ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬನ ಬ್ಯಾಗ್ ನಲ್ಲಿ ಏಕಾಏಕಿ ಬೆಂಕಿ

ಆಘಾತಕಾರಿ ಘಟನೆಯೊಂದರಲ್ಲಿ, ಜನದಟ್ಟಣೆಯ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬನ ಬ್ಯಾಗ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಚೀನಾದಲ್ಲಿ ನಡೆದ ಈ ಘಟನೆಯನ್ನು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಬುಧವಾರ ಹಂಚಿಕೊಂಡಿದೆ. ಈ 51 ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮತ್ತು ಇದನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ.

ತನ್ನ ಬ್ಯಾಗ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಾಗ ಆ ವ್ಯಕ್ತಿಯು ತನ್ನ ಗೆಳತಿಯೊಂದಿಗೆ ಬ್ಯುಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಒಮ್ಮೆಲೆ ಜ್ವಾಲೆ ಕಾಣಿಸಿಕೊಂಡಿದೆ. ಜತೆಗೆ ಸ್ಫೋಟದ ಸದ್ದು ಕೂಡ.
ಅವನ ಬ್ಯಾಗ್ ಕೂಡಲೇ ಬೆಂಕಿಗೆ ಆಹುತಿಯಾಯಿತು.

ಆ ಕೂಡಲೇ ಆತ ಫೋನ್ ಇರುವ ಬ್ಯಾಗ್ ಅನ್ನು ನೆಲಕ್ಕೆ ಬಿಸಾಡಿದ. ಇದು 2016 ರಲ್ಲಿ ಆತ ಕೊಂಡ ಸ್ಯಾಮ್ ಸಂಗ್ ಫೋನ್ ಆಗಿತ್ತು ಎಂದು ವರದಿಗಳು ತಿಳಿಸಿವೆ. ಆತನ ಫೋನ್‌ನ ಬ್ಯಾಟರಿ ಬಹಳ ಹಿಂದಿನಿಂದಲೂ ಕೆಲವು ಸಮಸ್ಯೆಗಳನ್ನು ಕೊಡುತ್ತಿತ್ತು. ಅಪಘಾತದಿಂದಾಗಿ ವ್ಯಕ್ತಿಗೆ ಸಣ್ಣ ಮಟ್ಟದ ಗಾಯಗಳಾಗಿವೆ ಎಂದು ವಿಡಿಯೋ ತೋರಿಸಿದೆ. ಆತನ ತಲೆಕೂದಲು ಮತ್ತು ಕೈನ ಕೂದಲು ಸುಟ್ಟಿದೆ.

Leave A Reply

Your email address will not be published.