ಬೆಳ್ತಂಗಡಿ, ಕಕ್ಕಿಂಜೆ | ಮಹಿಳೆ ಸ್ನಾನ ಮಾಡುವುದನ್ನು ಕದ್ದು ನೋಡಲು ಹೋಗಿ ತಾನೇ ಸಾರ್ವಜನಿಕವಾಗಿ ಬೆತ್ತಲಾದ !

ಬೆಳ್ತಂಗಡಿ :  ಇಷ್ಟು ದಿನ ಆತ ಮಾಡಿದ್ದು ನಡೆಯುತ್ತಿತ್ತು. ತನ್ನ ಅಂಗಡಿಗೆ ಬರುತ್ತಿದ್ದ ಹೆಣ್ಣುಮಕ್ಕಳನ್ನು ಕಾಮ ದೃಷ್ಟಿಯಿಂದ ನೋಡುತ್ತಿದ್ದ. ಹೆಣ್ಣುಮಕ್ಕಳಿಗೆ ಕೆಲಸ ಕೊಡುವ ನೆಪದಲ್ಲಿ ಅವರ ಫೋನ್ ನಂಬರ್ ಪಡೆಯುತ್ತಿದ್ದ.

ಈ ಹಿಂದೆ ಕೆಲ ಮನೆಗಳಿಗೆ ಗಂಡಸರು ಇಲ್ಲದ ಮೇಲೆ ಹೋಗಿ ಗಂಡಾಂತರ ಎಬ್ಬಿಸಿದ್ದ. ಆತನ ಅದೃಷ್ಟ ಚೆನ್ನಾಗಿತ್ತು, ಈವರೆಗೆ ಸಿಕ್ಕಿ ಬಿದ್ದಿರಲಿಲ್ಲ. ಆದರೆ ಮೊನ್ನೆ ಈತನ ಅವಾಂತರ ನೋಡಿ ನೋಡಿ ಬೇಸತ್ತಿದ್ದ ಖುದಾ ಕೂಡ ಆತನ ಕೈಬಿಟ್ಟಿದ್ದ. ಹಾಗೆ ಮೊನ್ನೆಯ ದಿನ ಆತ ಬೇರೊಬ್ಬರ ಹೆಂಡತಿ ಸ್ನಾನ ಮಾಡಲು ಹೋಗುವಾಗ ಕದ್ದು ಇಣುಕಿ ನೋಡಲು ಹೋಗಿದ್ದಾನೆ. ಬಹುಶಃ ಈ ಹಿಂದೆಯೂ ಆತ ಇದೇ ರೀತಿ ಮಾಡಿದ್ದಿರಬಹುದು. ನಮ್ಮದಲ್ಲದ್ದಕ್ಕೆ ಆಸೆಪಟ್ಟರೆ ಏನಾಗುತ್ತದೆಯೆಂದು ಬಹುಶ ಆತನಿಗೆ ಗೊತ್ತಿರಲಿಲ್ಲ ಅನ್ನಿಸುತ್ತೆ. ಸಿಸಿಟಿವಿ ಗಿಂತ ಪ್ರಬಲವಾದ ಊರವರ ಕಣ್ಣಿಗೆ ಗೋಚರಿಸದ್ದು ಯಾವುದಿದೆ ? ಅವರಿಗೆ ಆತ ಕತ್ತಲಲ್ಲೇ ಆಮೆಯಂತೆ ತೆವಳುವ ತೆವಲಿನ ಸುದ್ದಿ ಸಿಕ್ಕಿದೆ.

ಆದ್ದರಿಂದ ಊರವರು ಸಕತ ಪ್ಲಾನ್ ಮಾಡಿ ಸಿಸಿಟಿವಿ ಅಳವಡಿಸಿದ್ದಾರೆ. ಹೊಂಚು ಹಾಕಿ ಕಾದು ಕೂತಿದ್ದಾರೆ. ಅವರ ನಿರೀಕ್ಷೆಯಂತೆ ಕಾಡು ಕುದುರೆ ಕುಂಟುತ್ತಾ ಬಂದಿದೆ. ಮೊನ್ನೆ ಎಲ್ಲರ ಕೈಗೆ ಮತ್ತು ಸಿಸಿಟಿವಿ ಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಕೊಂಡಿದ್ದಾನೆ.

ಇದು ನಡೆದದ್ದು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ. ಈತ ಕಕ್ಕಿಂಜೆಯ ಜನರಲ್ ಸ್ಟೋರ್ ಒಂದರ ಮಾಲೀಕ ಮತ್ತು ಸಂಘಟನೆಯೊಂದರ ಕಾರ್ಯಕರ್ತ ಎಂದು ಹೇಳಲಾಗುವ ಶರೀಫ್ ನೇ ಈ ಕಾಮುಕ. ಆಮೇಲೆ ಏನಾಯಿತು ಎಂದು ನೀವು ನಮ್ಮನ್ನು ಕೇಳಬೇಡಿ.

ಆತ ಸಿಕ್ಕಿಕೊಂಡ ನಂತರ ಒಂದು ಗಂಟೆಯಲ್ಲಿ ಕಾಯಿ ಪೆಲಕಾಯಿ ಹಣ್ಣಾಗಿದೆ. ಆ ಥರ ಹಿಡಿದುಕೊಂಡು ಬಡಿದಿದ್ದಾರೆ. ಎಲ್ಲಾ ಕೋನಗಳಿಂದಲೂ ಸರಿಯಾಗಿ ಹಿಟ್ಟು ನಾದಿದ್ದಾರೆ. ಮತ್ತು ಆತ ಹಣ್ಣು ಪೆಲಕಾಯಿ ಎತ್ತಿಕೊಂಡು ಹೋಗುವಾಗ ಸೊಂಟದಲ್ಲಿ ಒಂದು ನೂಲು ಕೂಡ ಇಲ್ಲದಂತೆ ಕೈ ಮುಚ್ಚಿಕೊಂಡು ಹೋಗಿದ್ದಾನೆ. ಇನ್ನು ಮುಂದೆಯಾದರೂ ಈ ಪರಿಸರದ ಹೆಣ್ಣು ಮಕ್ಕಳು ಮರ್ಯಾದೆಯಿಂದ ಬಾಳುವಂತಾಗಲಿ ಎಂಬುದು ಊರವರ ಅಭಿಲಾಷೆ.

ಆತನಿಗೆ life-time ಬುದ್ಧಿ ಬರಲಿ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಇತನ ಕಾಮಾಂಧ ಬುದ್ದಿಯನ್ನ ವೀಡಿಯೋ ಸಮೇತ ವೈರಲ್ ಮಾಡಿದ್ದಾರೆ. ಹಾಗಾಗಿ ಈತನನ್ನು ಈ ಕೂಡಲೇ ಬಂಧಿಸಬೇಕು ಎಂದು ಅಲ್ಲಿನ ಊರವರು ಒತ್ತಾಯಿಸಿದ್ದಾರೆ.

Leave A Reply

Your email address will not be published.