ತನ್ನ ನೆಚ್ಚಿನ ಪಕ್ಷ ಗೆದ್ದರೆ ನಾಲಗೆ ಕತ್ತರಿಸಿಕೊಳ್ಳುವೆ ಎಂಬ ಹರಕೆ ಪೂರೈಸಲು ನಾಲಿಗೆ ಕಟ್ ಮಾಡಿಕೊಂಡ ಮಹಿಳೆ

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಗೆದ್ದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಹರಕೆ ತೀರಿಸಲೆಂದು ಆಕೆ ನಾಲಿಗೆ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾರೆ.

ಸಿನಿಮಾ ವ್ಯಕ್ತಿಗಳನ್ನು, ರಾಜಕೀಯ ವ್ಯಕ್ತಿಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಅಂಧ ಶ್ರದ್ದೆಯಿಂದ ಆರಾಧಿಸುವ ಆ ಮಹಿಳೆ ಡಿಎಂಕೆ ಪಕ್ಷ ಗೆಲ್ಲಲೆಂದು ಹರಕೆ ಹೊತ್ತಿದ್ದಳು. ವಿಧಾನಸಭಾ ಚುನಾವಣೆಯಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಗೆಲುವು ಸಾಧಿಸಿದರೆ ನಾಲಿಗೆ ಕತ್ತರಿಸುವುದಾಗಿ 32 ವರ್ಷ ವಯಸ್ಸಿನ ವನಿತಾ ಎಂಬಾಕೆ ಎಂಬಾಕೆ ಹರಕೆ ಹೊತ್ತಿದ್ದರು.

ನಿನ್ನೆ ನಡೆದ ಮತಎಣಿಕೆಯಲ್ಲಿ ಗೆದ್ದು ದಶಕಗಳ ನಂತರ ಹೊಸ ಆಡಳಿತ ಪಕ್ಷವಾಗಿ ಡಿಎಂಕೆ ಹೊರಹೊಮ್ಮಿದೆ. ಹೀಗಾಗಿ ಮಹಿಳೆ ಹರಕೆ ತೀರಿಸಲು ಈ ಮಹಿಳೆ ತನ್ನ ನಾಲಿಗೆ ಕತ್ತರಿಸಿಕೊಂಡಿದ್ದಾಳೆ. ನಂತರ ತಮಿಳುನಾಡಿನ ಪರಮಕುಡಿಯ ಮುತ್ತಾಲಮ್ಮನ ದೇವಾಲಯಕ್ಕೆ ಹೋಗಿ ನಾಲಿಗೆ ಅರ್ಪಿಸಲು ಹೋಗಿದ್ದಾಳೆ. ಆದರೆ ಆಗ ದೇಗುಲ ತೆರೆದಿರಲಿಲ್ಲ. ಆದರೆ ಕೊರೋನಾ ಕಾರಣದಿಂದ ದೇವಸ್ಥಾನಗಳು ಬಂದ್ ಆಗಿದ್ದು, ವನಿತಾ ಗೇಟಿನ ಬಳಿ ಬಾಯಲ್ಲಿ ರಕ್ತ ತುಂಬಿಕೊಂಡು ಕುಳಿತಿದ್ದಾಳೆ.
ಅದನ್ನು ಗಮನಿಸಿದ ಸ್ಥಳದಲ್ಲಿದ್ದವರು ಆಕೆಯನ್ನು ಬಲವಂತವಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಇದೇ ರೀತಿಯ ಘಟನೆ ಏಪ್ರಿಲ್ 4 ರಂದು ಕೂಡ ನಡೆದಿತ್ತು. 2015 ರಲ್ಲಿ ಡಿಎಂಕೆಯ ಜಯಲಲಿತಾ ರಿಗೆ ಜೈಲು ಶಿಕ್ಷೆ ಯಾವಾಗಲೂ ಕೂಡ ಹಲವರು ಇಂತಹ ಆತ್ಮಹತ್ಯೆಗೆ ಬಲಿಯಾಗಿದ್ದರು. ಆಮೇಲೆ ಜೈಲಲಿತಾ ತೀರಿಕೊಂಡಾಗ ಕೂಡ ಆತ್ಮಾಹುತಿ ನಡೆದಿದ್ದವು. ಆ ಬಲಿದಾನಗಳಿಗೆ ಎಐಡಿಎಂಕೆ ಪಕ್ಷ ಲಕ್ಷಾಂತರ ರುಪಾಯಿ ಪರಿಹಾರವಾಗಿ ಖರ್ಚು ಮಾಡಬೇಕಾಗಿ ಬಂದಿತ್ತು.

Leave A Reply

Your email address will not be published.