ಅಮೆರಿಕದಲ್ಲಿ ಭಾರತೀಯ ಮೂಲದ ವೈದ್ಯ ತಂದೆ-ಮಗಳ ಇಬ್ಬರನ್ನು ಬಲಿ ಪಡೆದ ಕೋರೋನಾ

ಕೊರೊನಾ ಮಾರಿ ಇಡೀ ವಿಶ್ವದಲ್ಲೇ ಮರಣಮೃದಂಗ ಬಾರಿಸುತ್ತಿದೆ. ಇದೀಗ ನ್ಯೂಜೆರ್ಸಿಯಲ್ಲಿ ಐದು ವೈದ್ಯರನ್ನು ಒಳಗೊಂಡ ಭಾರತೀಯ-ಅಮೆರಿಕನ್ ಕುಟುಂಬವು ಇಬ್ಬರು ಸದಸ್ಯರನ್ನು ಅದರಲ್ಲೂ ತಂದೆ ಹಾಗೂ ಒಬ್ಬ ಮಗಳನ್ನು ಕಳೆದುಕೊಂಡು ‌ ಅಕ್ಷರಶಃ ಸೂತಕದ ಮನೆಯಾಗಿದೆ.

ಡಾ. ಪ್ರಿಯಾ ಖನ್ನಾ ಅವರು ನೆಫ್ರಾಲಜಿಸ್ಟ್ ಮತ್ತು ಆಕೆಯ ತಂದೆ ಡಾ. ಸತ್ಯೇಂದರ್ ದೇವ್ ಖನ್ನಾ ಅವರು ಶಸ್ತ್ರಚಿಕಿತ್ಸಕರಾಗಿದ್ದರು. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರಿಬ್ಬರು ಕರೋನಾ ಸೊಂಕು ಪೀಡಿತರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದು,ಕೊನೆಗೆ ಇಬ್ಬರು ವೈದ್ಯರಿಗೂ ಸಾಂಕ್ರಾಮಿಕ ರೋಗ ಹರಡಿ ಬಳಲುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮಾರಣಾಂತಿಕ ಸೋಂಕಿಗೆ ತಾವೇ ಬಲಿಯಾಗಿದ್ದಾರೆ.

ಅವರ ಸಾವುಗಳನ್ನು ನ್ಯೂಜೆರ್ಸಿಯ ಗವರ್ನರ್ ಫಿಲ್ ಮರ್ಫಿ ಸಾರ್ವಜನಿಕವಾಗಿ ಘೋಷಿಸಿದ್ದು, ತಂದೆ ಹಾಗೂ ಮಗಳಿಬ್ಬರು ಬೇರೆಯವರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದರು .ಇವರ ಕಾರ್ಯ ಶ್ಲಾಘನೀಯ ಎಂದು ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.