Megha Breaking | ಮುಂದಿನ ವಿಧಾನಸಭೆಗೆ ಉಡುಪಿಯಿಂದ ಮಾಜಿ IPS ಅಣ್ಣಾಮಲೈ ಸ್ಪರ್ಧೆ ?! ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಉಡುಪಿ ರಣಕಣ !!

ಇದು ಹೊಸ ಕನ್ನಡ ಡಾಟ್ ಕಾಮ್ ಪತ್ರಿಕೆಯ ಏಕ್ಸ್ ಕ್ಲೂಸಿವ್ ಮೆಘಾ ಬ್ರೇಕಿಂಗ್ ಇನ್ ಸೈಡರ್ ಸ್ಟೋರಿ !


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಅವಿಭಜಿತ ದಕ್ಷಿಣ ಕನ್ನಡ ಮತ್ತೊಂದು ಸುತ್ತಿನ ಪ್ರಯೋಗಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಿದೆ.
ಕೇಸರಿ ಪಡೆಯ ಪ್ರಯೋಗಶಾಲೆಯಲ್ಲಿ ಮತ್ತೊಂದು ಹೊಸ ಅಸ್ತ್ರವನ್ನು ಪ್ರಯೋಗಿಸಲು ಬಿಜೆಪಿ ಸಿದ್ದವಾಗಿದೆ.

ಹೌೌದು, ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಡಿಸಿಪಿಯಾಗಿದ್ದ ವೇಳೆಯಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದ, ಈ ಹಿಂದೆ ಉಡುಪಿಯಲ್ಲಿ SP ಆಗಿದ್ದ, ನಂತರ ರಾಜೀನಾಮೆ ನೀಡಿ ಹೊರ ಹೋದ, ಐಪಿಎಸ್ ಅಧಿಕಾರಿ ಅಣ್ಣಾಮಲೈ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ! ಅದಕ್ಕೆ ಬೇಕಾದ ಎಲ್ಲಾ ಗ್ರೌಂಡ್ ವರ್ಕ್ ರೆಡಿಯಾಗಿದೆ.

ಅಷ್ಟೇ ಅಲ್ಲ, ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ನಿಚ್ಚಳ ಎಂಬ ಸ್ಫೋಟಕ ಮಾಹಿತಿ ಹೊಸ ಕನ್ನಡಕ್ಕೆ ದೊರೆತಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಟೀಮ್ ನ ಗೇಮ್ ಪ್ಲಾನ್

ಬಿಜೆಪಿ ಮತ್ತೆ ಪ್ರಯೋಗಕ್ಕೆ ಹೊರಟಿದೆ. ಪ್ರತಿಸಲ ಬಿಜೆಪಿ ಪ್ರಯೋಗಕ್ಕೆ ಹೊರಟಾಗಲೂ ಅದು ಸೂಪರ್ ಸಕ್ಸೆಸ್ ಅನ್ನು ಪಡೆದಿದೆ. ಕಳೆದ ಎಂಪಿ ಚುನಾವಣೆಯಲ್ಲಿ ಇಂತಹ ಒಂದು ಪ್ರಯೋಗವನ್ನು ಬಿಜೆಪಿ ಮಾಡಿತ್ತು. ಬೌದ್ಧಿಕ ಸ್ತರದಲ್ಲಿ ಪ್ರಚಲಿತವಿರುವ, ತೇಜಸ್ವಿ ಸೂರ್ಯರಂತಹ ಯುವಕರನ್ನು ಅದು ರಾಜಕೀಯ ಪ್ರಯೋಗದಲ್ಲಿ ಒಡ್ಡಿ ಯಶಃ ಕಂಡಿತ್ತು. ಪ್ರತಾಪ ಸಿಂಹ ಕೂಡ ಅಂತಹದೇ ಮತ್ತೊಂದು ಪ್ರೊಡಕ್ಟ್.
ಬರುವ ಸಲ ಆಡಳಿತಾತ್ಮಕ ಅನುಭವ ಇರುವ, ಯುವ ಪೀಳಿಗೆಯನ್ನು ಬಿಜೆಪಿಗೆ ಸೆಳೆಯಲು ಪ್ರಯತ್ನ ಸಾಗಿದೆ. ಅದರಂತೆ ಆಯಾ ಕ್ಷೇತ್ರಗಳಲ್ಲಿ ಪಳಗಿದ, ಆಡಳಿತಾತ್ಮಕ ಅನುಭವ ಇರುವ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು, ಸುಲಭವಾಗಿ ಗೆಲ್ಲಿಸಿಕೊಂಡು ಬಂದು ಆಡಳಿತ ಸುಲಭಗೊಳಿಸಲು ಬಿಜೆಪಿ ತಂತ್ರ ರೂಪಿಸಿದೆ.

