Day: June 30, 2021

ನಾಳೆ ದಕ್ಷಿಣಕನ್ನಡದಲ್ಲಿ ಖಾಸಗಿ ಬಸ್ಸುಗಳು ರಸ್ತೆಗೆ | ರೈ..ರೈಟ್ ಮತ್ತು ಥರಾವರಿ ವಿಷಲ್ ಸದ್ದುಗಳಿಂದ ಪೇಟೆ ಪಟ್ಟಣಗಳಿಗೆ ಬರಲಿದೆ ಒಂದು ಹೊಸ ಜೀವಂತಿಕೆ !

ನಾಳೆಯಿಂದ ದಕ್ಷಿಣಕನ್ನಡದ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳ ಭೋರಿಡುತ್ತ ಸಾಗುವ ಸದ್ದು, ಪ್ರತಿ ಸ್ಟಾಪ್ ಗೊಮ್ಮೆ ಕೇಳಿ ಬರುವ ಹೋಲ್ಡ್ ಆನ್, ರೈ ರೈಟ್ ಬೊಬ್ಬೆಯ ಜತೆಗೆ ಕಿವಿ ಸೀಳಿ ಹಾಕುವ ಥರಾವರಿ ವಿಷಲ್ ಮ್ಯೂಸಿಕ್ ಮತ್ತೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಉಡುಪಿಯಾದ್ಯಂತ ಮರುಕಳಿಸಲಿದೆ. ಖಾಸಗಿ ಬಸ್ಸುಗಳು ಜನರಲ್ ಸರ್ವಿಸ್ ಮತ್ತು ಆಯಿಲ್ ಸರ್ವಿಸ್ ಮಾಡಿಕೊಂಡು ಈಗಾಗಲೇ ರೆಡಿಯಾಗಿ ನಿಂತಿದ್ದು, ನಾಳೆ ಒಂದು ಹಿಡಿ ಊದುಬತ್ತಿ ಹೊತ್ತಿಸಿಕೊಂಡು ಬೀದಿಗೆ ಬಂದು ನಿಂತವೆಂದರೆ ಒಂದು ಹೊಸ …

ನಾಳೆ ದಕ್ಷಿಣಕನ್ನಡದಲ್ಲಿ ಖಾಸಗಿ ಬಸ್ಸುಗಳು ರಸ್ತೆಗೆ | ರೈ..ರೈಟ್ ಮತ್ತು ಥರಾವರಿ ವಿಷಲ್ ಸದ್ದುಗಳಿಂದ ಪೇಟೆ ಪಟ್ಟಣಗಳಿಗೆ ಬರಲಿದೆ ಒಂದು ಹೊಸ ಜೀವಂತಿಕೆ ! Read More »

ಭಾರತಕ್ಕೆ ಬರ್ತಿದೆ ನಾಲ್ಕನೆಯ ಲಸಿಕೆ ಮಾಡೆರ್ನಾ | ಲಸಿಕೆ ಆಮದು ಮಾಡಿಕೊಳ್ಳಲು ಭಾರತದ ಸಿಪ್ಲಾ ಕಂಪನಿಗೆ ಡಿಜಿಸಿಐ ಅನುಮತಿ

ನವದೆಹಲಿ: ಭಾರತಕ್ಕೆ ಶೀಘ್ರದಲ್ಲೇ ಮತ್ತೊಂದು ಕೋವಿಡ್ ಲಸಿಕೆ ಲಭ್ಯವಾಗಲಿದ್ದು, ಮಾಡೆರ್ನಾ ಕೋವಿಡ್‌ ಲಸಿಕೆ ಆಮದು ಮಾಡಿಕೊಳ್ಳಲು ಸಿಪ್ಲಾ ಸಂಸ್ಥೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ. ಆ ಮೂಲಕ ಲಸಿಕೆ ಯಾತ್ರೆಗೆ ಮತ್ತಶ್ಟು ಬಲ, ಶೀಘ್ರ ಬರಲಿದೆ. ಆ ಮೂಲಕ ದೇಶಕ್ಕೆ ಸಿಕ್ಕ ನಾಲ್ಕನೇ ಕೋವಿಡ್ ಲಸಿಕೆ ಇದಾಗಿದೆ. ಭಾರತದಲ್ಲಿ ತುರ್ತು ಬಳಕೆಗಾಗಿ ಮಾಡರ್ನಾ ಸಂಸ್ಥೆಯ ಕೋವಿಡ್-19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮೋದನೆ ದೊರೆತಿದೆ. ಅಮೆರಿಕದಲ್ಲಿ ತಯಾರಿಸಲಾಗುತ್ತಿರುವ …

ಭಾರತಕ್ಕೆ ಬರ್ತಿದೆ ನಾಲ್ಕನೆಯ ಲಸಿಕೆ ಮಾಡೆರ್ನಾ | ಲಸಿಕೆ ಆಮದು ಮಾಡಿಕೊಳ್ಳಲು ಭಾರತದ ಸಿಪ್ಲಾ ಕಂಪನಿಗೆ ಡಿಜಿಸಿಐ ಅನುಮತಿ Read More »

ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಸಡಿಲಿಕೆ ಶೀಘ್ರ | ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ಎಲ್ಲಾ ಓಪನ್ – ನಾಳೆ ಅಧಿಕೃತ ಆದೇಶ ಸಾಧ್ಯತೆ

ಬೆಳ್ತಂಗಡಿ : ದಕ್ಷಿಣ ಕನ್ನಡಡಲ್ಲಿ ಮತ್ತಷ್ಟು ಲಾಕ್ ಡೌನ್ ಸಡಿಲಿಕೆಗೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡುವ ಸಾಧ್ಯತೆಯಿದೆ.ಈ ಬಗ್ಗೆ ನಾಳೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬರಲಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ದ.ಕ. ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಮಾತನಾಡಲಾಗಿದೆ. ನಾವು ವಿನಂತಿ ಮಾಡಿದ್ದೇವೆ. ನಾಳೆ, ಗುರುವಾರ ಈ ಬಗ್ಗೆ ಸರಕಾರದ ಅಧಿಕೃತ ಆದೇಶ ಬರುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ …

ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಸಡಿಲಿಕೆ ಶೀಘ್ರ | ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ಎಲ್ಲಾ ಓಪನ್ – ನಾಳೆ ಅಧಿಕೃತ ಆದೇಶ ಸಾಧ್ಯತೆ Read More »

ರಾತ್ರೋ ರಾತ್ರಿ 85 ಮಹಿಳೆಯರನ್ನು ಸಾಗಿಸಿದ ಪ್ರಕರಣಕ್ಕೆ ಸ್ಪೋಟಕ ತಿರುವು | ಆಸ್ಪತ್ರೆಗಳ ಬ್ರಹ್ಮಾಂಡ ಭ್ರಷ್ಟಾಚಾರದ ದೊಡ್ಡ ಷಡ್ಯಂತ್ರ ಬಯಲಿಗೆ

ಕೊರೋನ ಲಸಿಕೆ ಕೊಡಿಸುವುದಾಗಿ 85ಕ್ಕೂ ಹೆಚ್ಚು ಮಹಿಳೆಯರನ್ನು ರಾತ್ರೋ ರಾತ್ರಿ ಬಸ್ಸಿನಲ್ಲಿ ಸಾಗಾಟ ಮಾಡಿದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಕನಚೂರ್ ಮೆಡಿಕಲ್ ಸೈನ್ಸ್ ಕಾಲೇಜಿನ ಇನ್ನೊಂದು ಮುಖ ಬಯಲಾಗಿದೆ.ಮಹಾಮಾರಿಯ ಸಮಯದಲ್ಲಿ ಕೆಲ ವೈದ್ಯರು ಸಹಿತ ಆಸ್ಪತ್ರೆಗಳು ಹಣ ಮಾಡುವ ದಂಧೆ ನಡೆಸುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾದರೆ,ಇನ್ನೂ ಹಲವು ಆಸ್ಪತ್ರೆಗಳ ಬಣ್ಣ ಬಯಲಾಗುವ ಸಾಧ್ಯತೆ ಹೆಚ್ಚಿದೆ. ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡ್ ಗಳನ್ನು ಭರ್ತಿ ಮಾಡಲು ನಕಲಿ ರೋಗಿಗಳನ್ನು ತಲಾ …

