ಬೆಟ್ಟಂಪಾಡಿ ಯ ಮಿತ್ತಡ್ಕದ ಲಲಿತಾ ಪೂಜಾರಿ ಬಾವಿಗೆ ಹಾರಿ ಆತ್ಮಹತ್ಯೆ

ಬೆಟ್ಟಂಪಾಡಿ ಮಿತ್ತಡ್ಕ ದಿ. ಶೀನ ಪೂಜಾರಿಯವರ ಪತ್ನಿ ಲಲಿತಾ ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ 29 ರಂದು ನಡೆದಿದೆ.

ಲಲಿತಾ ರವರು ಬೆಳಗ್ಗೆ 9 ಗಂಟೆ ತನಕ ಮನೆಯಲ್ಲಿ ಇದ್ದು ನಂತರ ನಾಪತ್ತೆಯಾಗಿದ್ದರು. ಇದನ್ನು ತಿಳಿದ ಮನೆಯವರು ಹುಡುಕಾಟ ಆರಂಭಿಸಿದರು ಅದೇ ವೇಳೆಗೆ ಅನುಮಾನ ಬಂದು ಮನೆಯ ಪಕ್ಕದಲ್ಲಿರುವ ಭಾವಿಯನ್ನು ನೋಡಿದಾಗ ಲಲಿತಾ ರವರ ಶವ ಪತ್ತೆಯಾಗಿತ್ತು.

ಆದರೆ ಲಲಿತಾ ರವರು ಯಾಕಾಗಿ ಆತ್ಮಹತ್ಯೆ ಮಾಡಿದ್ದಾರೆ ಎನ್ನುವ ಸರಿಯಾದ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆದರೆ ಇವರು ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಉದಯರವಿ ಮತ್ತು ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

Leave A Reply

Your email address will not be published.