Day: June 7, 2021

ಹಸಿ ಕಸ ಒಣ ಕಸ ವಿಗಂಡಣೆ ಮಾಡದ ಅಪಾರ್ಟ್ಮೆಂಟ್ ಗೆ ಬರೋಬ್ಬರಿ 53 ಸಾವಿರ ದಂಡ ವಿಧಿಸಿದ ಮ.ನ.ಪಾ

ಮಂಗಳೂರು ಮಹಾನಗರ ಪಾಲಿಕೆಯು ಹಸಿ ಕಸ ಮತ್ತು ಒಣ ಕಸ ವಿಂಗಡಿಸದ ಅಪಾರ್ಟ್ ಮೆಂಟ್ ಗೆ ಬರೋಬ್ಬರಿ 53 ಸಾವಿರ ರೂಪಾಯಿ ದಂಡ ವಿಧಿಸಿದೆ. ಮಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಸಲು ಮಹಾನಗರಪಾಲಿಕೆ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಿಸುವಂತೆ ಆದೇಶ ಹೊರಡಿಸಿದ್ದು, ಕೆಲವು ಅಪಾರ್ಟ್ ಮೆಂಟ್ ಗಳಲ್ಲಿ ಕಸ ವಿಂಗಡಣೆ ಮಾಡದಿರುವ ಕುರಿತಿ ದೂರುಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿ ಅಪಾರ್ಟ್ಮೆಂಟ್‌ವೊಂದಕ್ಕೆ ದಂಡ ಹಾಕುವ ಮೂಲಕ ಬಿಸಿ …

ಹಸಿ ಕಸ ಒಣ ಕಸ ವಿಗಂಡಣೆ ಮಾಡದ ಅಪಾರ್ಟ್ಮೆಂಟ್ ಗೆ ಬರೋಬ್ಬರಿ 53 ಸಾವಿರ ದಂಡ ವಿಧಿಸಿದ ಮ.ನ.ಪಾ Read More »

ಹಿಂದೂ ಯುವತಿಯನ್ನು ಪ್ರೀತಿಸಲು ಪೀಡನೆ | ಯುವತಿಯ ಅಪ್ಪನ ಏಟಿಗೆ ಜೀವನ್ಮರಣ ಸ್ಥಿತಿಯಲ್ಲಿ ಫಿರೋಜ್ ಖಾನ್!

ತನ್ನ ಮಗಳ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದ ಹಿಂದೂ ಯುವತಿಯ ತಂದೆಯೋರ್ವ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ. ಗೌರಿಬಿದನೂರು ತಾಲೂಕಿನ ಕಲ್ಲಿನಾಯಜನಹಳ್ಳಿ ಬಳಿ ಈ ನಡೆದಿದೆ. ಬಸವಾಪುರ ಗ್ರಾಮದ ಫೀರೋಜ್ ಖಾನ್(26) ಹಲ್ಲೆಗೊಳಗಾದ ಯುವಕ. ಕಲ್ಲಿನಾಯಕನಹಳ್ಳಿಯ ಗಂಗಾಧರ್ ಎಂಬಾತ ಹಲ್ಲೆ ನಡೆಸಿದ್ದಾನೆ. ಫಿರೋಜ್ ಖಾನ್ ಕಲ್ಲಿನಾಯಜನಹಳ್ಳಿಯ ಹಿಂದೂ ಯುವತಿ ಹಿಂದೆ ಬಿದ್ದಿದ್ದ ಹಾಗೂ ತುಂಬಾನೇ ಪೀಡಿಸುತ್ತಿದ್ದ. ಈ ವಿಷಯ ಆಕೆಯ ತಂದೆಯ ಗಮನಕ್ಕೆ ಬಂದಿದ್ದು, ಅವನನ್ನು ಕರೆದು ಈ ಹಿಂದೆಯೇ ಎಚ್ಚರಿಕೆ …

ಹಿಂದೂ ಯುವತಿಯನ್ನು ಪ್ರೀತಿಸಲು ಪೀಡನೆ | ಯುವತಿಯ ಅಪ್ಪನ ಏಟಿಗೆ ಜೀವನ್ಮರಣ ಸ್ಥಿತಿಯಲ್ಲಿ ಫಿರೋಜ್ ಖಾನ್! Read More »