ಇನ್ನು ‘ ಮಿಸ್ ಯೂ ಕರ್ನಾಟಕ ‘ ಎಂದು ಮಾತು ಆರಂಭಿಸುವ ಅಣ್ಣಾಮಲೈ ಪದೇ ಪದೇ ಕರ್ನಾಟಕದ ಜನರನ್ನು ನೆನೆಯುವುದು ಇದೇ ಪ್ಲಾನ್ ನ ಕಾರಣದಿಂದ. ಈಗ ಅಣ್ಣಾಮಲೈ ಅವರು ತುಳುವಿನಲ್ಲಿ ಟ್ವೀಟ್ ಮಾಡುವುದು, ತುಳು ಭಾಷೆಯ ಪದಗಳನ್ನು ಬಳಸುವುದು ಕೂಡಾ ಇದೇ ಕಾರಣಕ್ಕೆ. ಯಾವುದೇ ಕಾರಣಕ್ಕೂ ಉಡುಪಿಯಿಂದ ಡಿಸ್ಕನೆಕ್ಟ್ ಆಗಲು ಅವರು ತಯಾರಿಲ್ಲ. ಬದುಕಿನಲ್ಲಿ ಯಾವುದೇ ಪ್ಲಾನ್ ಇಲ್ಲದೆ ಐಪಿಎಸ್ ನಂತಹ ಹುದ್ದೆಯನ್ನು ಯಾರೂ ಕೈ ಚೆಲ್ಲಿ ಬರುವುದಿಲ್ಲ. ರಾಜಕೀಯಕ್ಕೆ ಸೇರಲ್ಲ ಅಂತ ಹೇಳುತ್ತ ಬಂದ ಅಣ್ಣಾಮಲೈ ಈಗ ತಮಿಳುನಾಡಿನಲ್ಲಿ ರಾಜಕೀಯಕ್ಕೆ ಸೇರುತ್ತೇನೆ ಅನ್ನುತ್ತಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ಉಡುಪಿಯಲ್ಲಿ ಮುಂದಿನ ಚುನಾವಣಾ ತಯಾರಿ ನಡೆಯಲಿದೆ ಎನ್ನಲಾಗುತ್ತಿದೆ.

ಅಣ್ಣಾಮಲೈ ಅವರು ರಾಜೀನಾಮೆ ನೀಡಿ ಹೊರ ಬಂದಾಗಲೇ ಅವರು ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದರು. ಇನ್ನೊಂದು ವರ್ಗವು, ‘ ಇಲ್ಲಾ ಅಣ್ಣಾಮಲೈ ಯಾವುದೇ ರಾಜಕೀಯ ಪಕ್ಷ ಸೇರಲ್ಲ ‘ ಅಂತ ಕಾನ್ಫಿ ಡೆಂಟ್ ಆಗಿ ಹೇಳಿತ್ತು. ಆದರೀಗ ಬಿಜೆಪಿಯ ಕಾರ್ಯಕರ್ತರ ಮಾತು ನಿಜವಾಗಿದೆ. ಅಣ್ಣಾಮಲೈ ರಾಜಕೀಯಕ್ಕೆ ಸೇರುವುದನ್ನು ಅವರೇ ಸ್ವತಃ ಖಚಿತಪಡಿಸಿದ್ದಾರೆ.

ಉಡುಪಿಯಲ್ಲಿ ಈಗ ಇರುವುದು ಬಿಜೆಪಿಯ ಹಿರಿಯ ಮತ್ತು ಮೂರು ಬಾರಿ ಶಾಸಕರಾಗಿರುವ ರಘುಪತಿ ಭಟ್ಟರು. ಮುಂದಿನ ಬಾರಿ ಆ ಸ್ಥಾನದಲ್ಲಿ ಅಣ್ಣಾಮಲೈ ಸ್ಪರ್ಧಿಸಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊಸ ಕನ್ನಡಕ್ಕೆ ದೊರೆತಿದೆ. ಇದರ ಮೂಲಕ ರಘುಪತಿ ಭಟ್ಟರು ಕ್ಷೇತ್ರವಿಲ್ಲದೆ ಆತಂತ್ರರಾಗಲಿದ್ದಾರೆ. ಅತ್ತ ಬೈಂದೂರಿನಲ್ಲಿ ಸುಕುಮಾರ ಶೆಟ್ಟಿಯವರ ಕ್ಷೇತ್ರದಲ್ಲಿ ಮುಂದಿನ ಸಲ ಕೋಟಾ ಶ್ರೀನಿವಾಸ್ ಪೂಜಾರಿಯವರು ವಿಧಾನಸಭೆಗೆ ಅಭ್ಯರ್ಥಿಯಾಗಲಿದ್ದಾರೆ. ಬೈಂದೂರಿನ ಮೊಗವೀರ ಸಮಾಜವನ್ನು ಈವಾಗಿನಿಂದಲೆ ಒಲಿಸಿಕೊಳ್ಳಲು ಕೋಟಾ ಶ್ರೀನಿವಾಸ್ ಪೂಜಾರಿ ಅವರು ಅಲ್ಲಿನ ಮೀನುಗಾರಿಕಾ ಅಭಿವೃದ್ಧಿ ಕಾರ್ಯಗಳಿಗೆ ಯಥೇಚ್ಛ ಹಣವನ್ನು ಪಂಪ್ ಮಾಡುತ್ತಿದ್ದಾರೆ.

ಸದ್ಯದಲ್ಲೇ ಉಡುಪಿಯ ರಣಕಣಕ್ಕೆ ಬಹಿರಂಗ ತಾಲೀಮು ಶುರುವಾಗಲಿದೆ. ಇದು ರಘುಪತಿ ಭಟ್ಟರಿಗೆ ಅಸ್ತಿತ್ವದ ಪ್ರಶ್ನೆ. ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಭದ್ರ ಭವಿಷ್ಯ ಕಂಡುಕೊಳ್ಳುವ ಆತುರ. ಬಿಜೆಪಿ ಪಾಳಯಕ್ಕೆ ಉಡುಪಿಯಲ್ಲಿ ಅಣ್ಣಾ ಮಲೈ ಅವರನ್ನು ತಂದು ಪ್ರಯೋಗ ಮಾಡುವ ತಹತಹ. ಇದರ ಮಧ್ಯೆ ಸ್ಥಳೀಯ ಯುವ ನಾಯಕರು ‘ ಹೊರಗಿನಿಂದ ಆಮದು ಮಾಡಿಕೊಂಡ  ಉತ್ಪನ್ನವಾದ ಅಣ್ಣಾಮಲೈನೇ ಯಾಕೆ ಬೇಕು ? ಅತಿ ಬುದ್ದಿವಂತರ ಜಿಲ್ಲೆ ಉಡುಪಿಯಲ್ಲಿ ಯುವಕರ ಕೊರತೆಯೇ ? ನಾವಿಲ್ಲವೇ ? ಎಂಬ ಅಸಮಾಧಾನ. ಸಣ್ಣಗೆ ಹೊಗೆಯಾಡುತ್ತಿರುವ ಸುದ್ದಿ ಸದ್ಯೋಭವಿಷ್ಯದಲ್ಲಿ ಉಡುಪಿಯಲ್ಲಿ ದೊಡ್ಡ ಬಿರುಗಾಳಿ ಸೃಷ್ಟಿಸಲಿದೆ.

0 thoughts on “Megha Breaking | ಮುಂದಿನ ವಿಧಾನಸಭೆಗೆ ಉಡುಪಿಯಿಂದ ಮಾಜಿ IPS ಅಣ್ಣಾಮಲೈ ಸ್ಪರ್ಧೆ ?! ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಉಡುಪಿ ರಣಕಣ !!”

  1. ಏನೂ ಅಲ್ಲೋಲ ಕಲ್ಲೋಲ ಆಗಲ್ಲ ಬಿಡಿ ಇಂತಹ ಜನ ತುಂಬಾ ಬಂದು ಹೋಗಿದ್ದಾರೆ. ಇವರು sp ಆಗಿದ್ದಾಗ ಇವರ ಹುದ್ದೆಗೆ respect ಕೊಟ್ಟಿದ್ದು. ಇವರ politics ಗೆ ಕೊಡ್ಬೇಕಂತ ella

error: Content is protected !!
Scroll to Top
%d bloggers like this: