Day: May 3, 2021

ವೆನ್ಲಾಕ್ ಆಸ್ಪತ್ರೆಯ 2ನೇ ಮಹಡಿಯಿಂದ ಜಿಗಿದ ಕೋವಿಡ್ ಸೋಂಕಿತ

ಮಂಗಳೂರು: ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯ 2ನೇ ಮಹಡಿಯಿಂದ ಕೊರೊನಾ ಸೋಂಕಿತನೋರ್ವ ಹಾರಿದ ಘಟನೆ ಇಂದು ನಡೆದಿದ್ದು, ಆತ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಮಂಗಳೂರಿನ ಕಲ್ಲಮುಂಡ್ಕೂರಿನ ಬನಂಗಡಿ ನಿವಾಸಿ ಹರೀಶ್(30) 2ನೇ ಮಹಡಿಯಿಂದ ಹಾರಿದಾತ. ಹರೀಶ್‌ಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ‌ ಇವರು ಇಂದು ಕೋವಿಡ್ ಆಸ್ಪತ್ರೆಯ 2ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಪರಿಣಾಮ ತಲೆಗೆ ಹಾಗೂ …

ವೆನ್ಲಾಕ್ ಆಸ್ಪತ್ರೆಯ 2ನೇ ಮಹಡಿಯಿಂದ ಜಿಗಿದ ಕೋವಿಡ್ ಸೋಂಕಿತ Read More »

ಕೊಡಗು ಜಿಲ್ಲೆಯಲ್ಲಿ 5 ದಿನ ಟೋಟಲ್ ಲಾಕ್ ಡೌನ್ | ಸೋಮವಾರ ಮತ್ತು ಶುಕ್ರವಾರ ಅಗತ್ಯ ವಸ್ತು ಕೊಳ್ಳಲು ಅವಕಾಶ

ದಕ್ಷಿಣ ಕಾಶ್ಮೀರ ಎಂದೆ ಕರೆಸಿಕೊಳ್ಳುವ ಮಂಜಿನ ನಗರಿಯಲ್ಲಿ ಕೊರೋನಾ ಸವಾರಿ ಹೆಚ್ಚಾಗಿ ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಳವಾದ ಹಿನ್ನೆಲೆಯಲ್ಲಿ ವಾರದಲ್ಲಿ 5 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಹೆಮ್ಮಾರಿಯನ್ನು ಕಟ್ಟಿ ಹಾಕಲು ರಾಜ್ಯ ಸರಕಾರ ಕಳೆದ ವಾರವಷ್ಟೆ ಲಾಕ್ ಡೌನ್ ಅಸ್ತ್ರ ಪ್ರಯೋಗಿಸಿಸೇ ವಾರದಲ್ಲಿ 5 ದಿನ ಬೆಳೆಗ್ಗೆ 6 ರಿಂದ ಬೆಳೆಗ್ಗೆ 10 ಗಂಟೆ ತನಕ ಅಗತ್ಯ ವಸ್ತುಗಳಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಿತ್ತು. ಇದೀಗ ಕೊಡಗು …

ಕೊಡಗು ಜಿಲ್ಲೆಯಲ್ಲಿ 5 ದಿನ ಟೋಟಲ್ ಲಾಕ್ ಡೌನ್ | ಸೋಮವಾರ ಮತ್ತು ಶುಕ್ರವಾರ ಅಗತ್ಯ ವಸ್ತು ಕೊಳ್ಳಲು ಅವಕಾಶ Read More »

ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೋದರ ಕೊರೋನಾಗೆ ಬಲಿ

ಬೆಂಗಳೂರು : ಕೊರೊನಾ ವೈರಸ್ ಸೋಂಕಿಗೆಇದೀಗ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಮೃತಪಟ್ಟಿದ್ದಾರೆ. 49 ವರ್ಷ ಪ್ರಾಯದ ಕಿರಣ್ ಅವರಿಗೆ ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಆತನಿಗೆ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಅರ್ಜುನ್ ಜನ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರಂರಸ್ತೆ ಅಪಘಾತ | ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಡೋಳಿಯ ಬಳಿ ಜೋಗಿಬೆಟ್ಟು ಎಂಬಲ್ಲಿ ಈ ದುರ್ಘಟನೆ ನಡೆದಿದ್ದು ಬುಡೋಳಿ ನಿವಾಸಿ ಮಹಮ್ಮದ್ ಶರೀಫ್ (35) ಮೃತಪಟ್ಟವರು ಮೃತರು ಬುಡೋಳಿಯಿಂದ ಗಡಿಯಾರ ಕಡೆಗೆ ತನ್ನ ಡಿಯೋ ವಾಹನದಲ್ಲಿ ತೆರಳುತ್ತಿದ್ದರು. ಆಗ ಸಿಮೆಂಟ್ ತುಂಬಿಕೊಂಡು ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಈ ಘಟನೆಗೆ ದ್ವಿಚಕ್ರ ಸವಾರರ …

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರಂರಸ್ತೆ ಅಪಘಾತ | ಸವಾರ ಸ್ಥಳದಲ್ಲೇ ಸಾವು Read More »

ನೀಟ್ ಪರೀಕ್ಷೆ ಮತ್ತೆ ನಾಲ್ಕು ತಿಂಗಳು ಮುಂದೂಡಿದ ಕೇಂದ್ರ ಸರ್ಕಾರ

ದೇಶದಲ್ಲಿ ಕೊರೋನ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯುವ ಈ ಬಾರಿಯ ರಾಷ್ಟ್ರೀಯ ಪ್ರವೇಶ ಪರೀಕ್ಷೆಯನ್ನು 4 ತಿಂಗಳು ಮುಂದೂಡಿಕೆ ಮಾಡಿದೆ. ಈ ಕುರಿತು ಹೇಳಿಕೆ ನೀಡಿದ ಕೇಂದ್ರ ಸರ್ಕಾರ, ಕೋವಿಡ್-19 ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ, ನೀಟ್ ಪಿಜಿ ಪರೀಕ್ಷೆಯನ್ನು ಕನಿಷ್ಠ 4 ತಿಂಗಳವರೆಗೆ ಮುಂದೂಡಲಾಗುವುದು ಎಂದು ಮಾಹಿತಿ ನೀಡಿದೆ. ಅಲ್ಲದೆ …

ನೀಟ್ ಪರೀಕ್ಷೆ ಮತ್ತೆ ನಾಲ್ಕು ತಿಂಗಳು ಮುಂದೂಡಿದ ಕೇಂದ್ರ ಸರ್ಕಾರ Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಆಕ್ಸಿಜನ್ ಸಮಸ್ಯೆ | ಇನ್ನು 24 ಗಂಟೆ ಕಳೆದರೆ ಜೀವ ವಾಯು ಖಾಲಿ

ದಕ್ಷಿಣ ಕನ್ನಡದಲ್ಲಿ ಆಕ್ಸಿಜನ್ ಸಮಸ್ಯೆ. ಚಾಮರಾಜನಗರ ದುರಂತ ನಡೆದ ಬೆನ್ನಲ್ಲೇ ಎಲ್ಲಾ ಜಿಲ್ಲೆಗಳು ಈಗ ಎಚ್ಚರಗೊಳ್ಳುತ್ತಿವೆ. ಇದೀಗ ದಕ್ಷಿಣ ಕನ್ನಡದಲ್ಲಿ ಆಮ್ಲಜನಕ ಕೊರತೆ ಉಂಟಾಗಿದೆ. ಈಗ ದಕ್ಷಿಣ ಕನ್ನಡದಲ್ಲಿರುವ ಆಮ್ಲಜನಕವು ಇನ್ನು ಕೇವಲ 24 ಗಂಟೆಗಳವರೆಗೆ ಮಾತ್ರ ಸಾಕಾಗುತ್ತದೆ. ಆನಂತರ ಕೂಡ ಆಕ್ಸಿಜನ್ ಬಾರದೆ ಹೋದರೆ ಹರೋ ಹರ. ಹೊರಗಿನಿಂದ ಬರುವ ಆಕ್ಸಿಜನ್ ಸಪ್ಲೈ ಮಾಡುವ ಸಪ್ಲೈ ಚೈನ್ ನಲ್ಲಿ ಯಾವುದೇ ಅಡಚಣೆ ಉಂಟಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.

ವೈದ್ಯಕೀಯ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಕೋವಿಡ್ 19 ನಿಯಂತ್ರಣ ಸಂಬಂಧ ವೈದ್ಯಕೀಯ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇವತ್ತಿನ ರಾಜ್ಯ ಸರ್ಕಾರದ ಆದೇಶದನ್ವಯ “ಎಲ್ಲಾ ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಮ್ಲಜನಕ ರೀಫಿಲ್ಲಿಂಗ್ ಏಜೆನ್ಸಿಗಳು ಈ ಕೆಳಗಿನ ವಿವರಗಳನ್ನು ಪ್ರತಿದಿನ ಒದಗಿಸಬೇಕು. ತಮ್ಮಲ್ಲಿರುವ ಒಟ್ಟು ಆಮ್ಲಜನಕದ ರಶೀದಿ, ತಾವು ಮಾಡಿದ ಸರಬರಾಜು, ಪಡೆದುಕೊಂಡ ಆಮ್ಲಜನಕದ ವಿವ  ಮತ್ತು ದಿನದ ಕೊನೆಗೆ ಉಳಿದ ( ಕ್ಲೋಸಿಂಗ್ ಬ್ಯಾಲೆನ್ಸ್) ಆಮ್ಲಜನಕದ ವಿವರವನ್ನು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿಗೆ ಪ್ರತಿದಿನ ಒದಗಿಸಬೇಕು.” …

ವೈದ್ಯಕೀಯ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ Read More »

ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಸಿಇಒ ಬ್ಯಾಂಕ್ ಹಾಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ

ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಮೇ.3) ನಡೆದಿದೆ. ಇವರು ಇಂದು ಬೆಳಿಗ್ಗೆ 7.30 ರ ವೇಳೆ ಕಛೇರಿಗೆ ಬಂದವರು ತಮ್ಮ ಹಾಜರಿಯನ್ನು ನಮೂದಿಸಿದ್ದರು. ಇಂದು ಮದ್ಯಾಹ್ನ ಬ್ಯಾಂಕಿನ ಸಂಘದ ಸಭಾಭವನದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮಧ್ಯಾಹ್ನ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಿನ್ನೆಯಷ್ಟೇ ಧರ್ಮಸ್ಥಳದ ಅವರು ವಾಸವಿರುವ ಮನೆಯೂ ಸೇರಿದಂತೆ ಬೋಳಿಯಾರು …

ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಸಿಇಒ ಬ್ಯಾಂಕ್ ಹಾಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ Read More »

ತನ್ನ ನೆಚ್ಚಿನ ಪಕ್ಷ ಗೆದ್ದರೆ ನಾಲಗೆ ಕತ್ತರಿಸಿಕೊಳ್ಳುವೆ ಎಂಬ ಹರಕೆ ಪೂರೈಸಲು ನಾಲಿಗೆ ಕಟ್ ಮಾಡಿಕೊಂಡ ಮಹಿಳೆ

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಗೆದ್ದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಹರಕೆ ತೀರಿಸಲೆಂದು ಆಕೆ ನಾಲಿಗೆ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾರೆ. ಸಿನಿಮಾ ವ್ಯಕ್ತಿಗಳನ್ನು, ರಾಜಕೀಯ ವ್ಯಕ್ತಿಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಅಂಧ ಶ್ರದ್ದೆಯಿಂದ ಆರಾಧಿಸುವ ಆ ಮಹಿಳೆ ಡಿಎಂಕೆ ಪಕ್ಷ ಗೆಲ್ಲಲೆಂದು ಹರಕೆ ಹೊತ್ತಿದ್ದಳು. ವಿಧಾನಸಭಾ ಚುನಾವಣೆಯಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಗೆಲುವು ಸಾಧಿಸಿದರೆ ನಾಲಿಗೆ ಕತ್ತರಿಸುವುದಾಗಿ 32 ವರ್ಷ ವಯಸ್ಸಿನ ವನಿತಾ ಎಂಬಾಕೆ ಎಂಬಾಕೆ ಹರಕೆ ಹೊತ್ತಿದ್ದರು. ನಿನ್ನೆ ನಡೆದ ಮತಎಣಿಕೆಯಲ್ಲಿ ಗೆದ್ದು ದಶಕಗಳ ನಂತರ ಹೊಸ …

ತನ್ನ ನೆಚ್ಚಿನ ಪಕ್ಷ ಗೆದ್ದರೆ ನಾಲಗೆ ಕತ್ತರಿಸಿಕೊಳ್ಳುವೆ ಎಂಬ ಹರಕೆ ಪೂರೈಸಲು ನಾಲಿಗೆ ಕಟ್ ಮಾಡಿಕೊಂಡ ಮಹಿಳೆ Read More »

ಕಡಬ ಪರಿಸರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಕಡಬದ ಮಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ.ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಡಬದ ಮಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ರವಿವಾರ ತಡರಾತ್ರಿ ವೇಳೆಗೆ ಚಿರತೆಯು ಅಡ್ಡಾಡಿದ್ದು,ಪರಿಸರದಲ್ಲಿ ಹೆಜ್ಜೆ ಗುರುತುಗಳು ಕಂಡುಬಂದಿವೆ. ಕಳೆದ ದಿನ ಪರಿಸರದ ಆಡು ಮತ್ತು ಕೋಳಿಯ ತಲೆ ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು, ಪರಿಸರದಲ್ಲಿ ಕೆಲವು ನಾಯಿಮರಿಗಳು ನಾಪತ್ತೆಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಪಂಜ ವಲಯ ಉಪ ಅರಣ್ಯಾಧಿಕಾರಿ ಅಜಿತ್, ಅರಣ್ಯ ರಕ್ಷಕರಾದ ಸುಬ್ರಹ್ಮಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಕಡಬ ತಾಲೂಕಿನ ರೆಂಜಿಲಾಡಿ ಪರಿಸರದಲ್ಲಿ …

ಕಡಬ ಪರಿಸರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ Read More »

error: Content is protected !!
Scroll to Top