Day: May 18, 2021

ವಿಟ್ಲಮುಡ್ನೂರಿನಲ್ಲಿ ಸಿಡಿಲು ಬಡಿದು ಇಬ್ಬರಿಗೆ ಗಾಯ

ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ವಿಟ್ಲಮುಡ್ನೂರು ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ವಿಟ್ಲಮುಡ್ನೂರು ಗ್ರಾಮದ ಪೈಸಾರಿ ನಿವಾಸಿಗಳಾದ ರಮಾವತಿ, ಶ್ಯಾಮಲ ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗೋಪಾಲಕೃಷ್ಣ ನಾಯಕ್ ಅವರ ಮನೆಗೆ ಸಿಡಿಲು ಬಡಿದಿತ್ತು. ಮನೆಯ ಮೇಲ್ಛಾವಣಿ ಕುಸಿದು ಸುಮಾರು ರೂ.50 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮಕರಣಿಕ ಕರಿಬಸಪ್ಪ, ಸಹಾಯಕ ರುಕ್ಮಯ ಭೇಟಿ ನೀಡಿದ್ದಾರೆ

ದ.ಕ.ಜಿಲ್ಲೆಯಲ್ಲಿ ಇಂದು ಕೋವಿಡ್‌ಗೆ 7 ಬಲಿ , 777 ಮಂದಿಗೆ ಪಾಸಿಟಿವ್

ದ.ಕ. ಜಿಲ್ಲೆಯಲ್ಲಿ ಮಂಗಳವಾರ 7 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 828ಕ್ಕೇರಿದೆ. ಅಲ್ಲದೆ ಮಂಗಳವಾರ ಜಿಲ್ಲೆಯಲ್ಲಿ 777 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. 1449 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರಗೆ 8,10,123 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,44,215 ಮಂದಿಯ ವರದಿ ನೆಗೆಟಿವ್ ಬಂದಿದೆ. ಅಲ್ಲದೆ 65,908 ಮಂದಿ ಕೊರೋನ ಸೋಂಕಿಗೊಳಗಾಗಿದ್ದಾರೆ. ಈ ಪೈಕಿ 54,098 ಮಂದಿ ಗುಣಮುಖರಾಗಿದ್ದಾರೆ. ಸದ್ಯ 10,982 …

ದ.ಕ.ಜಿಲ್ಲೆಯಲ್ಲಿ ಇಂದು ಕೋವಿಡ್‌ಗೆ 7 ಬಲಿ , 777 ಮಂದಿಗೆ ಪಾಸಿಟಿವ್ Read More »

ಕರಾವಳಿಗರಿಗೆ ಪಡಿತರದಲ್ಲಿ ಇನ್ನು ಮುಂದೆ ಸಿಗಲಿದೆ ಕೆಂಪು ಕುಚಲಕ್ಕಿ

ಮಂಗಳೂರು : ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸರಕಾರ ಪ್ರಸ್ತುತ ಸರಬರಾಜು ಮಾಡುತ್ತಿರುವ ಕುಚಲಕ್ಕಿಯು ಸಾಂಪ್ರದಾಯಕ ವಾಗಿ ಕೆಂಪು ಕುಚ್ಚಲಕ್ಕಿ ಊಟ ಮಾಡುವವರೆಗೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಪಡಿತರದಲ್ಲಿ ನೀಡುವ ಅಕ್ಕಿಯನ್ನು ಕೆಲವು ಕಾರ್ಡುದಾರರು ಪಡೆಯುತ್ತಿಲ್ಲ. ಕೆಲವರು ಕರಾವಳಿ ಜಿಲ್ಲೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುವ ಬಗ್ಗೆ ಕೇಳಿ ಬರುತ್ತಿದೆ. ಹಾಗಾಗಿ ಕರಾವಳಿ ಜಿಲ್ಲೆಯ ಪಡಿತರದಲ್ಲಿ ಕೆಂಪು ಕುಚಲಕ್ಕಿ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಸಾರ್ವಜನಿಕ …

ಕರಾವಳಿಗರಿಗೆ ಪಡಿತರದಲ್ಲಿ ಇನ್ನು ಮುಂದೆ ಸಿಗಲಿದೆ ಕೆಂಪು ಕುಚಲಕ್ಕಿ Read More »

ಲಸಿಕೆ ಮನೆಗೇ ಬಂದು ನೀಡುವ ಭರವಸೆ | ಆಧಾರ್ ನಂಬರ್, ಮೊಬೈಲ್ ಗೆ ಬಂದ ‘ ಪಿನ್ ‘ ಕೇಳಿ ಹಣ ಬಾಚುವ ಆನ್ ಲೈನ್ ವಂಚನೆ ಶುರು !

ಸಮಾಜದ ಮತ್ತು ವ್ಯಕ್ತಿಗಳ ಪ್ರತಿಯೊಂದು ಕಷ್ಟವು ಕೂಡ ವಂಚಕರಿಗೆ ಒಂದು ಹೊಚ್ಚ ಹೊಸ ಬಂಡವಾಳ ಮತ್ತು ವ್ಯಾಪಕವಾದ ಅವಕಾಶ !!ಹೌದು, ಕೋವಿಡ್ ಸಂಕಷ್ಟದ ಸರ್ವ ಲಾಭವನ್ನು ವಂಚಕ ಜಗತ್ತು ಈಗಾಗಲೇ ತಿಂದು ತೇಗಿದೆ. ಈಗ   ವಾಕ್ಸಿನ್ ಲಭ್ಯತೆ ಕುರಿತು ಅನೇಕರಲ್ಲಿ ಮಾಹಿತಿ ಕೊರತೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಗುಂಪೊಂದು ಹೊಸ ರೀತಿಯ ಸೈಬರ್ ದರೋಡೆಗೆ ಸಂಚು ರೂಪಿಸುತ್ತಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೀವು ನಿಮ್ಮ ಪಾಡಿಗೆ ಯಾವುದೋ ಕೆಲಸದಲ್ಲಿ ಬಿಜಿ ಆಗಿರುತ್ತೀರಿ. ಆಗ ಯಾರೋ …

ಲಸಿಕೆ ಮನೆಗೇ ಬಂದು ನೀಡುವ ಭರವಸೆ | ಆಧಾರ್ ನಂಬರ್, ಮೊಬೈಲ್ ಗೆ ಬಂದ ‘ ಪಿನ್ ‘ ಕೇಳಿ ಹಣ ಬಾಚುವ ಆನ್ ಲೈನ್ ವಂಚನೆ ಶುರು ! Read More »

ವೇಣೂರು : ಬೈಕ್ ಸ್ಕಿಡ್ ಸವಾರ ಗಂಭೀರ

ಬೆಳ್ತಂಗಡಿ : ವೇಣೂರಿನ ಬಾಡೂರು ರಸ್ತೆ ಯಲ್ಲಿ ಬೈಕ್ ಅಪಘಾತವಾಗಿ ಸವಾರ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ. ಗಾಯಾಳುವನ್ನು ಛಾಯಚಿತ್ರ ಗ್ರಾಹಕ ಸುದೀಶ್ ಹೆಗ್ಡೆ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೋನಾ ರೋಗದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ 10 ಲಕ್ಷ ಫಿಕ್ಸೆಡ್ ಡಿಪಾಸಿಟ್ ಇಡಲು ಆಂಧ್ರ ಸರ್ಕಾರದ ನಿರ್ಧಾರ

ಮಹಾಮಾರಿ ಕೊರೋನಾಎಲ್ಲೆಡೆ ಮರಣಮೃದಂಗ ಬಾರಿಸುತ್ತಿದ್ದು, ಸೋಂಕಿಗೆ ಇಡೀ ಕುಟುಂಬ ಬಲಿಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.ಕುಟುಂಬದ ದುಡಿಯುವ ಆಸರೆಯಾಗಿರುವ ಅಪ್ಪ-ಅಮ್ಮ ಕಳೆದುಕೊಂಡು ಪುಟ್ಟ ಮಕ್ಕಳು ತಬ್ಬಲಿಗಳ ಆಗುತ್ತಿರುವ ಸುದ್ದಿಯನ್ನು ನಾವು ದಿನನಿತ್ಯ ಓದುತ್ತಿದ್ದೇವೆ.ಇಂತಹ ಕುಟುಂಬದ ಎಲ್ಲರನ್ನೂ ಕಳೆದುಕೊಂಡು ಕಂಗಾಲಾಗಿರುವ ಮಕ್ಕಳ ಹೆಸರಲ್ಲಿ 10 ಲಕ್ಷ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಡುವ ಮಹತ್ವದ ನಿರ್ಧಾರವನ್ನು ಆಂಧ್ರ ಸರ್ಕಾರ ಕೈಗೊಂಡಿದೆ ! ಇನ್ನು ಮುಂದೆ ಕೋರೋನಾ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಪ್ರತಿ ಮಗುವಿನ ಹೆಸರಿನಲ್ಲಿ 10 ಲಕ್ಷ ರೂ. …

