ಲಾಕ್ ಡೌನ್ ಎಂದು ಸ್ನೇಹಿತನನ್ನು ಮನೆಯೊಳಗೆ ಬಿಟ್ಟುಕೊಂಡ ಪತಿ | ಉಂಡೂ ಹೋದ, ಗೆಳೆಯನ ಪತ್ನಿಯನ್ನು ಕೊಂಡೂ ಹೋದ ಆತನ ಬಾಲ್ಯ ಮಿತ್ರ !

ತಿರುವನಂತಪುರಂ: ಕೊರೊನಾ ಲಾಕ್‍ ಡೌನ್‍ನಿಂದ ಊರಿಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದ ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಈಗ ವ್ಯಕ್ತಿಯೋರ್ವ ಪಶ್ಚಾತಾಪ ಪಡುತ್ತಿದ್ದಾನೆ. ಆತ ತನ್ನ ಸ್ನೇಹಿತನಿಗೆ ಮನೆಯಲ್ಲಿಯೇ ಆಶ್ರಯ ಕೊಟ್ಟಿದ್ದ. ಆದರೆ ಕೃತಘ್ನ ಸ್ನೇಹಿತ ಮಾತ್ರ ಗೆಳೆಯನ ಪತ್ನಿಯನ್ನೇ ಪ್ರೀತಿಸಿ ಆಕೆಯ ಜೊತೆ ಓಡಿಹೋಗಿದ್ದಾನೆ !

ಕೇರಳದ ಇಡುಕ್ಕಿ ಜಿಲ್ಲೆಯ 32 ವರ್ಷದ ಲೋಥಾರಿಯೋ ಎರ್ನಾಕುಲಂನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾರ್ಚ್ ತಿಂಗಳಲ್ಲಿ ಲಾಕ್‍ಡೌನ್ ಘೋಷನೆ ಆದಾಗ ಆತ ಊರಿಗೆ ವಾಪಸ್ ಹೋಗಲು ಆಗದೆ ಮುವಾಟ್ಟುಪುಳದಲ್ಲಿ ಸಿಲುಕಿಕೊಂಡಿದ್ದ. ಆಗ ಲೋಥಾರಿಯೋಗೆ ಸಹಾಯ ಹಸ್ತ ಚಾಚಿದ್ದು ಆತನ ಒಬ್ಬ ಬಾಲ್ಯ ಮಿತ್ರ. ಆ ಮಿತ್ರ ಮುವಾಟ್ಟುಪುಳದಲ್ಲಿ ತನ್ನ ಪತ್ನಿ ಮತ್ತು ಮಕ್ಕಳ ಜತೆ ವಾಸಿಸುತ್ತಿದ್ದ.
ಕಷ್ಟ ಕಾಲದಲ್ಲಿ ತನ್ನ ಸ್ನೇಹಿತನಿಗೆ ತನ್ನ ಮನೆಯಲ್ಲಿಯೇ ಇರಲು ಆಶ್ರಯ ಕೊಟ್ಟಿದ್ದನು. ಸ್ನೇಹಿತನ ಮನೆಯಲ್ಲಿ ಆತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದು, ಪತ್ನಿ ಸಮೇತನಾಗಿ ಸ್ನೇಹಿತನಿಗೆ ಅತಿಥಿ ಸತ್ಕಾರ ಮಾಡಿದ್ದನು. ಏಪ್ರಿಲ್ ಅಂತ್ಯದವರೆಗೂ ಊಟ ವಸತಿ ನೀಡಿದ್ದನು.

