ಒಕ್ಕಲಿಗ ಗೌಡ ಯುವ ಘಟಕ, ಮಂಗಳೂರು ವತಿಯಿಂದ ಬಾಲ ಸಂರಕ್ಷಣಾ ಕೇಂದ್ರಕ್ಕೆ ಅಗತ್ಯ ಆಹಾರ ಸಾಮಾಗ್ರಿ ವಿತರಣೆ

ಒಕ್ಕಲಿಗ ಗೌಡ ಯುವ ಘಟಕ, ಮಂಗಳೂರು ಇವರ ವತಿಯಿಂದ ಅಗತ್ಯ ಆಹಾರ ಸಾಮಾಗ್ರಿಗಳನ್ನು ಬಾಲ ಸಂರಕ್ಷಣಾ ಕೇಂದ್ರಕ್ಕೆ ವಿತರಿಸಲಾಯಿತು.

ಮಂಗಳ ಸೇವಾ ಸಮಿತಿ ಟ್ರಸ್ಟನ ಅಡಿಯಲ್ಲಿರುವ ಸುಮಾರು 85 ಆನಾಥ ಮಕ್ಕಳಿರುವ ಬಾಲ ಸಂರಕ್ಷಣಾ ಕೇಂದ್ರ ಕುತ್ತಾರ್ ಪದವು, ದೇರಳಕಟ್ಟೆಗೆ ತೆರಳಿ ಆಹಾರ ಸಾಮಗ್ರಿಗಳ ಕಟ್ಟನ್ನು ವಿತರಿಸಲಾಯಿತು.

ಈ ಸಂದರ್ಭ ಒಕ್ಕಲಿಗ ಗೌಡರ ಯುವ ಘಟಕ, ಮಂಗಳೂರು ಘಟಕ ಇದರ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಹಾಗು ಇತರ ಪದಾಧಿಕಾರಿಗಳಾದ ರಾಘವೇಂದ್ರ ಗೌಡ, ಚಂದ್ರಶೇಖರಗೌಡ ಆರಿಗ, ರಕ್ಷಿತ್ ಗೌಡ ಪುತ್ತಿಲ, ಶಾಂತಪ್ಪ ಗೌಡ ಉಳಿಪ್ಪು, ಮನೋಜ್ ಕುಮಾರ್ ಗೌಡ, ಮಹೇಶ್ ಗೌಡ ನಡುತೋಟ, ಅಶ್ವತ್ ಕುಮಾರ್ ಉಪಸ್ಥಿತರಿದ್ದರು.

Leave A Reply

Your email address will not be published.