ದ.ಕ.ಲಾಕ್ ಡೌನ್ ನಿಯಮಾವಳಿಯಲ್ಲಿ ಮತ್ತೆ ಬದಲಾವಣೆ ತಂದ ಜಿಲ್ಲಾಡಳಿತ
ದ.ಕ.ಜಿಲ್ಲಾಡಳಿತವು ಲಾಕ್‌ಡೌನ್ ನಿಯಾಮವಳಿಯಲ್ಲಿ ಮತ್ತೆ ಬದಲಾವಣೆ ಮಾಡಿದ್ದು, ಕಳೆದ ವಾರ ಇದ್ದ ನಿಯಮಗಳು ಈ ವಾರಾಂತ್ಯ ಇರುವುದಿಲ್ಲ.
ಕಳೆದ ಶನಿವಾರ ಮತ್ತು ಆದಿತ್ಯವಾರ ವೀಕೆಂಡ್ ಕರ್ಫ್ಯೂ ನಲ್ಲಿ ಎಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ದ.ಕ. ಜಿಲ್ಲೆಯಲ್ಲಿಿ ಈ ವಾರ ಪ್ರತ್ಯೇಕವಾದ ಯಾವುದೇ ವಾರಾಂತ್ಯ ಕರ್ಫ್ಯೂ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ತಡೆಗಟ್ಟಲು ಈಗಾಗಲೇ ಘೋಷಿಸಿರುವಂತೆ ಮೇ 10 ರಿಂದ ಮೇ 24ರ ವರೆಗಿನ ಕರ್ಫ್ಯೂ ಜಾರಿಯಲ್ಲಿರಲಿದ್ದು, ಜಿಲ್ಲೆಯಲ್ಲಿ ಪ್ರತ್ಯೇಕವಾದ ಯಾವುದೇ ವಾರಾಂತ್ಯ ಕರ್ಫ್ಯೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕಾರ ಅಗತ್ಯ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ವಾರಾಂತ್ಯದಲ್ಲೂ ಅನುಮತಿಸಲಾಗಿದೆ. ಅಂದರೆ, ಒಟ್ಟಾರೆಯಾಗಿ ಹೇಳಬೇಕಾದರೆ ನಿನ್ನೆ ಮೊನ್ನೆಯಿಂದ ಏನೆಲ್ಲಾ ಲಭ್ಯ ಇತ್ತೋ ಅದೆಲ್ಲವೂ ಶನಿವಾರ ಮತ್ತು ಭಾನುವಾರಗಳಂದು ಕೂಡ ದೊರೆಯಲಿವೆ. ದಿನಸಿ ಸಾಮಾನುಗಳು ಹಾಲು ಹಣ್ಣು ತರಕಾರಿ ಮೀನು ಮಾಂಸ ಮತ್ತು ಮದ್ಯ ಲಭ್ಯ.
ಈ ಮೂಲಕ ಲಾಕ್‌ಡೌನ್ ನಿಯಮಾವಳಿಯಲ್ಲಿ ವಿನಾಯಿತಿ ನೀಡಲಾಗಿದೆ ಹೊರತು ಕೊರೊನಾ ಪ್ರಸರಣದಿಂದಲ್ಲ. ಈ ಎಚ್ಚರ ಜನಸಾಮಾನ್ಯರಲ್ಲಿ ಅತ್ಯಗತ್ಯವಾಗಿ ಇರಬೇಕಿದೆ. ಮತ್ತಷ್ಟು ವಿವರಗಳಿಗೆ ಈ ಕೆಳಗಿನ ನೋಟಿಫಿಕೇಶನ್ ಅನ್ನು ಓದಬಹುದು.