ಸಚಿವ ಎಸ್.ಅಂಗಾರ ಅವರಿಂದ ಕಡಬ ತಾಲೂಕಿನ ಐದು ಕೇಂದ್ರಗಳಿಗೆ ಇ.ಸಿ.ಜಿ. ಯಂತ್ರ ಹಸ್ತಾಂತರ

ಕಡಬ: ಕಡಬ ತಾಲೂಕಿನ ಐದು ಕೇಂದ್ರಗಳಿಗೆ ಇ.ಸಿ.ಜಿ. ಯಂತ್ರವನ್ನು ಮೀನುಗಾರಿಕೆ, ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಶನಿವಾರ ಹಸ್ತಾಂತರಿಸಿದರು.

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಇ.ಸಿ.ಜಿ. ಯಂತ್ರವನ್ನು ಕಡಬ ತಾಲೂಕಿನ ನೂಜಿಬಾಳ್ತಿಲ, ಕಾಣಿಯೂರು, ಮರ್ದಾಳ, ಸುಬ್ರಹ್ಮಣ್ಯ, ಆಲಂಕಾರು ಕೇಂದ್ರಗಳಿಗೆ ಗ್ರಾ.ಪಂ. ನವರಲ್ಲಿ ಹಸ್ತಾಂತರಿಸಿದರು.

ಕಾರ್ಡಿಯಾಲಾಜಿ ಎಟ್ ಡೋರ್ ಸ್ಟೆಪ್ಸ್ ಫೌಂಡೇಶನ್ ಟ್ರಸ್ಟ್, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಭಾರತೀಯ ಜನೌಷಧಿ ಕೇಂದ್ರ ಇದರ ಸಹಯೋಗದಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯ ಡಾ.ಪದ್ಮನಾಭ ಕಾಮತ್ ಕೆ. ಅವರ ನೇತೃತ್ವದಲ್ಲಿ ಕಡಬ ತಾಲೂಕಿನ ಐದು ಕೇಂದ್ರಗಳಿಗೆ ಇ.ಸಿ.ಜಿ. ಯಂತ್ರ ವಿತರಣೆ ಮಾಡಲಾಗಿತ್ತಯ. ಇದೇ ಸಂದರ್ಭದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಪರೀಕ್ಷಾ ಪರಿಕರಗಳ ಹಸ್ತಾಂತರ ನಡೆಯಿತು.

Ad Widget


Ad Widget


Ad Widget

Ad Widget


Ad Widget

ನೂಜಿಬಾಳ್ತಿಲ ಕೇಂದ್ರಕ್ಕೆ ಇ.ಸಿ.ಜಿ. ಯಂತ್ರವನ್ನು ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ, ಸದಸ್ಯ ಉಮೇಶ್ ಸಾಕೋಟೆಜಾಲು, ಸಿಎ ಬ್ಯಾಂಕ್ ನಿರ್ದೇಶಕ ಹರಿಶ್ಚಂದ್ರ ಪೂಜಾರಿ ಪಡೆದುಕೊಂಡರು. ಕಡಬ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಡಾ.ತ್ರೀಮೂರ್ತಿ, ಡಾ.ಪದ್ಮನಾಭ ಕಾಮತ್ ಕೆ., ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: