ರಿಲಯನ್ಸ್ ಜಿಯೋ ಹೊಸ ವಾರ್ಷಿಕ ಯೋಜನೆಯಿಂದ ಎಲ್ಲರಿಗಿಂತ ಅಗ್ಗದ ವಾರ್ಷಿಕ ಪ್ಲಾನ್

Share the Article

ರಿಲಯನ್ಸ್ ಜಿಯೋ ಇದೀಗ ಹೊಸ ವಾರ್ಷಿಕ ಯೋಜನೆಯನ್ನು ಪ್ರಕಟಿಸಿದೆ. ರಿಲಯನ್ಸ್ ಜಿಯೋ ಹೊಸ ಯೋಜನೆ ಹೆಚ್ಚು ಡಾಟಾ ಬಳಕೆ ಮಾಡುವ ವರ್ಕ್ ಫ್ರಂ ಹೋಮ್ ನಲ್ಲಿರುವ ಜನರಿಗೆ ಮತ್ತಷ್ಟು ಸಹಾಯವಾಗಲಿದೆ.

ಹೆಚ್ಚಿನ ಡೇಟಾ ಮತ್ತು ಹೆಚ್ಚಿನ ಕರೆಗಳೊಂದಿಗೆ ಬರುವ ಈ ಯೋಜನೆಯ ಬೆಲೆ ವಾರ್ಷಿಕ 2,399 ರೂಪಾಯಿ. ಏರ್‌ಟೆಲ್ ಮತ್ತು ವೋಡಾಫೋನ್ ಯೋಜನೆಗಳಿಗಿಂತ ಜಿಯೋ ಯೋಜನೆ ಸಾಕಷ್ಟು ಅಗ್ಗವಾಗಿದೆ. ಜಿಯೋ ಉಳಿದ ನೆಟ್ ವರ್ಕ್ ಗಳಿಗಿಂತ ದಿನಂಪ್ರತಿ 0.5 GB ಹೆಚ್ಚುವರಿ ಡಾಟಾ ಸೌಲಭ್ಯ ನೀಡಲಿದೆ.

ಈ ಯೋಜನೆಯಲ್ಲಿ ಇನ್ನಿತರ ಸಾಕಷ್ಟು ಸೌಲಭ್ಯಗಳು ದೊರೆಯುತ್ತವೆ. 2,399 ರೂಪಾಯಿ ಈ ಯೋಜನೆಯಲ್ಲಿ ಬಳಕೆದಾರರಿಗೆ ದಿನಕ್ಕೆ 2 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆಗಳು ಮತ್ತು ಸಂದೇಶ ಕಳುಹಿಸುವ ಸೌಲಭ್ಯವನ್ನೂ ಹೊಂದಿರುವ ಈ ಯೋಜನೆಯ ಸಿಂಧುತ್ವವು ಒಂದು ವರ್ಷ ಇರಲಿದೆ.

ಏರ್ಟೆಲ್ ನ 2,398 ರೂಪಾಯಿಗಳ ವಾರ್ಷಿಕ ಯೋಜನೆ 365 ದಿನಗಳ ಮಾನ್ಯತೆ ಹೊಂದಿದ್ದು, 1.5 ಜಿಬಿ ಡೇಟಾ ಪ್ರತಿದಿನ ಗ್ರಾಹಕರಿಗೆ ಸಿಗ್ತಿದೆ. ವೋಡಾಫೋನ್ 2,399 ರೂಪಾಯಿ ಯೋಜನೆಯು ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆಗಳು ಮತ್ತು ಸಂದೇಶ ಸೌಲಭ್ಯ ನೀಡ್ತಿದೆ.

Leave A Reply

Your email address will not be published.