ಮಂಗಳೂರು | ನಡು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ

ಮಂಗಳೂರು: ಮಂಗಳೂರಿನ ಜೆಪ್ಪು ಮಾರುಕಟ್ಟೆ ಬಳಿ ನೋಡ ನೋಡುತ್ತಿದ್ದಂತೆಯೇ ನಡುರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದೆ.

ಮಾರ್ಕೆಟ್​ನ ಗ್ಯಾಸ್ ಸಿಲಿಂಡರ್ ಏಜೆನ್ಸಿ ಅಂಗಡಿಯಲ್ಲಿ ಗ್ಯಾಸ್ ಲೀಕ್ ಆಗುತ್ತಿರುವುದು ತಿಳಿಯುತ್ತಿದ್ದಂತೆಯೇ ಗ್ಯಾಸ್ ಸಿಲಿಂಡರ್ ​​ಅನ್ನು ಸ್ಥಳೀಯರು ಅಂಗಡಿಯಿಂದ ಹೊರಗೆ ತಂದಿದ್ದರು. ಅಷ್ಟರಲ್ಲೇ ಗ್ಯಾಸ್ ಸಿಲಿಂಡರ್​ಗೆ ಬೆಂಕಿ ಹೊತ್ತಿಕೊಂಡಿದೆ.

ಹೊತ್ತಿ ಉರಿಯುತ್ತಿದ್ದರೂ ಸಿಲಿಂಡರ್ ಪಕ್ಕವೇ ಜನ ಓಡಾಟ ಇತ್ತು . ಅಷ್ಟು ಮಾತ್ರವಲ್ಲದೆ ಹತ್ತಿರದ ರಸ್ತೆಯಲ್ಲೇ ಕಾರು ,ಬೈಕ್ ಗಳು ಸೇರಿದಂತೆ ವಾಹನಗಳು ಮಾಮೂಲಿನಂತೆ ಸಂಚರಿಸುತ್ತಿದ್ದವು. ಸ್ಫೋಟಕ್ಕೆ ಸಿಲಿಂಡರ್​ನ ಅವಶೇಷಗಳು ಸುಮಾರು 50 ಮೀಟರ್ ಎತ್ತರಕ್ಕೆ ಚಿಮ್ಮಿದ್ದು, ಆ ಕ್ಷಣ ಜನರಿಗೆ ಸ್ಫೋಟದ ತೀವ್ರತೆಯ ಅರಿವಾಯಿತು. ಆದರೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

Leave A Reply

Your email address will not be published.