ಕೊರೋನಾ ರೋಗದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ 10 ಲಕ್ಷ ಫಿಕ್ಸೆಡ್ ಡಿಪಾಸಿಟ್ ಇಡಲು ಆಂಧ್ರ ಸರ್ಕಾರದ ನಿರ್ಧಾರ Read More »

ಕೊರೋನಾ ಲಸಿಕೆ ಅಭಾವದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ | ಹೆಚ್ ಡಿ ಕುಮಾರಸ್ವಾಮಿ

ದೇಶದಲ್ಲಿ ಲಸಿಕೆ ಅಭಾವದ ಹಿಂದೆ ಕಾಂಗ್ರೆಸ್ ನಾಯಕರ ಸಣ್ಣತನದ ರಾಜಕಾರಣವೂ ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘100 ಕೋಟಿ ಲಸಿಕೆಗಾಗಿ ದುಡ್ಡು ಕೊಡುತ್ತೇನೆ ಎಂದು ಹೇಳುವ ಕಾಂಗ್ರೆಸ್ ನಾಯಕರು, ಮನೆಯಿಂದ ದುಡ್ಡು ತಂದು ಕೊಡುವುದಿಲ್ಲ. ಈಗ ಸರಕಾರದಿಂದ ಸಿಗುತ್ತಿರುವ ಫಂಡ್ ನಿಂದ ಕೊಡಲು ಹೊರಟಿದ್ದಾರೆ ‘ ಎಂದು ಲೇವಡಿ ಮಾಡಿದರು. ಹಿಂದೆ ಇದೇ ಕಾಂಗ್ರೆಸ್ಸಿನ ನಾಯಕರು, ಭಾರತದಲ್ಲಿ ಲಸಿಕೆ ಕಂಡು ಹಿಡಿದಂತಹ ಸಂದರ್ಭದಲ್ಲಿ ಮತ್ತು ಕೇಂದ್ರ ಸರಕಾರ ಅಂತಿಮ …

ಕೊರೋನಾ ಲಸಿಕೆ ಅಭಾವದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ | ಹೆಚ್ ಡಿ ಕುಮಾರಸ್ವಾಮಿ Read More »

ಕೊರೊನಾ ಮುಕ್ತ ಗ್ರಾಮಕ್ಕೆ ಅಭಿನಂದನಾ ಪತ್ರ, ನಗದು ಬಹುಮಾನ

ಕೊರೊನಾ ಸೋಂಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಡಳಿತ ವಿನೂತನ ಯೋಜನೆಯೊಂದನ್ನು ಮಾಡಿದೆ. ಕೊರೊನಾ ಮುಕ್ತ ಗ್ರಾಮಗಳಿಗೆ ಅಭಿನಂದನಾ ಪತ್ರದ ಜತೆಗೆ ನಗದು ಬಹುಮಾನ ಕೊಟ್ಟು ಅಭಿನಂದಿಸುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಘೋಷಿಸಿದ್ದಾರೆ. ಆ ಮೂಲಕ ಗ್ರಾಮ ಪಂಚಾಯತ್‌ಗಳ ನಡುವೆ ಸೋಂಕು ನಿಯಂತ್ರಣಾ ಸ್ಪರ್ಧೆಯನ್ನ ಪರೋಕ್ಷವಾಗಿ ಹುಟ್ಟು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್​ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಮುಕ್ತ ಮಾಡಿದರೆ ಅವರಿಗೆ ಪ್ರಶಸ್ತಿ ಕೊಡಲಾಗುವುದು. ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ …

ಕೊರೊನಾ ಮುಕ್ತ ಗ್ರಾಮಕ್ಕೆ ಅಭಿನಂದನಾ ಪತ್ರ, ನಗದು ಬಹುಮಾನ Read More »