ರಾತ್ರೋ ರಾತ್ರಿ 85 ಮಹಿಳೆಯರನ್ನು ಸಾಗಿಸಿದ ಪ್ರಕರಣಕ್ಕೆ ಸ್ಪೋಟಕ ತಿರುವು | ಆಸ್ಪತ್ರೆಗಳ ಬ್ರಹ್ಮಾಂಡ ಭ್ರಷ್ಟಾಚಾರದ ದೊಡ್ಡ ಷಡ್ಯಂತ್ರ ಬಯಲಿಗೆ Read More »

ತನ್ನ ಮೂವರು ಮಕ್ಕಳಿಗೆ ಐಸ್ ಕ್ರೀಂ ನಲ್ಲಿ ವಿಷ ಬೆರೆಸಿದ ಪಾಪಿ ತಂದೆ

ಮುಂಬೈ: ಕೌಟುಂಬಿಕ ಕಲಹದ ಕಾರಣ ತಂದೆಯೊಬ್ಬ ತನ್ನ ಮೂರು ಮಕ್ಕಳಿಗೆ ಐಸ್ ಕ್ರೀಂ ನಲ್ಲಿ ವಿಷ ಬೆರೆಸಿ ತಿನ್ನಿಸಿ ಹತ್ಯೆಗೆ ಯತ್ನಿಸಿದ್ದಾನೆ. ಐಸ್ ಕ್ರೀಂ ತಿಂದ ಮಗುವೊಂದು ಸಾವನ್ನಪ್ಪಿದೆ. ಐದು ವರ್ಷ ಪ್ರಾಯದ ಮಗು ಪ್ರಾಣ ಕಳೆದುಕೊಂಡಿದೆ. ಇನ್ನಿಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಏಳು ಮತ್ತು ಎರಡು ವರ್ಷ ಪ್ರಾಯದ ಮಕ್ಕಳ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಮುಂಬೈನ ಮಂಕರ್ಡ್‌ ಪೊಲೀಸ್ ಠಾಣಾ …

ತನ್ನ ಮೂವರು ಮಕ್ಕಳಿಗೆ ಐಸ್ ಕ್ರೀಂ ನಲ್ಲಿ ವಿಷ ಬೆರೆಸಿದ ಪಾಪಿ ತಂದೆ Read More »

ಅಪಾಯದ ಮುನ್ಸೂಚನೆ ಕೊಟ್ಟ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಉಜಿರೆ ಪಂಚಾಯತ್ ಉಪಾಧ್ಯಕ್ಷರ ಜೊತೆ ಸೇರಿ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ.

ಜೂ, 30, ಧರ್ಮಸ್ಥಳ : ಧರ್ಮಸ್ಥಳ-ಉಜಿರೆ ರಾಜ್ಯ ಹೆದ್ದಾರಿಯಲ್ಲಿ ಸಣ್ಣದೊಂದು ಬಿರುಕು ಕಾಣಿಸಿಕೊಂಡಿದ್ದು ಒಳಭಾಗ ಪೂರ್ತಿಯಾಗಿ ಟೊಳ್ಳಾಗಿದ್ದು ದಿನನಿತ್ಯ ಸಾವಿರಾರು ವಾಹನಗಳು ಓಡಾಡುವ ಜಾಗವಾದ್ದರಿಂದ ಅಪಾಯದ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸ್ಥಳೀಯ ಪಂಚಾಯತ್ ಗಮನಕ್ಕೆ ತಂದು ಸಮಯಪ್ರಜ್ಞೆ ಮೆರೆದರು. ಘಟನೆಯ ವಿವರ : ನಡ-ಕನ್ಯಾಡಿ ಘಟಕದ ಶೌರ್ಯ ಸ್ವಯಂಸೇವಕ ಮಂಜುನಾಥ್ ಧರ್ಮಸ್ಥಳದಿಂದ ಉಜಿರೆ ಕಡೆ ತೆರಳುತ್ತಿದ್ದಾಗ ರಸ್ತೆಯ ಮಧ್ಯಭಾಗದಲ್ಲಿ ಸಣ್ಣ ಗುಳಿಯೊಂದನ್ನು ಗಮನಿಸಿದ್ದಾರೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಒಳಭಾಗ ಪೂರ್ತಿಯಾಗಿ …

ಅಪಾಯದ ಮುನ್ಸೂಚನೆ ಕೊಟ್ಟ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಉಜಿರೆ ಪಂಚಾಯತ್ ಉಪಾಧ್ಯಕ್ಷರ ಜೊತೆ ಸೇರಿ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ. Read More »

