ಈ ಕೃಷಿಕನಿಂದ ಪೊಲೀಸರು ದಂಡ ವಸೂಲಿ ಮಾಡಿದ್ದು ಯಾಕೆ ? | ನಿಮ್ಮ ಉತ್ತರಕ್ಕೆ ಕೃಷಿಕರು ಕಾಯುತ್ತಿದ್ದಾರೆ !

ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ  ಸಂಘದ ಶಾಖೆ ದೇವರಹಳ್ಳಿಯಲ್ಲಿ ನಿನ್ನೆ, ಏಪ್ರಿಲ್ 23 ರಂದು ಗೇರುಬೀಜ ಹಾಗೂ ಖರೀದಿಸುವುದೆಂದು ಸುದ್ದಿ ತಿಳಿದ ಸ್ಥಳೀಯ ಬಿಪಿನ್ ಎಂಬವರು ಕೋಕೋ ಹಾಗೂ ಗೇರುಬೀಜ ವನ್ನು ಅವರದೇ ಕಾರಿನಲ್ಲಿ ತಂದಿದ್ದರು.

ಕೋಕೋ ಹಾಗೂ ಗೇರುಬೀಜ ಮಾರಿ ಮನೆಗೆ ಹಿಂತಿರುಗುವ ವೇಳೆಗೆ ಅಲ್ಲಿಗೆ ಸುಬ್ರಮಣ್ಯ ಸ್ಟೇಷನ್ ನ ಪೊಲೀಸರು ಬಂದು, ” ಈ ಫೋರ್ ವೀಲ್ ವಾಹನ ಯಾರದು ? ಇಲ್ಲಿ ಬನ್ನಿ ” ಎಂದು ಹೇಳಿದರು.

ಆಗ ವಾಹನದ ಮಾಲೀಕ ಬಿಪಿನ್ ಅವರು ಅಲ್ಲಿಗೆ ಹೋದಾಗ, ನೀವು ಕಾರಲ್ಲಿ ಬರುವ ಹಾಗೆ ಇಲ್ಲ, ದ್ವಿಚಕ್ರ ವಾಹನದಲ್ಲಿ ಬರಬೇಕು, 1,000/- ದಂಡ ಕಟ್ಟಿ ಎಂದು ಹೇಳಿದರು. ” ನನ್ನ ಬಳಿ ದ್ವಿಚಕ್ರ ವಾಹನ ಇಲ್ಲದಿರುವುದಾಗಿ, ಕೋಕೋ ಹಾಗೂ ಗೇರುಬೀಜ ಇದ್ದ ಕಾರಣ ಕಾರಿನಲ್ಲಿ  ಬಂದಿದ್ದು ” ಎಂದು ಬಿಪಿನ್ ಅವರು ಉತ್ತರಿಸಿದರು.