ಉಪ್ಪಿನಂಗಡಿ ವಿ.ಹಿಂ.ಪ. ಬಜರಂಗದಳ ಕಾರ್ಯಕರ್ತರಿಂದ ರಕ್ತದಾನ

ತುರ್ತು ಸಂಧರ್ಭದಲ್ಲಿ ತೀರಾ ಅಗತ್ಯವಾಗಿ ರಕ್ತ ಬೇಕಾಗುವುದರಿಂದ ಉಪ್ಪಿನಂಗಡಿಯ ವಿಶ್ವಹಿಂದೂ ಪರಿಷತ್ ,ಬಜರಂಗದಳದ ಘಟಕದ ಸದಸ್ಯರು ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದಾನ ಮಾಡಿದ್ದಾರೆ. ಘಟಕದ ಸಂಚಾಲಕ ಚಿದಾನಂದ ಪಂಚೇರು ಅವರ ನೇತೃತ್ವದಲ್ಲಿ ಸದಸ್ಯರಾದ ಸುಜೀತ್ ಬೊಳ್ಳಾವು, ಮೂಲಚಂದ್ರ ಕಾಂಚನ, ಕರುಣಾಕರ ಉಪ್ಪಿನಂಗಡಿ, ಸಚಿನ್ ಬೊಳ್ಳಾವು, ರಕ್ಷಿತ್ ಪೆರಿಯಡ್ಕ, ದುರ್ಗಾಪ್ರಸಾದ್ ಪೆರಿಯಡ್ಕ, ಜಯರಾಮ ಅಂಡೆತ್ತಡ್ಕ, ರಾಜೇಶ್ ಕೊಡಂಗೆ, ನವೀನ್ ಹಿರೇಬಂಡಾಡಿ, ರೋಹಿತ್ ಪೆರಿಯಡ್ಕ, ರಾಜೇಶ್ ಪಾಡೆಂಕಿ, ಸಂದೀಪ್ ಕುಪ್ಪೆಟ್ಟಿ, ರವೀಂದ್ರ ಪಿಲಿಬೈಲ್, ನವೀನ್ ಪೆರಿಯಡ್ಕ, ನಿತಿನ್ …

ಉಪ್ಪಿನಂಗಡಿ ವಿ.ಹಿಂ.ಪ. ಬಜರಂಗದಳ ಕಾರ್ಯಕರ್ತರಿಂದ ರಕ್ತದಾನ Read More »

ಲಾಕ್ ಡೌನ್ ವಿಸ್ತರಣೆ ಮತ್ತು ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ | ಮುಖ್ಯಮಂತ್ರಿಯ ಪತ್ರಿಕಾಗೋಷ್ಠಿಯ ನಂತರ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್  ಅನ್ನು ವಿಸ್ತರಣೆ ಮಾಡಬೇಕಾ ಬೇಡವಾ ಎಂಬ ಸಂಬಂಧ ನಾಳೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಯಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಬೆಳಗ್ಗೆ 11.50ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದು, ಅದಕ್ಕೂ ಮೊದಲು ಅವರು ಕೊರೋನಾ ನಿಯಂತ್ರಣ ಜವಾಬ್ದಾರಿ ಹೊತ್ತಿರುವ ಸಚಿವರ ಜತೆ ಸಮಾಲೋಚನೆ ನಡೆಸಲಿದ್ದಾರೆ. ನಾಳೆ ಒಂದೋ ಲಾಕ್ ಡೌನ್ ವಿಸ್ತರಣೆ ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಎರಡರಲ್ಲಿ ಒಂದು ಆಗುವುದು ಶತಸಿದ್ಧ. ಲಾಕ್ ಡೌನ್ ವಿಸ್ತರಣೆ, ಅಥವಾ ನಿಯಮಗಳಲ್ಲಿ ಬದಲಾವಣೆ …

ಲಾಕ್ ಡೌನ್ ವಿಸ್ತರಣೆ ಮತ್ತು ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ | ಮುಖ್ಯಮಂತ್ರಿಯ ಪತ್ರಿಕಾಗೋಷ್ಠಿಯ ನಂತರ ನಿರ್ಧಾರ Read More »

error: Content is protected !!
Scroll to Top