ಮಣ್ಣಿನ ಮಗನಿಂದ ಕರ್ನಾಟಕಕ್ಕೇ ಧೋಕಾ । ಗಡಿ ತೆರೆಯುವ ವಿಷಯದಲ್ಲಿ ದೇವೇಗೌಡ ಕೇರಳ ಪರ !

ಬೆಂಗಳೂರು : ಉಂಡ ಮನೆಗೆ ಮಣ್ಣಿನ ಮಗ ಇಟ್ಟಿದ್ದಾರೆ ನೋಡಿ ಗುನ್ನ. ಹೆಸರಿಗೆ ಮಣ್ಣಿನ ಮಗ. ನಮ್ಮ ಕರ್ನಾಟಕದ ಮುದ್ದೇಗೌಡರು ಕೇರಳದ ಪರವಾಗಿ ರಾಜಕೀಯ ಕಾರಣಗಳಿಗಾಗಿ ಮೃದುವಾಗಿದ್ದಾರೆ. ಕರ್ನಾಟಕದವರು ಸೋಂಕು ತಗುಲಿ ಸತ್ತರೆ ಪರವಾಗಿಲ್ಲ. ಸಾಯಲಿ. ಅದೂ ಈ ಮಂಗಳೂರಿನವರು. ತನಗಾಗಲೀ ತನ್ನ ಜೆಡಿಎಸ್ ಗಾಗಲೀ ಅಥವಾ ತನ್ನ ಕರುಳಿನ ಕುಡಿ ಕುಮಾರನಿಗಾಗಲಿ ಒಂದು ಚಲಾವಣೆಯಲ್ಲಿಲ್ಲದ 5 ಪೈಸೆಯಷ್ಟು ಮತವನ್ನು ಕೂಡ ಈ ಕರಾವಳಿಯವರು ಕೊಡುವುದಿಲ್ಲ. ಬಹುಶ: ಹಾಗೆಂದು ಬಗೆದು ಕರ್ನಾಟಕ – ಕಾಸರಗೋಡು ಗಡಿ ಪ್ರವೇಶ ವಿಚಾರವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ರ ಬರೆದಿದ್ದಾರೆ. ಕೇರಳದಲ್ಲಿ ಆಸ್ಪತ್ರೆಗಳು ಇಲ್ಲವಾ? ನರ್ಸುಗಳ ತವರು ಕೇರಳದಲ್ಲಿ, ವೈದ್ಯರುಗಳು ಇಲ್ಲವಾ? ಎಲ್ಲ ಗೊತ್ತಿದ್ದೂ ಸ್ವಾರ್ಥಿ ದೇವೇಗೌಡರು ಕೇರಳವನ್ನು ಸಮರ್ಥಿಸಿಕೊಂಡಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಗೌಡರು ಪತ್ರ ಬರೆದಿದ್ದರು. ಕಾಸರಗೋಡುನಿಂದ ಮಂಗಳೂರಿಗೆ ಆಂಬುಲೆನ್ಸ್ ಮತ್ತು ಅಗತ್ಯ ಸಾಮಾಗ್ರಿಗಳ ಸಾಗಾಟ ಬಂದಾಗಿದ್ದು, ಕಾಸರಗೋಡಿನ ಕನ್ನಡಿಗರು ಅನೇಕರು ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದಾರೆ. ತುರ್ತು ಸನ್ನಿವೇಶದಲ್ಲಿ ರಾಜ್ಯ ಪ್ರವೇಶಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದೆ. ಆದರೆ ಕರ್ನಾಟಕ ಸರ್ಕಾರ ತಮ್ಮ ಮನವಿಯನ್ನು ನಿರಾಕರಿಸಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ತಾವು ಖಂಡಿಸುವುದಾಗಿ ಪತ್ರದಲ್ಲಿ ಹೇಳಿದ್ದಾರೆ.


Ad Widget

ಮೊದಲು ಪ್ರಧಾನಿಗಳೇ ಆಶ್ವಾಸನೆ ನೀಡಿದ್ದು, ಆಸ್ಪತ್ರೆ ಮತ್ತು ಅಗತ್ಯ ವಸ್ತುಗಳಿಗೆ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಅದೇ ಅಗತ್ಯ ವಸ್ತುಗಳಿಗೇ ತೊಂದರೆಯಾಗುತ್ತಿದೆ. ಕಾಸರಗೋಡು ಹಾಗೂ ಮಂಗಳೂರು ಗಡಿ ವಿಚಾರದ ಬಗ್ಗೆ ಪ್ರಧಾನಿಗಳ ಗಮನ ಸೆಳೆಯಲು ಅವರಿಗೂ ಪತ್ರ ಬರೆದು ಆಸ್ಪತ್ರೆ ಮತ್ತು ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುವು ಮಾಡಿ ಕೊಡಲು ಮನವಿ ಮಾಡುವುದಾಗಿ ಪಿಣರಾಯಿ ವಿಜಯನ್ ಗೆ ಪತ್ರದಲ್ಲಿ ದೇವೇಗೌಡ ತಿಳಿಸಿದ್ದಾರೆ.

ನೀವ್ಯಾವ ಸೀಮೆ ಮಣ್ಣಿನ ಮಗನೋ ? ಯಾವೂರ ಗೌಡರೋ ? ನೀವು ಕರ್ನಾಟಕದ ಗೌಡನಾ, ಅಥವಾ ಮಲೆಯಾಳಿ ಕುಟ್ಟಿಯಾ ?

error: Content is protected !!
Scroll to Top
%d bloggers like this: