ಬೆಳ್ಳಾರೆ | ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರಿಗೆ ಕ್ವಾರೆಂಟೈನ್‌

ಬೆಳ್ಳಾರೆ: ದರ್ಖಾಸ್ತು ನಿವಾಸಿಗೆ ಗುರುವಾರ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಇಬ್ಬರಿಗೆ ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಸೋಂಕಿತ ವ್ಯಕ್ತಿ ಕ್ವಾರಂಟೈನ್‌ನಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಆಹಾರಗಳನ್ನು ಪೂರೈಕೆ ಮಾಡಿದ ಇಬ್ಬರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಇದಲ್ಲದೆ ಅವರು ಕ್ವಾರಂಟೈನ್‌ಲ್ಲಿದ್ದ ಸಂದರ್ಭದಲ್ಲಿ ಅನೇಕರು ಬಂದು ಸೋಂಕಿತ ವ್ಯಕ್ತಿಯನ್ನು ಭೇಟಿ ಆಗಿದ್ದು, ಭೇಟಿಯಾದವರನ್ನು ತಕ್ಷಣ ಕ್ವಾರಂಟೈನ್‌ನಲ್ಲಿರಲು ಸೂಚಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave A Reply

Your email address will not be published.