ಕೇವಲ ರೂ.10 ಕ್ಕೆ 100 ಕಿ.ಮೀ ಓಡುತ್ತೆ ಈ ಬೈಕ್ | ‘ಇನ್ನು ಎಷ್ಟು ಕೊಡುತ್ತೆ ಮೈಲೇಜು ?’ ಎಂದು ನೀವು ಕೇಳುವಂತೆಯೇ ಇಲ್ಲ, ಹಾಗಿದೆ ಈ ಇ-ಬೈಕ್ ಪರ್ಫಾರ್ಮೆನ್ಸ್

ಹೈದರಾಬಾದ್ : ಎಷ್ಟು ಕೊಡುತ್ತೆ, ಎಥ್ ಕೊರ್ಪುಂಡ್, ಕಿತ್ನ ದೇತಾಹೈ ಮುಂತಾದ ಪ್ರಶ್ನೆ ಕೇಳುವ ಭಾರತೀಯ ಗ್ರಾಹಕರಿಗಾಗಿ ಹೈದರಾಬಾದ್ ಮೂಲದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯೊಂದು ಜಬರ್ದಸ್ತ್ ಮೈಲೇಜ್ ಉಳ್ಳ ಬೈಕ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ ನೀವು ಮೈಲೇಜ್ ಕೇಳುವಂತೆಯೇ ಇಲ್ಲ. ಆ ರೇಂಜಿಗೆ ಇದೆ ಆ ಬೈಕಿನ ಮೈಲೇಜು. ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯಾಗಿರುವ ಗ್ರಾವ್ಟನ್ ಮೋಟಾರ್ಸ್ (Gravton Motors) Gravton Quanta ಕ್ವಾಂಟಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. …

ಕೇವಲ ರೂ.10 ಕ್ಕೆ 100 ಕಿ.ಮೀ ಓಡುತ್ತೆ ಈ ಬೈಕ್ | ‘ಇನ್ನು ಎಷ್ಟು ಕೊಡುತ್ತೆ ಮೈಲೇಜು ?’ ಎಂದು ನೀವು ಕೇಳುವಂತೆಯೇ ಇಲ್ಲ, ಹಾಗಿದೆ ಈ ಇ-ಬೈಕ್ ಪರ್ಫಾರ್ಮೆನ್ಸ್ Read More »

ಬ್ಯಾಟರಿ ನುಂಗಿ ಹೆಣ್ಣು ಮಗು ಸಾವು..ಎಚ್ಚರವಿರಲಿ ಪೋಷಕರೇ!ಆಕೆಗೆ ಅರಿವಿರಲಿಲ್ಲ ಬ್ಯಾಟರಿ ತನ್ನ ಜೀವ ನುಂಗುವುದೆಂದು!

ಮಕ್ಕಳ ಬಗೆಗೆ ಗಮನಹರಿಸುವುದು ಪೋಷಕರ ಕರ್ತವ್ಯ, ಅದರಲ್ಲೂ ಸಣ್ಣ ಮಕ್ಕಳಿದ್ದರೆ ಇನ್ನೂ ಹೆಚ್ಚು ಗಮನಹರಿಸುವುದು ಉತ್ತಮ. ಪೋಷಕರ ನಿರ್ಲಕ್ಷ್ಯಕ್ಕೆ ಜಗವನ್ನೇ ಅರಿಯದ ಕಂದಮ್ಮಗಳು ತಮ್ಮ ಜೀವವನ್ನು ತೆತ್ತರೆ? ಹೌದು. ಇಂತಹದೊಂದು ಘಟನೆ ವಿದೇಶದಲ್ಲಿ ನಡೆದಿದೆ. ಇಂಗ್ಲೆಂಡ್ ನ ಸ್ಟೋಕ್ ಆನ್ ಟ್ರೆಂಟ್‌ನಲ್ಲಿ ವಾಸಿಸುವ ಎರಡು ವರ್ಷದ ಹಾರ್ಪರ್ ಎಂಬ ಹೆಸರಿನ ಮುದ್ದಾದ ಹೆಣ್ಣು ಮಗು ಹೆತ್ತವರ ನಿರ್ಲಕ್ಷ್ಯದಿಂದಾಗಿಯೇ ರಿಮೋಟ್ ಬ್ಯಾಟರಿಯನ್ನು ನುಂಗಿ ಸಾವನ್ನಪ್ಪಿದೆ. ಆಕೆ ಬ್ಯಾಟರಿ ನುಂಗಿದ್ದಾಳೆಂದು ಗೊತ್ತಾಗಿದೆ. ಆ ಬಳಿಕ ಮಗುವಿನ ಸ್ಥಿತಿ ಹದಗೆಡುತ್ತಾ ಬಂದಿದೆ. …