ಹಾಗಾದರೆ ನೀವು ಬಾಡಿಗೆ ವಾಹನದಲ್ಲಿ ಬರಬೇಕು ಎಂದು ಹೇಳಿದರು. ಬಾಡಿಗೆ ವಾಹನಕ್ಕೆ ಸುಬ್ರಮಣ್ಯ ದಿಂದ ಕಲ್ಲಾಜೆ ಗೆ ಚಾರ್ಜ್ ಮತ್ತು ಕಲ್ಲಾಜೆಯಿಂದ  ಮನೆಗೆ ಚಾರ್ಜ್ ಕೊಡುಬೇಕು. ನಾನು ಮಾರಾಟ ಮಾಡಿದ ಹಣವನ್ನು  ಬಾಡಿಗೆ ವಾಹನಕ್ಕೆ ಕೊಟ್ಟು ಸರಿ ಆಗುತ್ತದೆ. ನಡೆದುಕೊಂಡು ಹೋಗಿ ಮಾರಲು ಆಗುವುದಿಲ್ಲ. ಕೋಕೋ ಹಾಗೂ ಗೇರುಬೀಜ ಭಾರ  ಇರುತ್ತದೆ ಎಂದು ವಿನಮ್ರವಾಗಿ ಅಂದೆ. ಕೃಷಿ ಚಟುವಟಿಕೆಗೆ ಬಂದಿರುವುದೆಂದು ವಿನಂತಿಸಿದರೂ ಯಾವುದೇ ರಿಯಾಯಿತಿ ನೀಡಲಿಲ್ಲ. ಆದ್ದರಿಂದ ನಾನು  1,000/- ಕಟ್ಟಿ  ಬಂದೆ “
” ಸ್ವಂತ ವಾಹನ ಆದರೆ, ಅದರಲ್ಲಿ ನಾನೊಬ್ಬನೇ ಇರುತ್ತೇನೆ. ಬಾಡಿಗೆ ವಾಹನದಲ್ಲಿ ಬಂದರೆ aa ವಾಹನದ ಚಾಲಕ ಬೇರೆ ಇರುತ್ತಾನೆ. ಯಾವುದರಲ್ಲಿ ಸಾಮಾಜಿಕ ಅಂತರ ಪಾಲನೆ ಚೆನ್ನಾಗಿ ಆಗುವುದು ?” ಬಿಪಿನ್ ಅವರು ಪ್ರಶ್ನಿಸಿದರು.

” ಈಗ ಕೃಷಿಗೆ ಮಾನ್ಯತೆ ಎಂದು ಹೇಳಿ ಆಗುವುದಾದರು ಏನು ? ನಾನು ಏನು ಹೊರಗಡೆ  ಸುಮ್ಮನೆ ಬಂದಿಲ್ಲ. ನಾನು ಮಾರಾಟ ಮಾಡಿದ್ದ ಬೆಲೆಗೆ ಜೊತೆ ಸೇರಿಸಿ ದಂಡ ಕೊಡುವಂತಾಯಿತು. ಕೃಷಿಕ ಬೆಳೆದ ಬೆಲೆಗೆ ಸರಿಯಾದ ಬೆಲೆ ಇಲ್ಲ. ಅವನು ಕಷ್ಟ ಪಟ್ಟಿದ್ದೇ ಆಯಿತು. ಈಗ ಮಾರುವುದಕ್ಕೆ ಕೂಡ ಇಂತಹ ತೊಂದರೆಗಳು. ಇಂತಹಾ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ? ಇದಕ್ಕೆ ಯಾರು ಜವಾಬ್ದಾರರು ? ” ಎಂದು ವರದಿಗೆ ಹೋದ ನಮ್ಮನ್ನೇ ಪ್ರಶ್ನಿಸಿದರು ಬಿಪಿನ್.

ಉತ್ತರ ನಮ್ಮಲ್ಲಿಲ್ಲ. ಉತ್ತರಿಸಬೇಕಾದವರು ದಂಡ ವಸೂಲಿ ಮಾಡಿದವರು. ಅವರ ಉತ್ತರಕ್ಕಾಗಿ ಹೊಸಕನ್ನಡ ಕಾಯುತ್ತದೆ. ಬಿಪಿನ್ ಅವರು ಕೂಡಾ ತಾಳ್ಮೆಯಿಂದ ಕಾಯಬೇಕು. ಮತ್ತೆ ಇದೇ ವಿಷಯದ ಬಗ್ಗೆ ನಾವು ಅಪ್ಡೇಟ್ ಕೊಡುತ್ತೇವೆ. ಅದರೊಳಗೆ ಅವರಿಗೆ ದಂಡದ ಹಣ ವಾಪಸ್ ಮಾಡಿದರೆ, ಪತ್ರಿಕೆಯ ಕಡೆಯಿಂದ ಪೊಲೀಸರಿಗೆ ಒಂದು ಅಡ್ವಾನ್ಸ್ ಥಾಂಕ್ಸ್ ! – ಸಂಪಾದಕ.
Leave A Reply