Ad Widget

ಕರಾವಳಿಯ ಹುಡುಗರ ಸ್ಟೇಟಸ್ ನಲ್ಲಿ ಕಡುಕಾಮ ಕಾಮಿನಿ ಸನ್ನಿ ಲಿಯೋನ್ !

ಇವತ್ತು ಸನ್ನಿ ಲಿಯೋನ್ ಬರ್ತಡೇ. ಆಕೆ ತನ್ನ 40 ನೇ ವಸಂತಕ್ಕೆ ಇಂದು ಕಾಲಿಡುತ್ತಿದ್ದಾಳೆ.

ಜಗತ್ತಿನ ನೀಲಿ ಲೋಕದ ತಿಳಿ ತಿಳಿ ನೀಲಿ ಕಣ್ಣುಗಳ ಸುಂದರಿ, ಪಡ್ಡೆಹುಡುಗರ ಪದ್ಮಿನಿ, ಸೆಕ್ಸ್ ಲೋಕದ ಮೋಹಿನಿ, ಅತೃಪ್ತ ಕಾಮುಕರ ಮನದರಸಿ,
ಬಾಲಿವುಡ್ ನಟಿ ಮತ್ತು ಕನ್ನಡದ ನಟಿ ಕೂಡಾ ಆಗಿರುವ ಸನ್ನಿ ಲಿಯೋನ್ ಇಂದು 40 ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ.
ಒಂದು ಕೆಟ್ಟ ಉದಾಹರಣೆಯಾಗಿ ಬದುಕಬೇಕಾಗಿದ್ದ ಈ ಹುಡುಗಿಯ ಹುಟ್ಟುಹಬ್ಬವನ್ನು ಇಡೀ ವಿಶ್ವ ಇಂದು ದೊಡ್ಡದಾಗಿ ಆಚರಿಸಿಕೊಳ್ಳುತ್ತಿದೆ ಎನ್ನುವುದು ಒಂದು ದೊಡ್ಡ ದುರಂತ ಅಲ್ಲದೆ ಮತ್ತೇನೂ ಅಲ್ಲ.

ಒಂದು ಕಾಲದಲ್ಲಿ ದುಡ್ಡಿಗಾಗಿ ಪಟ್ಟು ಒನ್ ನೈಟ್ ಸ್ಟ್ಯಾಂಡ್ ಮಾಡಿದವಳು ಸನ್ನಿ ಲಿಯೋನ್. ಮುಂದಕ್ಕೆ ಆಕೆ ಪ್ರಪಂಚದ ಹಲವಾರು ಪೋರ್ನ್ ಸ್ಟಾರ್ ಗಳೊಂದಿಗೆ ನಟಿಸಿದಳು. ಪೋರ್ನ್ ಪ್ರಪಂಚದಲ್ಲಿ ನಟನೆ ಅನ್ನೋದಕ್ಕೆ ಅರ್ಥವಿಲ್ಲ. ಅಲ್ಲಿ ನಟಿಸುವುದು ಅಂದರೆ ಮತ್ತಷ್ಟು ಹೆಚ್ಚು ಇನ್ನಷ್ಟು ಪ್ರಬಲವಾಗಿ ಸೆಕ್ಸ್ ಮಾಡೋದು. ಇಂತಹ ಸೆಕ್ಸ್ ಮಾಡುವುದರಲ್ಲಿ ಸನ್ನಿ ಲಿಯೋನ್ ಸದಾ ಮುಂದೆ. ದೇಹದಲ್ಲಿ ಆರೋಗ್ಯ ಇಂಡೋ-ಅಮೆರಿಕನ್ ಬ್ಲೆಂಡೆಡ್ ಬಣ್ಣ, ಭಾರತೀಯ ಸ್ತ್ರೀಯ ಸೌಂದರ್ಯ ಮತ್ತು ಭರಪೂರ ಸೆಕ್ಸ್ ಮಾಡುವ ಉನ್ಮಾದ ಇದ್ದ ಈಕೆ ಬಹುಬೇಗನೆ ಪೋರ್ನ್ ಪ್ರಪಂಚದಲ್ಲಿ ಉಚ್ಛ್ರಾಯ ಸ್ಥಿತಿಗೆ ಬಂದಳು.

ಎಲ್ಲಾ ಪೋರ್ನ್ ಪ್ರಪಂಚದಲ್ಲಿ ಹುಡುಗಿಯ ಆಯಸ್ಸು ನಟಿಯಾಗಿ ತುಂಬಾ ಕಮ್ಮಿ. ಒಬ್ಬಳು ಬಂದು ನಾಲ್ಕೈದು ನಟರೊಂದಿಗೆ ನಟಿಸಿ ಕೂಡಲೇ ಆಕೆಯನ್ನು ಈ ಪ್ರಪಂಚ ಅಂದರೆ ಪ್ರೊಡ್ಯೂಸರ್ ಮತ್ತು ನಟರು ಸೇರಿಕೊಂಡು ಕಸದಂತೆ ಹೊರಕ್ಕೆ ಎಸೆದುಬಿಡುತ್ತಾರೆ. ಅಷ್ಟರಲ್ಲಿ ದುಡ್ಡಿಗಾಗಿ ಬೇರೆ ಹುಡುಗಿಯರು ಸಾಲುಗಟ್ಟಿ  ನಿಂತಿರುತ್ತಾರೆ. ಇದೆಲ್ಲಾ ಕೇವಲ ದುಡ್ಡಿಗಾಗಿ ಮಾಡುವ ಆಕ್ಟ್. ಹೀಗೆ ತಾನು ನಟಿಯಾಗಿ ಅಲ್ಲಿ ಔಟ್ ಡೇಟೆಡ್ ಆಗುತ್ತೇನೆ ಎಂದೆನಿಸುವಾಗ ಆಕೆಯ ಕಣ್ಣು ಬಿದ್ದದ್ದು ಬಾಲಿವುಡ್ ಕಡೆಗೆ. ಈ ಪ್ರಪಂಚಕ್ಕೆ ಏನಾದರೂ ಕೆಟ್ಟದ್ದನ್ನು ಕೊಡುವುದರಲ್ಲಿ ಬಾಲಿವುಡ್ ಎತ್ತಿದ ಕೈ.
ಬಾಲಿವುಡ್ ನ ಬೀಸ್ಟ್ಸ್ ( ಹಿಂದಿ ಚಿತ್ರರಂಗದ ರಕ್ಕಸರು) ಮೊದಲಿಗೆ ಈಕೆಯ ಜನಪ್ರಿಯತೆಯನ್ನು ಎಂಕ್ಯಾಶ್ ಮಾಡಲು ಹಿಂದಿ ಚಿತ್ರರಂಗಕ್ಕೆ ಕರೆತಂದರು. ಆನಂತರ ಹಲವು ಭಾಷೆಗಳ, ಕನ್ನಡವು ಸೇರಿ ಚಿತ್ರಗಳಲ್ಲಿ ಈಕೆ ಅಭಿನಯಿಸಿದಳು. ಅಲ್ಲಿ ಪೋರ್ನ್ ಸ್ಟಾರ್ ಆಗಿ ಈಕೆಯ ಆಯುಸ್ಸು ಮುಗಿಯುತ್ತಾ ಬಂದಿತ್ತು. ಅದಕ್ಕಾಗಿ ಆಕೆ ತನ್ನದೇ ಹೋಂ ಪ್ರೊಡಕ್ಷನ್ ಮಾಡಿದ್ದಳು. ಇವತ್ತಿಗೂ ಆಕೆಯ ಹೋಂ ಪ್ರೊಡಕ್ಷನ್ ನಲ್ಲಿ ಪೋರ್ನ್ ಚಿತ್ರಗಳು ತಯಾರಾಗುತ್ತಿವೆ.

