬವರ ಜತೆ ನಡೆಸಲಾಗಿತ್ತು. ಕುಂಬಳೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top