ಬೆಳ್ತಂಗಡಿ | ಛಾಯಾಗ್ರಾಹಕ ಸಂಘದಿಂದ ವಿಶೇಷ ಪ್ಯಾಕೇಜ್ ಗೆ ಮನವಿ

ಬೆಳ್ತಂಗಡಿ: ಕೊರೋನ ಎರಡನೇ ಅಲೆಯಿಂದಾಗಿ ಈಗಾಗಲೇ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಯಾರೂ ಮದುವೆ, ಶುಭಕಾರ್ಯ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆಳವಣಿಗೆಯಿಂದ ಸಮಾರಂಭಗಳಲ್ಲಿ ಫೋಟೋಗ್ರಫಿ, ವೀಡಿಯೋಗ್ರಫಿ ಮಾಡಿ ಜೀವನ ನಡೆಸುತ್ತಿದ್ದ ಛಾಯಾಚಿತ್ರಗ್ರಾಹಕರು ಇದೀಗ ಸಂಕಷ್ಟದಲ್ಲಿದ್ದಾರೆ.

ತಾಲೂಕಿನಾದ್ಯಂತ ಮಧ್ಯಮ ವರ್ಗದ ಅನೇಕ ಛಾಯಾಗ್ರಾಹಕರಿದ್ದು, ಸಂಸಾರದ ನಿರ್ವಹಣೆ, ಮನೆ ಸಾಲ, ಕ್ಯಾಮರಾ ಪರಿಕರಗಳ ನಿರ್ವಹಣೆ ಸೇರಿದಂತೆ ಬ್ಯಾಂಕ್ ಸಾಲ ಕಟ್ಟಲು ಆಗದೆ ಕಷ್ಟ ಪಡುತ್ತಿದ್ದಾರೆ. ಹಲವರಿಗೆ ಬೇರೆ ಆದಾಯದ ಮೂಲವೂ ಇಲ್ಲದೆ ಜೀವನ ನಡೆಸಲು ತುಂಬಾನೇ ಕಷ್ಟ ಪಡುತ್ತಿದ್ದಾರೆ.

ತಾವು ನಮ್ಮ ಸಂಕಷ್ಟವನ್ನು ಮನಗಂಡು ಸರಕಾರದಿಂದ ನಮ್ಮ ಛಾಯಾಗ್ರಹಕರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಶಾಸಕ ಹರೀಶ್ ಪೂಂಜಾ ರಲ್ಲಿ ಛಾಯಾಗ್ರಾಹಕರ ಸಂಘದವರು ವಿನಂತಿ ಮಾಡಿಕೊಂಡಿದ್ದಾರೆ. ಛಾಯಾಗ್ರಾಹಕರ ಮನವಿಗೆ ಸ್ಪಂದಿಸಿರುವ ಶಾಸಕರು ಮುಂದಿನ ಹಂತದ ಪ್ಯಾಕೇಜ್ ಯಲ್ಲಿ ಪರಿಹಾರದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮನವಿ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.

Leave A Reply

Your email address will not be published.