ಆದರೆ ಏಪ್ರಿಲ್ ನಂತರ ಎರ್ನಾಕುಲಂ ಪೂರ್ತಿ ಕೊರೋನಾ ಮುಕ್ತವಾಗಿ ಗ್ರೀನ್ ಝೋನ್‍ಗೆ ಬಂದಿತ್ತು. ಹೀಗಾಗಿ ಅಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿತ್ತು. ಆದರೂ ಲೋಥಾರಿಯೋ ವಾಪಸ್ ತನ್ನ ಮನೆಗೆ ತೆರಳದೆ ಅಲ್ಲೇ ಆರಾಮ ಮಾಡಲು ಪ್ರಾರಂಭಿಸಿದ್ದ. ಆತನ ಹೆಂಡತಿ ಬೇರೆ ಥರಾವರಿ ಅಡುಗೆ ಮಾಡಿ ಆತನನ್ನು ಸತ್ಕರಿಸಲು ಪ್ರಾರಂಭಿಸಿದ್ದಳು. ಮನೆಗೆ ಬಂದ ಸ್ನೇಹಿತನಿಗೆ ಒಳ್ಳೆಯ ಮನೆಯೂಟ ಸಿಕ್ಕಿತ್ತು. ಅದರ ಜತೆ ಆತನ ಬಯಕೆಗಳು ಜಾಗೃತವಾಗಿದ್ದವು. ಸ್ನೇಹಿತನ ಪತ್ನಿಯನ್ನು ಆತ ಸ್ನೇಹಿತ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮರಳು ಮಾಡಿದ್ದ. ಯಾರೂ ಇಲ್ಲದ ಅವಕಾಶ ಸಿಕ್ಕಾಗ ಆತ ಆಕೆಯನ್ನು ಪಡೆಯುತ್ತಿದ್ದ. ಹೀಗೆ ಲಾಕ್ ಡೌನ್ ಮುರಿದು ದಿನಗಳೇ ಕಳೆದರೂ ಲೋಥಾರಿಯೋ ಕದಲದ್ದನ್ನು ಕಂಡಾಗ ಆತನ ಸ್ನೇಹಿತನಿಗೆ ಅನುಮಾನ ಮೂಡಿತ್ತು. ಆ ನಂತರ ಕೆಲ ದಿನದಲ್ಲೇ ಅತಿಥಿ ಲೋಥಾರಿಯೋ ಸ್ನೇಹಿತನ ಪತ್ನಿ ಜೊತೆ ಇಬ್ಬರು ಮಕ್ಕಳ ಜತೆ ಓಡಿ ಹೋಗಿದ್ದನು.

ಆಗ ಸ್ನೇಹಿತನ ಜೊತೆ ತನ್ನ ಪತ್ನಿ ಓಡಿ ಹೋಗಿರುವುದಾಗಿ ಪತಿ ಪೊಲೀಸರಿಗೆ ದೂರು ನೀಡಿದ್ದನು. ಆಗ ಆತ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದಾಗ ಓಡಿ ಹೋಗಿದ್ದ ಸ್ನೇಹಿತನ ಪತ್ನಿ ಹಾಗೂ ಮಕ್ಕಳು ವಾಪಸ್ ಮನೆಗೆ ಬಂದಿದ್ದರು. ಸ್ನೇಹಿತ ತನ್ನ ಪತ್ನಿಯನ್ನು ದೊಡ್ಡ ಮನಸ್ಸು ಮಾಡಿ ಕ್ಷಮಿಸಿ ಮಕ್ಕಳೊಂದಿಗೆ ಮನೆಗೆ ಕರೆದುಕೊಂಡು ಹೋಗಿದ್ದನು.

ಆದರೆ ಕಳೆದ ವಾರ ಮತ್ತೆ ಮಕ್ಕಳನ್ನು ಕರೆದುಕೊಂಡು ಪತ್ನಿ ಲೋಥಾರಿಯೋ ಜೊತೆ ಪತಿ ತನ್ನ ಹೆಸರಲ್ಲಿ ಖರೀದಿಸಿದ್ದ ಕಾರಿನಲ್ಲಿಯೇ ಓಡಿಹೋಗಿದ್ದಾಳೆ. ಮನೆಯಲ್ಲಿದ್ದ ತನ್ನ ಬಂಗಾರದ ಒಡವೆಗಳನ್ನು ದೋಚಿಕೊಂಡು ಪ್ರೇಮಿ ಜೊತೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಕೋರೋನಾ ಜೀವ ಮಾತ್ರವಲ್ಲ ಸಂಬಂಧಗಳನ್ನೂ ಕೊಲ್ಲಬಲ್ಲುದೆಂಬುದಕ್ಕೆ ಇದೊಂದು ನಿದರ್ಶನ.

Leave A Reply

Your email address will not be published.