ಪ್ರಾಣವನ್ನು ಪಂದ್ಯಕ್ಕೆಇಟ್ಟು ಶುಶ್ರೂಷೆ ಮಾಡುವ ವೈದ್ಯಕೀಯ ಸಿಬ್ಬಂದಿ ಮೇಲೆ ಉಗುಳುತ್ತಿರುವ ದೆಹಲಿ ಜಮಾತ್ ಕಾರ್ಯಕರ್ತರು !

ನವದೆಹಲಿ : ಇವರನ್ನು ಯಾವುದೇ ಕಾರಣಕ್ಕೂ ಮನುಷ್ಯರೆಂದು ಹೇಳಲು ಆಗುವುದಿಲ್ಲ. ಅವರು ಭಾಗವಹಿಸುವುದು ಧಾರ್ಮಿಕ ಕಾರ್ಯಕ್ರಮ ಅಂತೆ. ಯಾವ ಥರದ ಧಾರ್ಮಿಕ ಕಾರ್ಯಕ್ರಮ ಅದು ಅಂತ ಕೆಳಗಿನ ಘಟನೆ ಓದಿದಾಗ ನಮ್ಮೆಲ್ಲರ ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ. ಅಲ್ಲಿನ ಕೆಲ ಕಾರ್ಯಕರ್ತರ ನಡವಳಿಕೆ ನೋಡಿದಾಗ ನಮಗೆ ಈ ಪ್ರಶ್ನೆ ಮೂಡುವುದು ಸಹಜ.

ಅಲ್ಲಿ ತಮ್ಮ ಪ್ರಾಣವನ್ನು ಪಂದ್ಯಕ್ಕೆ ಇಟ್ಟು ವೈದ್ಯರು, ನರ್ಸುಗಳು, ಆಯಾಗಳು, ಆಂಬುಲೆನ್ಸ್ ಸಿಬ್ಬಂದಿ, ಮತ್ತಿತರ ಆಸ್ಪತ್ರೆಯ ಸಿಬ್ಬಂದಿ ಎಲ್ಲರೂ ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ಇಂತಹಾ ದೇವರ ಸ್ಥಾನದಲ್ಲಿಟ್ಟು ನೋಡಬೇಕಾದವರ ಮೇಲೆ ಕ್ವಾರಂಟೈನ್ ನಲ್ಲಿರುವ ಜಮಾತ್ ಕಾರ್ಯಕರ್ತರು ಉಗುಳುತ್ತಿರುವ ಘೋರ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯಲ್ಲಿರುವ ರೈಲ್ವೇ ಆಸ್ಪತ್ರೆಯ ಕ್ವಾರಂಟೈನ್ ವಿಭಾಗದಲ್ಲಿ ಕ್ವಾರಂಟೈನ್ ಗೃಹದಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಕಾರ್ಯಕರ್ತರನ್ನು ಅಲ್ಲಿನ ಸಿಬ್ಬಂದಿ ತಡೆದು ಸರಿಯಾಗಿ ವರ್ತಿಸಬೇಕೆಂದು ಕೇಳಿಕೊಂಡಿದ್ದರು. ಈ ಸಂದರ್ಭ ಸಿಬ್ಬಂದಿಗಳೊಂದಿಗೆ ಅವರು ವಾಗ್ವಾದ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಊಟದ ವಿಚಾರವಾಗಿ ಮತ್ತೆ ಕ್ಯಾತೆ ತೆಗೆದ ಕೆಲವು ವ್ಯಕ್ತಿಗಳು ವೈದ್ಯರು ಸಿಬ್ಬಂದಿಗಳ ಮೇಲೆ ಉಗುಳಿದ್ದಾರೆ ಎಂದು ಉತ್ತರ ರೈಲ್ವೆಯ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ. ಈ ಘಟನೆಯಿಂದ ವೈದ್ಯಕೀಯ ವೃಂದ ಭಯಗೊಂಡಿದ್ದು ಮಾತ್ರವಲ್ಲದೆ ಅಸಹನೆಗೊಂಡಿದ್ದಾರೆ. ಅದಕ್ಕಾಗಿ ಜಮಾತ್ ಕಾರ್ಯಕರ್ತರನ್ನು ಬೇರೆ ಸೂಕ್ತ ಸ್ಥಳಗಳಿಗೆ ರವಾನೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ. ಈಗ ಈ ಕ್ವಾರಂಟೈನ್ ಕೇಂದ್ರದಲ್ಲಿ ಒಟ್ಟು 167 ಜಮಾತ್ ಕಾರ್ಯಕರ್ತರನ್ನು ಇಡಲಾಗಿದೆ.

ಈ ವಿಚಾರ ತಲುಪುತ್ತಲೇ ಜಮಾತ್ ಕಾರ್ಯಕರ್ತರನ್ನು ಇಟ್ಟಿದ್ದ ಕ್ವಾರಂಟೈನ್ ಕೇಂದ್ರಕ್ಕೆ ಇಂದು ಸಂಜೆ 4 ಪೊಲೀಸ್ ಪೇದೆಗಳು, 6 ಶಸ್ತ್ರಸಜ್ಜಿತ ಸಿಆರ್ ಪಿಎಫ್ ಯೋಧರು, ಮತ್ತು ಪಿಸಿಆರ್ ವ್ಯಾನ್ ಅನ್ನು ಕರ್ತವ್ಯ ಪಾಲನೆಗೆ ನಿಯೋಜಿಸಲಾಗಿದೆ.

ಅದೂ ಅಲ್ಲದೆ, ಜಮಾತ್ ಕಾರ್ಯಕರ್ತರ ಆರೋಗ್ಯದ ಕಾಳಜಿ ವಹಿಸಿ, ಒಂದೊಮ್ಮೆ ಅವರಿಗೆ ಕೊರೋನಾ ತಗುಲಿದ್ದರೆ ಅಂತವರಿಗೆ ಉಚಿತ ಚಿಕಿತ್ಸೆ ನೀಡುವ ಸರಕಾರದ ತಂಡದ ಮೇಲೆ ಉಗುಳುವ ಇಂತವರನ್ನು ಮನುಷ್ಯರೆನ್ನಲು ಸಾಧ್ಯನಾ ? ನೀವೇ ನಿರ್ಧರಿಸಿ.

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

ಅನೈತಿಕ ಅನಿತಾಳ ಕತೆ ಕೇಳಿ

Leave A Reply

Your email address will not be published.