ಬ್ಯಾಟರಿ ನುಂಗಿ ಹೆಣ್ಣು ಮಗು ಸಾವು..ಎಚ್ಚರವಿರಲಿ ಪೋಷಕರೇ!ಆಕೆಗೆ ಅರಿವಿರಲಿಲ್ಲ ಬ್ಯಾಟರಿ ತನ್ನ ಜೀವ ನುಂಗುವುದೆಂದು! Read More »

ಕೆರೆಯಲ್ಲಿ ದನ ತೊಳೆಯುತ್ತಿರುವಾಗ ದುರಂತ ಅಂತ್ಯ ಕಂಡ ಇಬ್ಬರು ಬಾಲಕರು

ಹಾವೇರಿ: ಹಿರೆಕೇರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಬಾಲಕರಿಬ್ಬರು ಹಸುವಿನ ಮೈತೊಳೆಯಲು ಹೋಗಿ ದುರಂತ ಅಂತ್ಯ ಕಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಅಭಿಷೇಕ ಹಂಡೋರಿ ಮತ್ತು ಹರೀಶ ಬಾಳಿಕಾಯಿ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಇವರಿಬ್ಬರು ಗೂದಿಹಳ್ಳಿ ಗ್ರಾಮದ ಮಾಸೂರು ರಸ್ತೆ ಬಳಿಯ ಕೆರೆಯಲ್ಲಿ ಹಸುವಿನ ಮೈತೊಳೆಯಲು ಹೋಗಿದ್ದರು. ಈ ವೇಳೆ ಕೆರೆಯಲ್ಲಿ ಕಾಲು ಜಾರಿ ಬಿದ್ದು ಈಜಲು ಬಾರದೆ ಜಲಸಮಾಧಿ ಆಗಿದ್ದಾರೆ. ಬಾಲಕರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ಯಾವಾಗಲೂ ಜೊತೆಯಾಗಿರುತ್ತಿದ್ದರು ಎಂದು ತಿಳಿದು ಬಂದಿದೆ. ಬಾಲಕರನ್ನು ಕಳೆದುಕೊಂಡ …

ಕೆರೆಯಲ್ಲಿ ದನ ತೊಳೆಯುತ್ತಿರುವಾಗ ದುರಂತ ಅಂತ್ಯ ಕಂಡ ಇಬ್ಬರು ಬಾಲಕರು Read More »

ಕಾರು ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಡಿಕ್ಕಿ | ಕಾರು ಚಲಾಯಿಸುತ್ತಿದ್ದ ಗೃಹರಕ್ಷಕದಳದ ಸಿಬ್ಬಂದಿಗೆ ಗಂಭೀರ ಗಾಯ

ಕಾರು ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿ ಗಂಭೀರ ಗಾಯಗೊಂಡ ಘಟನೆ ಉದ್ಯಾವರ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಗಾಯಾಳುವನ್ನು ಮೂಲ್ಕಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಕೇಶ್ (27) ಎಂದು ಗುರುತಿಸಲಾಗಿದೆ. ರಾಕೇಶ್ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಇಂದು ಮುಂಜಾನೆ 5:30ರ ಸುಮಾರಿಗೆ ಮುಲ್ಕಿಯಿಂದ ತನ್ನ ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಉದ್ಯಾವರದ ಬಳಿ ರಾಕೇಶ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ತೆರಳುತ್ತಿದ್ದ ಟ್ಯಾಂಕರ್ …

ಕಾರು ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಡಿಕ್ಕಿ | ಕಾರು ಚಲಾಯಿಸುತ್ತಿದ್ದ ಗೃಹರಕ್ಷಕದಳದ ಸಿಬ್ಬಂದಿಗೆ ಗಂಭೀರ ಗಾಯ Read More »

error: Content is protected !!
Scroll to Top