ಕೋವಿಡ್ ಉಚಿತ ಸೇವೆಯಲ್ಲಿ ಸುಳ್ಯ ಶಿವ ಅಂಬ್ಯುಲೆನ್ಸ್ |ಮಾಜಿ ಸಚಿವ ರಮಾನಾಥ ರೈ ಅಭಿನಂದನೆ

ಸುಳ್ಯ : ಕೋವಿಡ್ 19 ನ ಸಂದಿಗ್ಧ ಸಂದರ್ಭದಲ್ಲಿ ಉಚಿತ ಸೇವೆ ಮಾಡುತ್ತಿರುವ ಸುಳ್ಯದ ಶಿವ ಅಂಬ್ಯುಲೆನ್ಸ್ ನ ಚಾಲಕ ಹಾಗೂ ಮಾಲಕರನ್ನು ಗೌರವಿಸಲಾಯಿತು. ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಶಿವ ಅಂಬ್ಯುಲೆನ್ಸ್ ನ ಚಾಲಕ ಮಾಲಕರನ್ನು ಅಭಿನಂದಿಸಿ ಗೌರವಿಸಿದರು.

ಬೆಳ್ತಂಗಡಿ: ಮನೆಯಿಂದ ಹೊರ ಹೋದವರು ಶವವಾಗಿ ಪತ್ತೆ | ಎರಡು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡಿದ್ದರು

ಬೆಳ್ತಂಗಡಿ ತಾಲೂಕು ಕಳೆಂಜ ಕಳೆಂಜ ಗ್ರಾಮದಲ್ಲಿ ಮತ್ತೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಇದು ಎರಡನೆಯ ಪ್ರಕರಣ. ಕಳೆಂಜ ಗ್ರಾಮದ ಬುಡಾರ ಮನೆ ನಿವಾಸಿ ಪೆರ್ನು ಗೌಡ (48 ವ) ಅವರು ಮೃತ ಪಟ್ಟ ದುರ್ದೈವಿ. ಜೂ.6ರ ಸಂಜೆ ಮನೆಯಿಂದ ಯಾವುದೋ ಕಾರ್ಯಕ್ರಮಕ್ಕೆ ಇಂದು ಹೊರಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಇವತ್ತು, ಜೂ.7ರ ಮಧ್ಯಾಹ್ನ ಶವವಾಗಿ ಚಾಕೋಟೆತ್ತಡಿ ಮಹಾಬಲ ಗೌಡ ಎಂಬವರಿಗೆ ಸೇರಿದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದೆ. ಜೂ.6ರ ರಾತ್ರಿ ಹೋಗಿದ್ದ …

ಬೆಳ್ತಂಗಡಿ: ಮನೆಯಿಂದ ಹೊರ ಹೋದವರು ಶವವಾಗಿ ಪತ್ತೆ | ಎರಡು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡಿದ್ದರು Read More »

ಸರ್ವೆ : ಕುಸಿಯುವ ಹಂತದಲ್ಲಿದ್ದ ಬಡ ಕುಟುಂಬದ ಮನೆಯ ಮೇಲ್ಛಾವಣಿಯನ್ನು ದುರಸ್ತಿ ಮಾಡಿದ ಶ್ರೀ ಷಣ್ಮುಖ ಯುವಕ ಮಂಡಲ

ಸವಣೂರು: ಕುಸಿಯುವ ಹಂತದಲ್ಲಿದ್ದ ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಬೊಗ್ಗ ಮೊಗೇರ-ರಾಧಾ ದಂಪತಿಗಳ ಮನೆಯ ಮೇಲ್ಚಾವಣಿಯನ್ನು 15000 ರೂ ವೆಚ್ಚದಲ್ಲಿ ದುರಸ್ತಿ ಮಾಡಿಕೊಡುವ ಮೂಲಕ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ. ಶಿಥಿಲಾವಸ್ಥೆಗೆ ತಲುಪಿದ್ದ ಮನೆಯ ಮೇಲ್ಛಾವಣಿ ಮಳೆಗೆ ಬೀಳುವ ಹಂತದಲ್ಲಿದ್ದು ಮನೆ ಮಂದಿ ಆತಂಕದಲ್ಲಿದ್ದರು. ಅಲ್ಲದೇ ಮನೆಯವರು ತಮ್ಮ ಕಷ್ಟದ ಬಗ್ಗೆ ಸ್ಥಳೀಯ ಷಣ್ಮುಖ ಯುವಕ ಮಂಡಲದ ಸದಸ್ಯರ ಬಳಿ ಹೇಳಿಕೊಂಡಿದ್ದರು. ಇದಕ್ಕೆ ಸ್ಪಂಧಿಸಿದ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು, …

ಸರ್ವೆ : ಕುಸಿಯುವ ಹಂತದಲ್ಲಿದ್ದ ಬಡ ಕುಟುಂಬದ ಮನೆಯ ಮೇಲ್ಛಾವಣಿಯನ್ನು ದುರಸ್ತಿ ಮಾಡಿದ ಶ್ರೀ ಷಣ್ಮುಖ ಯುವಕ ಮಂಡಲ Read More »

