ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕಕ್ಕೆ ಬಂದ ತಾಲೂಕಿನ ಕುಟುಂಬಗಳಿಗೆ ಹೋಮ್ ಕ್ವಾರಂಟೈನ್

ಬೆಳ್ತಂಗಡಿ : ಮಂಗಳೂರಿನ ಪಡೀಲು ಬಳಿಯಿರುವ ಪಸ್ಟ್ ನ್ಯೂರೋ ಆಸ್ಪತ್ರೆಯ ಸುತ್ತ ಮುತ್ತ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಕಾರಣ ಪಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಇದ್ದ ಮಹಿಳೆಗೆ ಕೊರೋನಾ ದೃಢವಾಗಿತ್ತು. ಹಾಗಾಗಿ ಈಗ ಅದೇ ಆಸ್ಪತ್ರೆಗೆ ಚಿಕಿತ್ಸೆಗೆ ಹೋದ, ಸಂಪರ್ಕಕ್ಕೆ ಬಂದ ಕುಟುಂಬಗಳಿಗೆ ಹೋಮ್ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ.

ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣ ಮಂಗಳೂರಿನ ಪಾಸ್ಟ್ ನ್ಯೂರೋ ಆಸ್ಪತ್ರೆಗೆ 75 ವರ್ಷದ ವೃದ್ದೆಯೊಬ್ಬಳು ದಾಖಲಾಗಿದ್ದಳು. ಹಾಗಾಗಿ ಅ ವೃದ್ಧೆಯ ಮತ್ತು ಆಸ್ಪತ್ರೆಯ ಸಂಪರ್ಕಕ್ಕೆ ಬಂದ ಜನರನ್ನು ಹೋಮ್ ಕ್ವಾರಂಟೈನ್ ಲ್ಲಿರಲು ಸೂಚಿಸಲಾಗಿದೆ.

ಹಾಗೆಯೇ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಾತಬೆಟ್ಟು ನಿವಾಸಿಯಾದ ಅವರು ಮನೆಯ ಕುಟುಂಬದವರ ಸಂಪರ್ಕಕ್ಕೆ ಬಂದಿರುವುದರಿಂದ ಆ ಕುಟುಂಬವನ್ನು ಹೋಮ್ ಕ್ವಾರಂಟೈನಲ್ಲಿ ಇರಲು ಸೂಚಿಸಲಗಿದೆ.

ಹಾಗೆಯೇ ಮಡಂತ್ಯಾರು ಬಳಿಯ ಕೊಲ್ಪೆದಬೈಲಿನ 76 ವರ್ಷದ ವೃದ್ಧೆಯೊಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವುದರಿಂದ ಆ ಕುಟುಂಬವನ್ನು ಕೂಡ ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಪಾಶ್ರ್ವವಾಯು ಸಂಬಂಧ ಕೆಲ ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಈಗ ತೀರಿಕೊಂಡ ವೃದ್ಧೆಯಲ್ಲಿ ಕೊರೊನಾ ಸೋಂಕು ದೃಢವಾಗಿರುವುದರಿಂದ ಆಕೆ ಮೊದಲು ಅಡ್ಮಿಟ್ ಆಗಿದ್ದ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಎರಡು ಮನೆ, ಐದು ಅಂಗಡಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆ ಸುತ್ತಲಿನ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

Leave A Reply

Your email address will not be published.