ಇವತ್ತು ತಾನು ದುಡಿದ ಕೋಟ್ಯಂತರ ದುಡ್ಡಿನಲ್ಲಿ ಒಂದು ಕಡಲೇಬೀಜದಷ್ಟು ದುಡ್ಡನ್ನು ಬಡವರಿಗೆ, ಅನಾಥರಿಗೆ ಹೀಗೆ ಎಂಜಲು ಕಾಸು ಹಾಕಿದಂತೆ ಎಸೆದು ಮತ್ತೆ ಹೆಸರು ಮಾಡುತ್ತಿದ್ದಾಳೆ.
ಕೋವಿಡ್ ಸಂಕಷ್ಟ ದೇಶವನ್ನೇ ನಲುಗಿಸುತ್ತಿರುವಾಗ ನಟಿ ಸನ್ನಿ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾಳೆ,
‘ಪೀಪಲ್ ಪಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ ಸಂಸ್ಥೆಯ ಜೊತೆಗೂಡಿ ಸನ್ನಿಲಿಯೋನ್ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾಳೆ. ಈ ಮೂಲಕ ತಮ್ಮ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗೆ ಮುಂದಾಗಿದ್ದಾಳೆ. ಹೀಗೆ ಮೈ ಮರೆತು ಆಕೆಯನ್ನು ಹೊಗಳಿ ಬರೆಯುತ್ತಿದೆ ಮಾಧ್ಯಮ.

“ಸದ್ಯ ನಾವು ಕೋವಿಡ್ ಕಾಲದಲ್ಲಿದ್ದೇವೆ. ಈ ಸಂಕಷ್ಟವನ್ನು ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ದೂರ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾನು ಪೆಟಾ ಜೊತೆ ಕೈ ಜೋಡಿಸುತ್ತಿದ್ದೇನೆ. ಈ ಸಂಸ್ಥೆಯ ಮೂಲಕ ವಲಸೆ ಕಾರ್ಮಿಕರಿಗೆ ಕಿಚಡಿ ಮತ್ತು ಹಣ್ಣುಗಳನ್ನು ನೀಡಲಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕೆ ಬರೆದುಕೊಂಡಿದ್ದಾಳೆ.
ನಮ್ಮ ಈ ದೇಶದಲ್ಲಿ ಅದೆಷ್ಟು ಜನರು ಯಾರಿಗೂ ತಿಳಿಯದಂತೆ ಲಕ್ಷಾಂತರ ರೂಪಾಯಿಗಳ ಸಹಾಯವನ್ನು ಮಾಡುತ್ತಿಲ್ಲವೇ…?! ಸನ್ನಿ ಲಿಯೋನ್ ಖಿಚಿಡಿಗಾಗಿ ಈ ದೇಶ ಕಾಯುತ್ತಿದೆಯಾ…?! ಹಣ್ಣು ಮತ್ತು ಈಕೆ ಕೊಡುವ ಆಹಾರಕ್ಕಾಗಿ ಭಾರತೀಯರು ಭಿಕ್ಷೆ ಬೇಡಬೇಕಾದ ಅವಶ್ಯಕತೆ ಇಲ್ಲ.

ಇವತ್ತು ಸಮಾಜದ ಮಡಿವಂತ ಜನರ ಹಲವು ಸ್ಟೇಟಸ್ ಗಳಲ್ಲಿ ಸನ್ನಿ ಲಿಯೋನ್ ಪ್ರತ್ಯಕ್ಷವಾಗಿದ್ದಾಳೆ. ಇದು ನಿಜಕ್ಕೂ ಜನರ ಒಳ್ಳೆಯ ಮನಸ್ಸೋ ಅಥವಾ ಮೈಮರೆವೋ ಅರ್ಥ ಆಗುತ್ತಿಲ್ಲ. ಸೆಕ್ಸ್ ಬಿಟ್ಟು ಯಾವುದೇ ರೀತಿಯಲ್ಲೂ ಜನರನ್ನು ಪ್ರಭಾವಿಸಲಾರದ ಈಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಒಂದು ಬೇರೆ ಕೇಡು….!

ಕೆಲವು ಸ್ಯಾಂಪಲ್ ಸ್ಟೇಟಸ್

Ad Widget Ad Widget Ad Widget
Ad Widget Ad Widget Ad Widget

1 thought on “ಕರಾವಳಿಯ ಹುಡುಗರ ಸ್ಟೇಟಸ್ ನಲ್ಲಿ ಕಡುಕಾಮ ಕಾಮಿನಿ ಸನ್ನಿ ಲಿಯೋನ್ !”

Leave a Reply

error: Content is protected !!
Scroll to Top
%d bloggers like this: