Daily Archives

April 22, 2021

ಮಂಗಳೂರಿಗೆ ಕಂಟಕವಾಗುತ್ತಿದೆ ಕೋವಿಡ್ | ದಿನೇ ದಿನೇ ಏರುತ್ತಿದೆ ಸೋಂಕಿತರ ಸಂಖ್ಯೆ | ಗುರುವಾರ 474 ಜನರಲ್ಲಿ ಸೋಂಕು…

ಮಂಗಳೂರು: ದ.ಕ ಜಿಲ್ಲೆಯಲ್ಲಿಂದು 474 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 39,718ಕ್ಕೆ ಏರಿಕೆಯಾಗಿದೆ.ಇಂದು 121 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಈ ಮೂಲಕ ಚೇತರಿಸಿಕೊಂಡವರ ಸಂಖ್ಯೆ 36145 ಕ್ಕೆ

ಮಂಗಳೂರಿನಲ್ಲಿ ನಡೆಯಿತು ಅಮಾನವೀಯ ವರ್ತನೆ | ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದೊಯ್ದ ದೂರ್ತರು

ಮಂಗಳೂರಿನಲ್ಲಿ ಇಡೀ ಜನತೆಯೇ ನಾಚಿಕೆ ಪಡುವಂತ ಹೇಯ ಕೃತ್ಯವೊಂದು ನಡೆದಿದೆ.ಇಬ್ಬರು ಬೈಕ್‌ನಲ್ಲಿ ನಾಯಿಯೊಂದನ್ನು ಹಗ್ಗದಲ್ಲಿ ಕಟ್ಟಿ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ ಧರ ಎಂದು ಎಳೆದುಕೊಂಡು ಹೋಗುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದು

ಬಂದ್…ಬಂದ್…ಅಗತ್ಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್ | ಸರಕಾರದಿಂದ ಪರಿಷ್ಕೃತ ಆದೇಶ

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಅಗತ್ಯ ಸೇವೆ ಹೊರತುಪಡಿಸಿ ಅಂಗಡಿ ಮುಂಗಟ್ಟುಗಳ ಬಂದ್ ಗೆ ಸೂಚಿಸಿದೆ.ಅಗತ್ಯ ಸೇವೆ ಹೊರತುಪಡಿಸಿ ಮೇ 4ರವರೆಗೆ ಎಲ್ಲಾ ಸೇವೆಗಳು ಬಂದ್ ಆಗಲಿವೆ ಎಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ

ಮೇರೆ ಮೀರಿದ ಕೊರೋನಾ ಮನೆ ಬಿಟ್ಟು ಹೊರಗೆ ಬರಬೇಡಿ: ರಾಜ್ಯದ ಜನತೆಗೆ ಮುಖ್ಯಮಂತ್ರಿ ಮನವಿ

ರಾಜ್ಯದಲ್ಲಿ ದಿನೇ ದಿನೇ ಕೊರೋನ ಸೋಂಕು ಏರುಗತಿಯಲ್ಲಿ ಪ್ರಸರಣವಾಗುತ್ತಿದ್ದು,ಒಂದು ಮನೆಯೊಂದರಲ್ಕೇ ಮೂರರಿಂದ ನಾಲ್ಕು ಜನರಲ್ಲಿ ಕೊರೋನ ಕಾಣಿಸಿಕೊಳ್ಳುತ್ತಿದ್ದು, ಪ್ರಧಾನ ಮಂತ್ರಿ ಸೂಚಿಸಿದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು, ಅಂತರ ಕಾಯ್ದುಕೊಳ್ಳುವುದು

ಲಾಕ್‌ಡೌನ್ ಆದರೆ ಬಾಜೆಲ್‌ಗೆ ಕಷ್ಟ ಆದೀತು ಎಂದು ಪೂರ್ವತಯಾರಿ | ಅಕ್ರಮ ಕಳ್ಳಬಟ್ಟಿ ತಯಾರಿ ಸ್ಥಳಕ್ಕೆ ಅಬಕಾರಿ ದಾಳಿ,…

ವಾರಾಂತ್ಯ ಲಾಕ್‌ಡೌನ್ ಈಗಾಗಲೇ ಘೋಷಣೆಯಾಗಿದೆ. ಮುಂದಕ್ಕೆ ಪೂರ್ತಿ ಲಾಕ್‌ಡೌನ್ ಘೋಷಣೆಯಾದರೆ ಬಾಜೆಲ್ ಗೆ ಏನು ಮಾಡಬಹುದೆಂದು ಹಲವರು ಲೆಕ್ಕ ಹಾಕಲು ಶುರು ಮಾಡಿದ್ದಾರೆ.ಕಳೆದ ಬಾರಿ ಲಾಕ್‌ಡೌನ್ ನಿಂದ ಹಲವೆಡೆ ಮದ್ಯಕ್ಕೆ ತಡಕಾಡಿದವರೂ ಇದ್ದಾರೆ. ಕದ್ದು ಮುಚ್ಚಿ ಗೋಂಕು, ಪೈನಾಪಲ್, ಹಲಸಿನ

” ಓಡೋ….ಓಡ್ಲಾ….ಬಾಟ್ಲಿ ಚಿಪ್ಸು ಹಿಡ್ಕಳ್ಳಾ…….” ಬಾರ್ ಗೆ ಡಿಸಿ ರೈಡ್…

ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಅಧಿಕಾರಿಗಳ ತಂಡ ನೆಲಮಂಗಲ ಬಾರ್ ವೊಂದಕ್ಕೆ ದಿಢೀರ್ ಭೇಟಿ ನೀಡಿದ ವೇಳೆ ಕುಡುಕರು ಗಾಬರಿಗೊಂಡು ಸ್ಥಳದಿಂದ ತೂರಾಡುತ್ತಾ ಕಾಲ್ಕಿತ್ತಿದ್ದಾರೆ.' ಯಾರೇ ಕೂಗಾಡಲಿ, ಯಾರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ' ಅನ್ನುವಂತೆ ಅವರು ಮಟಾ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬನ ಬ್ಯಾಗ್ ನಲ್ಲಿ ಏಕಾಏಕಿ ಬೆಂಕಿ

ಆಘಾತಕಾರಿ ಘಟನೆಯೊಂದರಲ್ಲಿ, ಜನದಟ್ಟಣೆಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬನ ಬ್ಯಾಗ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.ಚೀನಾದಲ್ಲಿ ನಡೆದ ಈ ಘಟನೆಯನ್ನು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಬುಧವಾರ ಹಂಚಿಕೊಂಡಿದೆ. ಈ 51 ಸೆಕೆಂಡುಗಳ ವಿಡಿಯೋ ಸೋಶಿಯಲ್

ವಿಟ್ಲ: ಜೀವನದಲ್ಲಿ ಜಿಗುಪ್ಸೆ | ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಚಂದಳಿಕೆ ಎಂಬಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ವಿಟ್ಲ ಕಸಬಾ ಗ್ರಾಮದ ಉಕ್ಕುಡ ಆಲಂಗಾರು ನಿವಾಸಿ ಬಾಬು ಆಚಾರ್ಯ (75) ಎಂದು ಗುರುತಿಸಲಾಗಿದೆ.ಇವರು

ಕೋವಿಡ್ ಪ್ರಕರಣಗಳು ಹೆಚ್ಚಳ | ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಕೋಲಾರ ಜಿಲ್ಲಾಡಳಿತ

ಕೋಲಾರ ಜಿಲ್ಲೆಯ ಕೋಲಾರ ನಗರದಲ್ಲಿ ಕೋವಿಡ್ ನಿಯಂತ್ರಿಸಲು ಪೊಲೀಸರು ಗುರುವಾರ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ.ನಗರದ ಹೊರವಲಯದ ಗ್ರಾಮಾಂತರ ಪ್ರದೇಶದ ಹಲವಾರು ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೋಲಾರ

ಬೆಂಗಳೂರಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣ- ಡಾ ಕೆ ಸುಧಾಕರ್

ಕೋವಿಡ್ ಸೋಂಕಿನ ಪರಿಣಾಮ, ಬೆಂಗಳೂರಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಸಚಿವ ಡಾ ಕೆ ಸುಧಾಕರ್‌ ತಿಳಿಸಿದ್ದಾರೆ.ಆರೋಗ್ಯ ತುರ್ತಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರ ನಿರ್ದೇಶನದಂತೆ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.ಈ