ದಕ್ಷಿಣ ಕನ್ನಡ, ಬ್ಯಾಡ್ ಬುಧವಾರ | ಮತ್ತೆ ಮೂರು ಪಾಸಿಟಿವ್ ಕೇಸುಗಳು ದೃಢ

ದಕ್ಷಿಣ ಕನ್ನಡದಲ್ಲಿ ಮತ್ತೆ ಮೂರು ಪಾಸಿಟಿವ್ ಕೇಸುಗಳು ಇಂದು ಪತ್ತೆಯಾಗಿವೆ.

ಈ ಮೂವರು 11,16 ಮತ್ತು 35 ವರ್ಷ ವಯಸ್ಸಿನ ಮಹಿಳೆಯ ಆಗಿದ್ದಾರೆ. ಇವರಲ್ಲಿ 11 ವರ್ಷದ ಬಾಲಕಿ ಮತ್ತು 35 ವರ್ಷದ ಮಹಿಳೆ P 536 ಸಂಪರ್ಕ ಇದ್ದವರು. 16 ವರ್ಷದ ಬಾಲಕಿ P 390 ರೋಗಿಯ ಜೊತೆ ಇರುವ ಸಂಪರ್ಕದಿಂದ ಸೋಂಕು ತಗಲಿದ್ದು ಖಚಿತವಾಗಿದೆ.

ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೋಳೂರಿನ ಇಬ್ಬರು ನಿವಾಸಿಗಳಾಗಿದ್ದು, ಹಾಗೂ ಓರ್ವ ವ್ಯಕ್ತಿ ಬಂಟ್ವಾಳದವರು.

ನಿನ್ನೆ ತಾನೆ ಬೋಳೂರಿನ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿತ್ತು. ಕಳೆದ ಮೇ ಒಂದರಂದು ಮಂಗಳೂರಿನ ಮತ್ತು ಬೋಳೂರಿನ ಒಟ್ಟು ಇಬ್ಬರಿಗೆ ಸೋಂಕು ದೃಢವಾಗಿತ್ತು.

ದಕ್ಷಿಣ ಕನ್ನಡದಲ್ಲಿ ಈವರೆಗೆ ಒಟ್ಟು 28 ಶಂಕಿತರು, 3 ಸಾವು. ಜಿಲ್ಲೆಯಲ್ಲಿ ಸದ್ಯ 13 ಕೋವಿಡ್-19 ಸೋಂಕು ಪಾಸಿಟಿವ್ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave A Reply

Your email address will not be published.