ದೇಶದ ಜನತೆಗೆ ಉಚಿತ ಕೋವಿಡ್ ಲಸಿಕೆ – ಪ್ರಧಾನಿ ಮೋದಿ ಅಭಯ

ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಜನತೆಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಮಹತ್ವದ ಘೋಷಣೆಯನ್ನು ಪ್ರಧಾನಿ ಹೇಳಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ 19 ಸೋಂಕು ತಡೆಗಟ್ಟಲು ಹಂತ, ಹಂತವಾಗಿ ಲಾಕ್ ಡೌನ್ ಸೇರಿದಂತೆ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿದ್ದವು. ದೇಶದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಕೂಡಾ ಕಡಿಮೆಯಾಗಿದ್ದು, ಸಕ್ರಿಯ ಕೋವಿಡ್ 19 ಪ್ರಕರಣಗಳ …

ದೇಶದ ಜನತೆಗೆ ಉಚಿತ ಕೋವಿಡ್ ಲಸಿಕೆ – ಪ್ರಧಾನಿ ಮೋದಿ ಅಭಯ Read More »

ದ.ಕ. ಜಿಲ್ಲೆಯಲ್ಲಿ ಮುಂದಿನ ವಾರದಿಂದ ಕೋವಿಡ್ ನಿಯಂತ್ರಣ ನಿಯಮ ಇನ್ನಷ್ಟು ಬಿಗಿ | 150 ತಪಾಸಣಾ ತಂಡ ರಚನೆ- ಜಿಲ್ಲಾಧಿಕಾರಿ

ಲಾಕ್ ಡೌನ್ ಕುರಿತಂತೆ ಜಿಲ್ಲೆಯಲ್ಲಿ ಈಗಿರುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಅವರು ಹೇಳಿದರು. ಜೂನ್ 07ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ‌ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಅನ್ ಲಾಕ್ ಮಾಡ ಬೇಕಾದರೆ ಪಾಸಿಟಿವಿಟಿ ದರ ಕಡಿಮೆ ಮಾಡುವ ಅಗತ್ಯವಿದೆ. ಹಾಗಾಗಿ ಮುಂದಿನ 1 ವಾರ ಕಾಲ ಜನರ ಅನಗತ್ಯ ಸಂಚಾರವನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಈ ನಿಟ್ಟಿನಲ್ಲಿ ಮಂಗಳೂರು ನಗರ ಪಾಲಿಕೆ …

ದ.ಕ. ಜಿಲ್ಲೆಯಲ್ಲಿ ಮುಂದಿನ ವಾರದಿಂದ ಕೋವಿಡ್ ನಿಯಂತ್ರಣ ನಿಯಮ ಇನ್ನಷ್ಟು ಬಿಗಿ | 150 ತಪಾಸಣಾ ತಂಡ ರಚನೆ- ಜಿಲ್ಲಾಧಿಕಾರಿ Read More »

ಬೆಳ್ತಂಗಡಿ | ಛಾಯಾಗ್ರಾಹಕ ಸಂಘದಿಂದ ವಿಶೇಷ ಪ್ಯಾಕೇಜ್ ಗೆ ಮನವಿ

ಬೆಳ್ತಂಗಡಿ: ಕೊರೋನ ಎರಡನೇ ಅಲೆಯಿಂದಾಗಿ ಈಗಾಗಲೇ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಯಾರೂ ಮದುವೆ, ಶುಭಕಾರ್ಯ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆಳವಣಿಗೆಯಿಂದ ಸಮಾರಂಭಗಳಲ್ಲಿ ಫೋಟೋಗ್ರಫಿ, ವೀಡಿಯೋಗ್ರಫಿ ಮಾಡಿ ಜೀವನ ನಡೆಸುತ್ತಿದ್ದ ಛಾಯಾಚಿತ್ರಗ್ರಾಹಕರು ಇದೀಗ ಸಂಕಷ್ಟದಲ್ಲಿದ್ದಾರೆ. ತಾಲೂಕಿನಾದ್ಯಂತ ಮಧ್ಯಮ ವರ್ಗದ ಅನೇಕ ಛಾಯಾಗ್ರಾಹಕರಿದ್ದು, ಸಂಸಾರದ ನಿರ್ವಹಣೆ, ಮನೆ ಸಾಲ, ಕ್ಯಾಮರಾ ಪರಿಕರಗಳ ನಿರ್ವಹಣೆ ಸೇರಿದಂತೆ ಬ್ಯಾಂಕ್ ಸಾಲ ಕಟ್ಟಲು ಆಗದೆ ಕಷ್ಟ ಪಡುತ್ತಿದ್ದಾರೆ. ಹಲವರಿಗೆ ಬೇರೆ ಆದಾಯದ ಮೂಲವೂ ಇಲ್ಲದೆ …

ಬೆಳ್ತಂಗಡಿ | ಛಾಯಾಗ್ರಾಹಕ ಸಂಘದಿಂದ ವಿಶೇಷ ಪ್ಯಾಕೇಜ್ ಗೆ ಮನವಿ Read More »

ಬೆಳ್ತಂಗಡಿ | ನೆರಿಯದ ಸಿಯೊನ್ ಆಶ್ರಮದಲ್ಲಿ ಮತ್ತೆ ಕಳವಳ | 20 ಕ್ಕೂ ಅಧಿಕ ಮಂದಿ ಧರ್ಮಸ್ಥಳದ ರಜತಾದ್ರಿ ಗೆ ಶಿಫ್ಟ್

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದಲ್ಲಿ ಮತ್ತೆ ಕಳವಳ. ಮಾರಕ ಕೊರಾನಾಗೆ ಇದೀಗ ಮತ್ತೆ 22 ಕ್ಕಿಂತಲೂ ಅಧಿಕ ಜನರು ಕೋರೋನಾ ಭಾದೆ ಅನುಭವಿಸಿದ್ದಾರೆ. ಈಗ ಕೋರೋನಾ ಸೋಂಕಿತರ ಪೈಕಿ ಇಬ್ಬರನ್ನು ಆಂಬುಲೆನ್ಸ್ ಮೂಲಕ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಉಳಿದ 20 ರನ್ನೂ ಅಧಿಕ ಜನರನ್ನು ಧರ್ಮಸ್ಥಳದ ರಜತಾದ್ರಿ ವಸತಿಗೃಹಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿ ಅವರನ್ನು ಕ್ವರಂಟೈನ್ ಮಾಡಲಾಗುವುದು. ಸಿಯೋನ್ ಆಶ್ರಮದಲ್ಲಿ ಒಟ್ಟು ಸುಮಾರು 270 ಆಶ್ರಮವಾಸಿಗಳಿದ್ದು, ಅವರಲ್ಲಿ ಒಟ್ಟು 194 ಜನ …

ಬೆಳ್ತಂಗಡಿ | ನೆರಿಯದ ಸಿಯೊನ್ ಆಶ್ರಮದಲ್ಲಿ ಮತ್ತೆ ಕಳವಳ | 20 ಕ್ಕೂ ಅಧಿಕ ಮಂದಿ ಧರ್ಮಸ್ಥಳದ ರಜತಾದ್ರಿ ಗೆ ಶಿಫ್ಟ್ Read More »

ಕಳ್ಳತನ ಮಾಡಿ ಪರಾರಿಯಾಗುವಾಗ ಅಪಘಾತ | ಇಬ್ಬರು ಪೊಲೀಸರ ವಶಕ್ಕೆ

ಕಳ್ಳತನ ಮಾಡಿ ಬೈಕ್‍ನಲ್ಲಿ ಪರಾರಿಯಾಗುವಾಗ ಅಪಘಾತಗೊಂಡು ಇಬ್ಬರು ಆರೋಪಿಗಳು ಬೆಂಗಳೂರು ನಗರದ ಪೀಣ್ಯ ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೀಣ್ಯಾದ ಟಿವಿಎಸ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಬೆದರಿಸಿ ಸುಲಿಗೆ ಮಾಡಿ ಬೈಕ್‍ನಲ್ಲಿ ವೇಗವಾಗಿ ಆರೋಪಿಗಳು ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ವ್ಯಕ್ತಿಯು ರಕ್ಷಣೆಗಾಗಿ ಕೂಗಿಕೊಂಡಿದ್ದರಿಂದ ಧಾವಿಸಿದ ಸ್ಥಳೀಯರು ಹಿಡಿಯಲು ಹೋದಾಗ ಗಡಿಬಿಡಿಯಲ್ಲಿ ಬೈಕ್ ಓಡಿಸಿ ಟೆಂಪೋ ಟ್ರಾವೆಲರ್‌ವೊಂದಕ್ಕೆ ಢಿಕ್ಕಿ ಹೊಡೆದಿದ್ದಾರೆ. ಈ ವೇಳೆ ಇಬ್ಬರೂ ಬೈಕ್ ಸಮೇತ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು …

ಕಳ್ಳತನ ಮಾಡಿ ಪರಾರಿಯಾಗುವಾಗ ಅಪಘಾತ | ಇಬ್ಬರು ಪೊಲೀಸರ ವಶಕ್ಕೆ Read More »

error: Content is protected !!
Scroll to Top